ಚಿತ್ರದುರ್ಗ
ರಾಜ್ಯದಲ್ಲಿ ಮಧ್ಯಪಾನವನ್ನು ನಿಷೇಧ ಮಾಡುವಂತೆ ಆಗ್ರಹಿಸಿ ನಿನ್ನೆಯಿಂದ ಚಿತ್ರದುರ್ಗದಿಂದ ಪ್ರಾರಂಭವಾಗಿರುವ ಮಹಿಳೆಯರ ಪಾದಯಾತ್ರೆ ಎರಡನೇ ದಿನವಾದ ಇಂದು ಸಹಾ ಮುಂದುವರೆದಿದೆ.
ನಿನ್ನೆ ಮದ್ಯಾಹ್ನ ಚಿತ್ರದುರ್ಗದಿಂದ ಪ್ರರಾಂಭವಾದ ಪಾದಯಾತ್ರೆ ರಾತ್ರಿ ಕ್ಯಾದಿಗೆರೆ ಬಳಿ ವಾಸ್ತವ್ಯ ಮಾಡಿತು, ಇಂದು ಬಳಿಗ್ಗೆ 8 ಗಂಟಗೆ ಮರಡಿಹಳ್ಳಿಯ ವಿನಾಯಕ ದೇವಾಲಯದಿಂದ ಮತ್ತೇ ಪ್ರಾರಂಭವಾದ ಪಾದಯಾತ್ರೆ ಜ. 20ರಂದು ಹೂಸೂರು ಬಳಿ ವಾಸ್ತವ್ಯ ಮಾಡಿದೆ. ಈ ಸಂದರ್ಭದಲ್ಲಿ ಐಮಂಗಲ ಗ್ರಾಮಸ್ಥರು ಮತ್ತು ರೈತ ಮುಖಂಡ ಲಕ್ಷ್ಮೀಕಾಂತ್, ಪಾಪಣ್ಣ, ಅಂಜನಪ್ಪ, ಮಂಜುನಾಥ್, ತಿಪ್ಪೇಸ್ವಾಮಿ, ಚಿತ್ರದುರ್ಗ ತಾ.ಪಂ.ಮಾಜಿ ಅಧ್ಯಕ್ಷ ತಿಪ್ಪೀರಯ್ಯ, ಜಿ.ಪಂ.ಮಾಜಿ ಸದಸ್ಯ ಕಾಂತರಾಜ್ ಭಾಗವಹಿಸಿದ್ದರು.
ಐಮಂಗಲದ ಬಳಿ ಹರಳಯ್ಯ ಸ್ವಾಮೀಜಿಯವರ ಪಾದಯಾತ್ರೆಗೆ ಸಾಥ್ ನೀಡಿ ತವು ಸಹಾ ಭಾಗವಹಿಸುವುದರ ಮೂಲಕ ಮಹಿಳೆಯರಿಗೆ ಬೆಂಬಲ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಸರ್ಕಾರ ಮದ್ಯವನ್ನು ಮಾರಾಟ ಮಾಡಿವುದರ ಮೂಲಕ ಸರ್ಕಾರವನ್ನು ನಡೆಸುವುದು ಬೇಡ ಇದರಿಂದ ಲಕ್ಷಾಂತರ ಜನತೆಯ ಜೀವನ ಹಾಳಾಗುತ್ತಿದೆ, ಅಲ್ಲದೆ ಸಾವಿರಾರು ಕುಟುಂಬಗಳು ಇದರ ಅಡಿಯಲ್ಲಿ ಸಿಕ್ಕಿ ನಾಶವಾಗುತ್ತಿದೆ ಇದರಿಂದ ಸರ್ಕಾರ ಇದರ ನಿಷೇಧಕ್ಕೆ ಮುಂದಾಗಬೇಕಿದೆ ಎಂದು ಒತ್ತಾಯಿಸಿದ್ಧಾರೆ.ಈ ಸಂದರ್ಭದಲ್ಲಿ ನರೇನಹಳ್ಳಿ ಅರುಣ್ ಕುಮಾರ್, ತಿಪ್ಪಮ್ಮ, ಬೇಬಿಜಾನ್, ನಿಂಗೇಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ