ಹೊಸದುರ್ಗ:
ಇಲ್ಲಿನ ಜೆಎಂಎಫ್‍ಸಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯಾ ಲೋಕ ಅದಾಲತ್‍ನಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 809 ಪ್ರಕರಣ ಪೈಕಿ 148 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಜಿ.ದಿನೇಶ್ ತಿಳಿಸಿದರು.
ಸಿವಿಲ್, ಕ್ರಿಮಿನಲ್ ಹಾಗೂ ಅಪಘಾತ ವಿಮೆಗೆ ಸಂಬಂಧಿಸಿದ ಈ ಪ್ರಕರಣಗಳು ಸಂಬಂಧಿಸಿ ದ್ದವು. ಬ್ಯಾಂಕ್ ರಿಕವರಿಗೆ ಸಮಬಂಧಿಸಿದ ವ್ಯಾಜ್ಯ ಪೂರ್ವ 397 ಪ್ರಕರಣಗಳಲ್ಲಿ 57 ಪ್ರಕರಣಗಳು ಮತ್ತು ಸಿವಿಲ್ ಸಂಬಂಧಿಸಿದ 412 ಪ್ರಕರಣಗಳಲ್ಲಿ 91 ಪ್ರಕರಣಗಳನ್ನು ವಿಲೇವಾರಿ ಮಾಡಲಾಯಿತು ಎಂದು ತಿಳಿಸಿದರು.
ಸಿವಿಲ್ ನ್ಯಾಯಾಧೀಶರಾದ ಪ್ರಶಾಂತ್ ನಾಗಲಾಪೂರ, ಗಂಗಾಧರ್ ಬಡಿಗೇರ್, ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಕಲ್ಮಠ್, ಸರ್ಕಾರಿ ಅಭಿಯೋಜಕ ಪ್ರಶಾಂತ್ ಕುಮಾರ್, ಕಾರ್ಯದರ್ಶಿ, ಟಿ ರಮೇಶ್, ವಕೀಲ ಗುರುಬಸಪ್ಪ, ಮತ್ತು ನ್ಯಾಯಾಲಯದ ಸಿಬ್ಬಂದಿ ನಾಗರಾಜ್ ಮತ್ತಿತರು ಇದ್ದರು.