ಪಾಲಿಕೆ: ನಿರೀಕ್ಷಿಸಿದ್ದು 110 ಕೋಟಿ, ಬಂದಿದ್ದು 62 ಕೋಟಿ ಮಾತ್ರ!

ತುಮಕೂರು

     ತುಮಕೂರು ಮಹಾನಗರ ಪಾಲಿಕೆಯ ಕಳೆದ ವರ್ಷದ ಅಂದರೆ 2018-19 ನೇ ಸಾಲಿನ ಬಜೆಟ್‍ನಲ್ಲಿ ಸರ್ಕಾರಿ ಅನುದಾನಗಳಿಂದ ನಿರೀಕ್ಷಿಸಿದ್ದು ಒಟ್ಟು 110 ಕೋಟಿ 42 ಲಕ್ಷ 62 ಸಾವಿರ ರೂ.ಗಳನ್ನು. ಆದರೆ ಆ ಸಾಲಿನಲ್ಲಿ -2019 ರ ಮಾರ್ಚ್ 31ರವರೆಗೆ-ಪಾಲಿಕೆಗೆ ಲಭಿಸಿರುವ ಸರ್ಕಾರಿ ಅನುದಾನಗಳ ಒಟ್ಟು ಮೊತ್ತ ಕೇವಲ 62 ಕೋಟಿ 37 ಲಕ್ಷ 45 ಸಾವಿರ ರೂ. ಮಾತ್ರ ಎಂಬ ಚರ್ಚಾಸ್ಪದ ಮಾಹಿತಿ ಬೆಳಕಿಗೆ ಬಂದಿದೆ.

       ಕಳೆದ ವರ್ಷದ ಬಜೆಟ್‍ನಲ್ಲಿ ಒಟ್ಟು 23 ಅಂಶಗಳಿಂದ ಒಟ್ಟು 110 ಕೋಟಿ 42 ಲಕ್ಷ ರೂ.ಗಳನ್ನು ಪಾಲಿಕೆಯು ನಿರೀಕ್ಷಿಸಿತ್ತು. ಆದರೆ ಕೆಲವು ಅಂಶಗಳನ್ನು ಹೊರತುಪಡಿಸಿ ಮಿಕ್ಕ ಅಂಶಗಳಲ್ಲಿ ನಿರೀಕ್ಷಿತ ಅನುದಾನ ಲಭಿಸಿಲ್ಲ. ಮತ್ತೂ ವಿಚಿತ್ರವೆಂದರೆ 23 ಅಂಶಗಳ ಪೈಕಿ 13 ಅಂಶಗಳಲ್ಲಿ ಸರ್ಕಾರದಿಂದ ನಯಾ ಪೈಸೆಯೂ ಲಭಿಸಿಲ್ಲ. `ಶೂನ್ಯ’ ಅನುದಾನವಷ್ಟೇ ಎಂಬುದು ಗಂಭೀರವಾಗಿ ಚರ್ಚಿಸಬೇಕಾದ ವಿಷಯವಾಗಿದೆ.

ನಿರೀಕ್ಷೆ- ಲಭ್ಯತೆ ಎಷ್ಟು?

      1)ವೇತನ ಅನುದಾನದಲ್ಲಿ 10 ಕೋಟಿ 39 ಲಕ್ಷ ರೂ ನಿರೀಕ್ಷಿಸಿದ್ದು, ಅದಕ್ಕಿಂತ ಹೆಚ್ಚಾಗಿ ಅಂದರೆ 12 ಕೋಟಿ 77 ಲಕ್ಷ 75 ಸಾವಿರ ರೂ. ಲಭಿಸಿದೆ. 2)ಎಸ್.ಎï.ಸಿ. ಮುಕ್ತ ಅನುದಾನದಲ್ಲಿ 10 ಕೋಟಿ 53 ಲಕ್ಷ ರೂ. ನಿರೀಕ್ಷಿಸಿದ್ದು, 7 ಕೋಟಿ 95 ಲಕ್ಷ 20 ಸಾವಿರ ರೂ. ದೊರೆತಿದೆ. 3)ಎಸ್.ಎï.ಸಿ. ವಿದ್ಯುತ್ ಶುಲ್ಕ ಅನುದಾನದಲ್ಲಿ 16 ಕೋಟಿ 72 ಲಕ್ಷ ರೂ. ನಿರೀಕ್ಷಿಸಿದ್ದು, ಅಷ್ಟೂ ಮೊತ್ತ ಲಭಿಸಿದೆ. 4)ಅಮೃತ್ ಸಿಟಿ ಯೋಜನೆಯಲ್ಲಿ 7 ಕೋಟಿ ರೂ. ನಿರೀಕ್ಷಿಸಿದ್ದು, 1 ಕೋಟಿ 78 ಲಕ್ಷ 31 ಸಾವಿರ ರೂ. ಲಭಿಸಿದೆ. 5)ಡೇ-ನಲ್ಮ್ ಯೋಜನೆಯಲ್ಲಿ 95 ಲಕ್ಷ ರೂ ನಿರೀಕ್ಷಿಸಿದ್ದು, ಕೇವಲ 27 ಲಕ್ಷ 72 ಸಾವಿರ ರೂ. ಲಭಿಸಿದೆ. 6)14 ನೇ ಹಣಕಾಸು ಯೋಜನೆಯಲ್ಲಿ 14 ಕೋಟಿ 68 ಲಕ್ಷ ರೂ. ನಿರೀಕ್ಷಿಸಿದ್ದು, 11 ಕೋಟಿ 70 ಲಕ್ಷ ರೂ. ಲಭಿಸಿದೆ. 7)ಲೋಕಸಭಾ ಸದಸ್ಯರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರುಗಳ ಅನುದಾನದಲ್ಲಿ 1 ಕೋಟಿ 20 ಲಕ್ಷ ರೂ. ನಿರೀಕ್ಷಿಸಿದ್ದು, 59 ಲಕ್ಷ 59 ಸಾವಿರ ರೂ. ಸಂದಾಯವಾಗಿದೆ. 8)ಸರ್ಕಾರದಿಂದ ನಗರೋತ್ಥಾನ ವಿಶೇಷ ಅನುದಾನ-25 ಕೋಟಿ ಅನುದಾನದಲ್ಲಿ ಏನನ್ನೂ ನಿರೀಕ್ಷಿಸಿರಲಿಲ್ಲವಾದರೂ, 36 ಲಕ್ಷ 27 ಸಾವಿರ ರೂ. ಲಭಿಸಿದೆ. 9)ಸರ್ಕಾರದಿಂದ ನಗರೋತ್ಥಾನ ವಿಶೇಷ ಅನುದಾನ-100 ಕೋಟಿ -3 ನೇ ಹಂತದ ಯೋಜನೆಯಲ್ಲಿ 7 ಕೋಟಿ ರೂ. ನಿರೀಕ್ಷಿಸಿದ್ದು, 7 ಕೋಟಿ 68 ಲಕ್ಷ 63 ಸಾವಿರ ರೂ. ಲಭಿಸಿದೆ. 10)ಪ್ರಕೃತಿ ವಿಕೋಪ/ಬರಪರಿಹಾರ/ಇತರೆ ಅನುದಾನದಲ್ಲಿ 1 ಕೋಟಿ ರೂ. ನಿರೀಕ್ಷಿಸಿದ್ದು, 2 ಕೋಟಿ 51 ಲಕ್ಷ 67 ಸಾವಿರ ರೂ. ಲಭಿಸಿದೆ. ಕಳೆದ ವರ್ಷ ಹೀಗೆ ಕೆಲವು ಅಂಶಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಮತ್ತು ಕೆಲವು ಅಂಶಗಳಲ್ಲಿ ನಿರೀಕ್ಷೆ ಮೀರಿ ಅನುದಾನಗಳು ಸರ್ಕಾರದಿಂದ ಪಾಲಿಕೆಗೆ ದೊರೆತಿದೆ.

`ಶೂನ್ಯ’ ಅನುದಾನ! ಕಳೆದ ವರ್ಷದ ಬಜೆಟ್‍ನಲ್ಲಿ 13 ಅಂಶಗಳಲ್ಲಿ ಅನುದಾನ `ಶೂನ್ಯ’ವಾಗಿದೆ.ವಿವರ ಈ ಕೆಳಕಂಡಂತಿದೆ:-

      1)ಎಸ್.ಎï.ಸಿ. ಅನುದಾನ-ವಿಶೇಷ ಯೋಜನೆಯಲ್ಲಿ 3 ಕೋಟಿ ರೂ. ನಿರೀಕ್ಷಿಸಲಾಗಿತ್ತು. 2)ವೆಚ್ಚಗಳ ಮರು ಭರಿಸುವಿಕೆಗಾಗಿ ಸ್ವೀಕೃತ ಅನುದಾನಗಳು-ಇತರೆ ವಿಭಾಗದಲ್ಲಿ 5 ಲಕ್ಷ ರೂ. ನಿರೀಕ್ಷಿಸಲಾಗಿತ್ತು. 3)ಸ್ವಚ್ಛ ಭಾರತ್ ಮಿಷನ್-ವೈಯಕ್ತಿಕ ಶೌಚಾಲಯಗಳಿಗಾಗಿ 80 ಲಕ್ಷ ರೂ.ಗಳನ್ನು ನಿರೀಕ್ಷಿಸಿತ್ತು. 4)ಸ್ವಚ್ಛ ಭಾರತ್ ಮಿಷನ್- ಐ.ಇ.ಸಿ. ಕಾರ್ಯಕ್ರಮಗಳಿಗಾಗಿ 20 ಲಕ್ಷ ರೂ. ನಿರೀಕ್ಷಿಸಲಾಗಿತ್ತು. 5)ಸ್ವಚ್ಛ ಭಾರತ್ ಮಿಷನ್- ಸಾಮರ್ಥ್ಯ ವೃದ್ಧಿಗಾಗಿ 5 ಲಕ್ಷ ರೂ.ಗಳನ್ನು ನಿರೀಕ್ಷಿಸಲಾಗಿತ್ತು. 6)ಸ್ವಚ್ಛ ಭಾರತ್ ಮಿಷನ್-ತ್ಯಾಜ್ಯ ಸಂಸ್ಕರಣೆಗಾಘಿ 3 ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿತ್ತು. 7)ರೇ ಯೋಜನೆಯಡಿ 20 ಲಕ್ಷ ರೂ. ನಿರೀಕ್ಷಿಸಲಾಗಿತ್ತು. 8)ಹೌಸಿಂಗ್ ಫಾರ್ ಆಲ್ ಗ್ರಾಂಟ್‍ನಲ್ಲಿ 5 ಲಕ್ಷ ರೂ.ಗಳನ್ನು ನಿರೀಕ್ಷಿಸಲಾಗಿತ್ತು. 9)ಸರ್ಕಾರದಿಂದ ನಗರೋತ್ಥಾನ ವಿಶೇಷ ಅನುದಾನ-125 ಕೋಟಿ- 4 ನೇ ಹಂತದ ಯೋಜನೆಯಲ್ಲಿ 20 ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿತ್ತು. 10)ಸರ್ಕಾರದಿಂದ ವಿಶೇಷ ಅನುದಾನ (ಎಸ್.ಡಬ್ಲುೃ.ಎಂ. ಗ್ರಾಂಟ್)ವಾಗಿ 3 ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿತ್ತು. 11)ಸರ್ಕಾರದಿಂದ ವಿಶೇಷ ಅನುದಾನ (ಇಂದಿರಾ ಕ್ಯಾಂಟೀನ್)ವಾಗಿ 4 ಕೋಟಿ 16 ಲಕ್ಷ 10 ಸಾವಿರ ರೂ.ಗಳನ್ನು ನಿರೀಕ್ಷಿಸಲಾಗಿತ್ತು. 12)ಸರ್ಕಾರದಿಂದ ವಿಶೇಷ ಅನುದಾನ (ಕೆ.ಯು.ಐ.ಡಿ.ಎï.ಸಿ. ಸಾಲದ ಮರುಪಾವತಿ)ವಾಗಿ 5 ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿತ್ತು. 13)ಪೌರಕಾರ್ಮಿಕರಿಗೆ 52 ಮನೆಗಳ ನಿರ್ಮಾಣಕ್ಕಾಗಿ 1 ಕೋಟಿ 44 ಲಕ್ಷ 52 ಸಾವಿರ ರೂ. ನಿರೀಕ್ಷಿಸಲಾಗಿತ್ತು. ಈ ಅಂಶಗಳಲ್ಲಿ ನಯಾಪೈಸೆಯೂ ಲಭಿಸಿಲ್ಲ.

ಪಾಲಿಕೆ ತೆರಿಗೆ ಸಂಗ್ರಹ:ಗುರಿ ತಲುಪಲಾಗಿಲ್ಲವೇಕೆ?

        ಇನ್ನು ಕಳೆದ ವರ್ಷದ ಬಜೆಟ್‍ನಲ್ಲಿ ಪಾಲಿಕೆ ವ್ಯಾಪ್ತಿಯ ಕಂದಾಯ/ಶುಲ್ಕ/ತೆರಿಗೆ ಇತ್ಯಾದಿ 28 ವಿವಿಧ ಅಂಶಗಳಿಂದ ಒಟ್ಟು 57 ಕೋಟಿ 68 ಲಕ್ಷ 95 ಸಾವಿರ ರೂ. ಆದಾಯವನ್ನು ನಿರೀಕ್ಷಿಸಲಾಗಿತ್ತು. ಆದರೆ ಕಳೆದ ಸಾಲಿನಲ್ಲಿ ಸಂಗ್ರಹವಾಗಿರುವ ಮೊತ್ತ 41 ಕೋಟಿ 99 ಲಕ್ಷ 20 ಸಾವಿರ ರೂ.ಗಳು ಮಾತ್ರ. “ಪಾಲಿಕೆಯ ಸ್ವಾವಲಂಬನೆಗೆ ತೆರಿಗೆ ಸಂಗ್ರಹವೇ ಆಧಾರ. ವಾಸ್ತವ ಹೀಗಿರುವಾಗ ನಿರೀಕ್ಷೆಯ ಹಂತವನ್ನು ತಲುಪಲು ಏಕೆ ಸಾಧ್ಯವಾಗಲಿಲ್ಲ?” ಎಂಬುದೂ ಚರ್ಚೆಗೆಡೆಮಾಡಿದೆ.

        ಕಟ್ಟಡಗಳ/ಭೂಮಿ ಮೇಲಿನ ಆಸ್ತಿ ತೆರಿಗೆಯಿಂದ 28 ಕೋಟಿ ನಿರೀಕ್ಷಿಸಲಾಗಿದ್ದರೂ, ಸಂಗ್ರಹವಾಗಿದ್ದು 19 ಕೋಟಿ 27 ಲಕ್ಷ 29 ಸಾವಿರ ರೂ. ಮಾತ್ರ. ಆದರೆ ಆಸ್ತಿ ತೆರಿಗೆ ಮೇಲಿನ ದಂಡದಿಂದ ಮಾತ್ರ 2 ಕೋಟಿ 50 ಲಕ್ಷದ ಬದಲಿಗೆ 3 ಕೋಟಿ 11 ಲಕ್ಷ 67 ಸಾವಿರ ರೂ. ಸಂಗ್ರಹಗೊಂಡಿದೆ. ಆಸ್ತಿ ನಕಲಿನಿಂದ 1 ಲಕ್ಷ ರೂ. ನಿರೀಕ್ಷಿಸಿದ್ದು, 37 ಸಾವಿರ ರೂ. ಮಾತ್ರ ಸಂಗ್ರಹವಾಗಿದೆ. ಆಸ್ತಿ ಹಕ್ಕು ಬದಲಾವಣೆಯಿಂದ 60 ಲಕ್ಷ ರೂ. ನಿರೀಕ್ಷಿಸಿದ್ದು, ಅದಕ್ಕಿಂತ ಹೆಚ್ಚಾಗಿ ಅಂದರೆ 65 ಲಕ್ಷ 95 ಸಾವಿರ ರೂ ಸಂಗ್ರಹಗೊಂಡಿದೆ.

       ಘನತ್ಯಾಜ್ಯ ನಿರ್ವಹಣೆ ಉಪಕರದಿಂದ 2 ಕೋಟಿ 50 ಲಕ್ಷ ರೂ. ನಿರೀಕ್ಷಿಸಿದ್ದು, 1 ಕೋಟಿ 59 ಲಕ್ಷ 52 ಸಾವಿರ ರೂ. ಸಂಗ್ರಹವಾಗಿದೆ. ಜಾಹಿರಾತು ತೆರಿಗೆಯಿಂದ 28 ಲಕ್ಷ ರೂ. ನಿರೀಕ್ಷಿಸಲಾಗಿತ್ತಾದರೂ, ಕೇವಲ 11 ಲಕ್ಷ 95 ಸಾವಿರ ರೂ. ಮಾತ್ರ ಲಭಿಸಿದೆ. ಉದ್ದಿಮೆಗಳ ಪರವಾನಗಿ ಶುಲ್ಕದಿಂದ 1 ಕೋಟಿ 25 ಲಕ್ಷ ರೂ. ನಿರೀಕ್ಷಿಸಿದ್ದು, ಅದನ್ನು ಮೀರಿ 1 ಕೋಟಿ 26 ಲಕ್ಷ 81 ಸಾವಿರ ರೂ. ಸಂಗ್ರಹಗೊಂಡಿದೆ. ಕಟ್ಟಡಗಳ ಪರವಾನಗಿ ಶುಲ್ಕವಾಗಿ 1 ಕೋಟಿ 60 ಲಕ್ಷ ರೂ. ನಿರೀಕ್ಷಿಸಿದ್ದು, 82 ಲಕ್ಷ 3 ಸಾವಿರ ರೂ. ಸಂಗ್ರಹಗೊಂಡಿದೆ.

        ಕುಡಿಯುವ ನೀರಿನ ಶುಲ್ಕವಾಗಿ 11 ಕೋಟಿ 50 ಲಕ್ಷ ರೂ. ನಿರೀಕ್ಷಿಸಿದ್ದು, ಕೇವಲ 6 ಕೋಟಿ 52 ಲಕ್ಷ 59 ಸಾವಿರ ರೂ. ಸಂಗ್ರಹವಾಗಿದೆ. ಹೊಸ ನಲ್ಲಿ ಜೋಡಣೆ ಶುಲ್ಕವಾಗಿ 1 ಕೋಟಿ ರೂ. ನಿರೀಕ್ಷಿಸಿದ್ದು, 27 ಲಕ್ಷ 88 ಸಾವಿರ ರೂ. ಸಂಗ್ರಹವಾಗಿದೆ. ಅನಧಿಕೃತ ನಲ್ಲಿಗಳ ಸಕ್ರಮೀಕರಣದಿಂದ 5 ಲಕ್ಷ ನಿರೀಕ್ಷಿಸಲಾಗಿತ್ತಾದರೂ, ಅದನ್ನು ಮೀರಿ 11 ಲಕ್ಷ 92 ಸಾವಿರ ರೂ. ಸಂಗ್ರಹಗೊಂಡಿದೆ. ಒಳಚರಂಡಿ ಶುಲ್ಕಗಳಿಂದ 1 ಕೋಟಿ 25 ಲಕ್ಷ ರೂ. ನಿರೀಕ್ಷಿಸಿದ್ದು, 51 ಲಕ್ಷ 20 ಸಾವಿರ ರೂ. ಸಂಗ್ರಹವಾಗಿದೆ. ಒಳಚರಂಡಿ ಹೊಸ ಸಂಪರ್ಕದಿಂದ 1 ಕೋಟಿ ರೂ. ನಿರೀಕ್ಷಿಸಿದ್ದು, 90 ಲಕ್ಷ 55 ಸಾವಿರ ರೂ. ಸಂಗ್ರಹಗೊಂಡಿದೆ. ಅನಧಿಕೃತ ಒಳಚರಂಡಿಗಳ ಸಕ್ರಮೀಕರಣದಿಂದ 1 ಲಕ್ಷ ರೂ. ನಿರೀಕ್ಷಿಸಿದ್ದು, ಅದನ್ನು ಮೀರಿ 2 ಲಕ್ಷ 40 ಸಾವಿರ ರೂ. ಸಂಗ್ರಹವಾಗಿದೆ.

       ಬಸ್ ನಿಲ್ದಾಣ ಮತ್ತು ಶಿರಾಗೇಟ್ ಅಂಗಡಿ ಮಳಿಗೆಗಳ ಬಾಡಿಗೆಯಿಂದ 2 ಕೋಟಿ 49 ಲಕ್ಷ ರೂ. ನಿರೀಕ್ಷಿಸಿದ್ದು, ಕೇವಲ 70 ಲಕ್ಷ 2 ಸಾವಿರ ರೂ. ಸಂಗ್ರಹವಾಗಿದೆ. ರಸ್ತೆ ಕಟಿಂಗ್ ಶುಲ್ಕದಿಂದ 50 ಲಕ್ಷ ರೂಗಳನ್ನು ನಿರೀಕ್ಷಿಸಿದ್ದು, ಅದಕ್ಕಿಂತ ಮಿಗಿಲಾಗಿ 3 ಕೋಟಿ 59 ಲಕ್ಷ 87 ಸಾವಿರ ರೂ. ಸಂಗ್ರಹಗೊಂಡಿದೆ. ಮಾರುಕಟ್ಟೆ ಶುಲ್ಕದಿಂದ 5 ಲಕ್ಷ ರೂ. ನಿರೀಕ್ಷಿಸಲಾಗಿದ್ದರೂ, ನಯಾಪೈಸೆಯೂ ಸಂಗ್ರಹವಾಗಿಲ್ಲ. ಹೀಗೆ ವಿವಿಧ ರೀತಿಯ 28 ಅಂಶಗಳಲ್ಲಿ ಹೆಚ್ಚು-ಕಡಿಮೆ ತೆರಿಗೆ ಸಂಗ್ರಹವಾಗಿದೆ. ಆದರೆ ನಿರೀಕ್ಷಿತ ಸಾಧನೆಯನ್ನು ಮಾಡಲು ಸಾಧ್ಯವಾಗಿಲ್ಲ.

ಜನಪ್ರತಿನಿಧಿಗಳ ಜವಾಬ್ದಾರಿ

          ಪಾಲಿಕೆಯಲ್ಲಿ ಚುನಾಯಿತ ಮಂಡಲಿ ಇದೆ. 35 ವಾರ್ಡ್‍ಗಳಿಂದ ಆಯ್ಕೆಯಾಗಿ ಬಂದಿರುವ ಜನಪ್ರತಿನಿಧಿಗಳಿದ್ದಾರೆ. ಪಾಲಿಕೆಯನ್ನು ಮುನ್ನಡೆಸುವ ಹೊಣೆ ಹೊತ್ತುಕೊಂಡಿದ್ದಾರೆ. ಸರ್ಕಾರದಿಂದ ಬರಬೇಕಾದ ಅನುದಾನಗಳು ಬಾರದಿರುವ ಬಗ್ಗೆ, ಕಡಿಮೆ ಬಂದಿರುವ ಬಗ್ಗೆ ಗಮನಿಸಿ ಸರ್ಕಾರದಿಂದ ಎಲ್ಲ ಅನುದಾನಗಳೂ ಸಮರ್ಪಕವಾಗಿ ಬರುವಂತೆ ಮಾಡಲು ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ/ಕಂದಾಯಗಳ ಗರಿಷ್ಟ ಸಂಗ್ರಹಣೆಗೆ ಸಂಬಂಧಿಸಿದಂತೆ ಹೇಗೆ ಹೆಜ್ಜೆ ಇಡುವರೆಂಬುದರ ಮೇಲೆ ಪಾಲಿಕೆಯ ಅಂದರೆ ನಗರದ ಭವಿಷ್ಯ ಅಡಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link