ತಿಪಟೂರು
ಪ್ರಪಂಚದ ತುಂಬಾ ಹರಡುತ್ತಿರುವ ಕಿಲ್ಲರ್ ಕೊರೋನಾ ಬಗ್ಗೆ ಹಲವಾರು ರೀತಿ ಜಾಗೃತಿ ಮೂಡಿಸುತ್ತಿದ್ದರೂ ಎಚ್ಚೆತ್ತುಕೊಳ್ಳದ ಕೆಲವು ನಾಗರಿಕರನ್ನು ಎಚ್ಚರಿಸುವ ಸಲುವಾಗಿ ನಗರದ ಸಿಂಗ್ರಿ ನಂಜಪ್ಪ ವೃತ್ತ ಮತ್ತು ಕೋಡಿ ಸರ್ಕಲ್ ವೃತ್ತದಲ್ಲಿ ಬಣ್ಣದ ಚಿತ್ತಾರದ ಮೂಲಕ ಎಚ್ಚರಿಸುವ ಕೆಲಸವನ್ನು ಮಾಡಿದ ಕಲ್ಪತರು ನಾಮಫಲಕ ಕಲಾವಿದರನ್ನು ನಾಗರಿಕರು ಅಭಿನಂದಿಸಿದ್ದಾರೆ.
ಕಲ್ಪತರು ನಾಮಫಲಕ ಕಲಾವಿದರ ಸಂಘದ ಸುಮಾರು 15-20 ಸದಸ್ಯರು ಶುಕ್ರವಾರ ಬೆಳಗ್ಗೆಯಿಂದಲೆ ತಮ್ಮ ಕೆಲಸವನ್ನು ಪ್ರಾರಂಭಿಸಿ, ಮಧ್ಯಾಹ್ನದ ಹೊತ್ತಿಗೆ ಸುಂದರವಾದ ಚಿತ್ರ ಬರೆದು ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ