ಸಾಹಸಿ ಚಾಂಪಿಯನ್ ಶಿಫ್ ಸ್ಪರ್ಧೆಗೆ ಚಾಲನೆ ನೀಡಲಿರುವ ಡಾ.ಜಿ.ಪರಮೇಶ್ವರ್

ಬೆಂಗಳೂರು

      ನಗರದ ವೈಎಂಸಿಎ ಮೈದಾನದಲ್ಲಿ ನಿರ್ಮಿಸಿರುವ ನೂತನ ಕ್ಲೈಂಬಿಂಗ್ ವಾಲ್‍ನಲ್ಲಿ ಇದೇ ತಿಂಗಳ 27ರಿಂದ ನಾಲ್ಕು ದಿನಗಳ ಕಾಲ ಪ್ರಸಕ್ತ ಸಾಲಿನ 24ನೇ ರಾಷ್ಟ್ರೀಯ ಕ್ರೀಡಾರೋಹಣ ಅಂಗವಾಗಿ `ಸಾಹಸಿ ಚಾಂಪಿಯನ್ ಶಿಫ್ ಸ್ಪರ್ಧೆ ನಡೆಯಲಿದೆ

       ನಾಲ್ಕು ದಿನಗಳ ಕ್ರೀಡಾಕೂಟಕ್ಕೆ ಜ,27ರ ಸಂಜೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಚಾಲನೆ ನೀಡಲಿದ್ದು ಸಾಹಸಿ ಚಾಂಪಿಯನ್ ಶಿಫ್ ಸ್ಪರ್ಧೆ’ಯಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಿಗಳಿಗೆ 3 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್ ತಿಳಿಸಿದರು.ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ ಕ್ರೀಡಾಕೂಟದಲ್ಲಿ ರಾಜ್ಯದಿಂದ 40ಕ್ಕೂ ಅಧಿಕ ಕ್ರೀಡಾಪಟುಗಳು ಪ್ರತಿನಿಧಿಸುತ್ತಿದ್ದು, ದೇಶದ ದಕ್ಷಿಣ, ಉತ್ತರ, ಪೂರ್ವ ಸೇರಿದಂತೆ ಏಳು ವಲಯಗಳಿಂದ ಸ್ಪರ್ಧಿಸಿ, ಅರ್ಹತೆಯನ್ನು ಗಳಿಸಿ ಈ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇನ್ನೂ, 10 ವರ್ಷ ಮೇಲ್ಪಟ್ಟ ಯುವಕ, ಯುವತಿಯರು ಸೇರಿದಂತೆ ಕ್ರೀಡೆಯ ಮೂರು ವಿಭಾಗಗಳಾದ ಲೀಡ್, ಸ್ಪೀಡ್ ಹಾಗೂ ಬೌಲ್ಡರಿಂಗ್ ವಿಭಾಗಗಳಲ್ಲಿ ತಮ್ಮ ವಲಯವನ್ನು ಪ್ರತಿನಿಧಿಸುತ್ತಾರೆ ಎಂದು ಹೇಳಿದರು.

       ಈಗಾಗಲೇ ಅಕಾಡೆಮಿಯಿಂದ ಅನೇಕ ಕ್ರೀಡಾ ಸ್ಪರ್ಧೆಗಳನ್ನು ನಡೆಸಿದ್ದು, ಅವುಗಳಲ್ಲಿ ಮುಖ್ಯವಾಗಿ 2016ರಲ್ಲಿ 22ನೇ ರಾಷ್ಟ್ರೀಯ ಕ್ರೀಡಾರೋಹಣ ಸ್ಪರ್ಧೆ ಹಾಗೂ ಉಡುಪಿ ಉತ್ಸವ, ಚಿಕ್ಕಬಳ್ಳಾಪುರ ದಶಮಾನೋತ್ಸವ ಹಾಗೂ ಬೆಂಗಳೂರು ಬೌಲ್ಡರಿಂಗ್ ಚಾಂಪಿಯನ್ ಶಿಪ್ ಮುಖ್ಯವಾದದ್ದು ಎಂದರು.

         ಈ ಬಾರಿ ಮಕ್ಕಳಿಗಾಗಿ ವಿಶೇಷ ಬೇಸಿಗೆ ತರಬೇತಿ ಶಿಬಿರ, ಎಸ್‍ಸಿಪಿ, ಟಿಎಸ್‍ಪಿ ಯೋಜನೆ ಅಡಿ ವೈಟ್ ವಾಟರ್ ಕಯಾಕಿಂಗ್ ಲೆವೆಲ್ ತರಬೇತಿ ಹಮ್ಮಿಕೊಳ್ಳಲಾಗಿದೆಎಂದ ಅವರು, ಮುಂದಿನ 2020ರ ಸಾಲಿನಲ್ಲಿ ಜಪಾನಿನ ಟೋಕಿಯೋ ನಗರದಲ್ಲಿ ಏರ್ಪಡಿಸಿರುವ ಒಲಂಪಿಕ್ ಕ್ರೀಡಾಕೂಟದಲ್ಲೂ ಭಾಗವಹಿಸಲು ಈ ಕ್ರೀಡಾರೋಹಣ ಸಹಕಾರಿ ಆಗಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಕೆ.ಶ್ರೀನಿವಾಸ್ ಅವರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link