ಪೂರ್ವಜನ್ಮದ ಪುಣ್ಯ  ಜೊತೆಗೆ ತಾಯಿ-ತಂದೆಗಳ ಆಶೀರ್ವಾದದಿಂದ : ಸಣ್ಣಮುದ್ದಯ್ಯ

ಕೊರಟಗೆರೆ 
          ಸರ್ಕಾರಿ ನೌಕರರು ಸಾರ್ವಜನಿಕರಿಗೆ ಸ್ಪಂದಿಸಿದರೆ ಅನುದಿನ ನೆನೆಯುತ್ತಾರೆ. ಅದನ್ನು ಹೊರತುಪಡಿಸಿ ಸರ್ಕಾರಿ ನೌಕರರೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಾರ್ವಜನಿಕರ ಅಭಿವೃದ್ದಿ ಕೆಲಸಗಳಿಗೆ ನೌಕರರು ರಾಜಕಾರಣಿಗಳೊಂದಿಗೆ ಬೆರೆಯಬೇಕು.  ಆದರೆ ರಾಜಕಾರಣದಲ್ಲಿ ತೊಡಗಿಸಿಕೊಳ್ಳಬಾರದು ಎಂದು  ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಸಣ್ಣಮುದ್ದಯ್ಯ ನೌಕರರಿಗೆ ಕಿವಿಮಾತು ಹೇಳಿದರು.
     
           ಅವರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಮುದಾಯ ಭವನದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘ ಏರ್ಪಡಿಸಿದ್ದ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ  ಹಾಗೂ ಶಿರಾ ತಾಲ್ಲೂಕಿನ ವರ್ಗಾವಣೆಗೊಂಡ ವಿ.ಕೆ.ವೀರಕ್ಯಾತರಾಯರಿಗೆ ಬೀಳ್ಕೊಡಿಗೆ ಅಭಿನಂದನಾ ಸಮಾರಂಭ ಉದ್ದೇಶಿಸಿ ಮಾತನಾಡುತ್ತಾ, ನೌಕರರು ಸಾರ್ವಜನಿಕರ ಸೇವಕರಾಗಬೇಕೆ ವಿನಹ ರಾಜಕಾರಣಿಗಳ ಭಂಟರಾಗಬಾರದು ಎಂದರು.
     
         ಸರ್ಕಾರಿ ನೌಕರರು  ಸರ್ಕಾರಿ ಅಧಿಕಾರಿಗಳಾಗಬೇಕಾದರೆ ನಮ್ಮ ಪೂರ್ವಜನ್ಮದ ಪುಣ್ಯ ಮತ್ತು ತಂದೆ-ತಾಯಿಗಳ ಆಶೀರ್ವಾದ ಇರುತ್ತದೆ.  ಇಂತಹ ಪವಿತ್ರವಾದ ಸರ್ಕಾರಿ ನೌಕರಿಯಲ್ಲಿ  ಪಾರದರ್ಶಕತೆಯಿಂದ ಸೇವೆ ಸಲ್ಲಿಸಬೇಕು. ಇಂತಹ ನೌಕರರ ಸಂಘದ ಅಧ್ಯಕ್ಷರಾಗುವವರು ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಒಳ್ಳೆಯ ಮನಸ್ಸಿನಿಂದ ನೌಕರರ ಹಿತಕ್ಕೆ ಸ್ಪಂದಿಸಬೇಕು. ಸಮಾಜದಲ್ಲಿ ಎಲ್ಲಾ ರಂಗದಲ್ಲೂ ಹಿತಶತ್ರುಗಳು ಇದ್ದೆ ಇರುತ್ತಾರೆ. ಅದೇ ಮಾದರಿಯಲ್ಲಿ ನೌಕರ ವರ್ಗದಲ್ಲೂ ಶತ್ರುಗಳಿರುತ್ತಾರೆ. ಅದನ್ನು ಹಠವಾಗಿ ಸ್ವೀಕರಿಸದೆ ಜನಮುಖಿಯಾಗಿ ನೌಕರರ ಹಿತಕಾಪಾಡುವಂತಹ ಮನಸ್ಥಿತಿ ಉಳ್ಳವರಂತಾಗಬೇಕು ಎಂದರು.
.    
        ಸನ್ಮಾನ ಸ್ವೀಕರಿಸಿ ವರ್ಗಾವಣೆಗೊಂಡ ಸರ್ಕಾರಿ ನೌಕರರ ಮಾಜಿ ಅಧ್ಯಕ್ಷ ವಿ.ಕೆ.ವೀರಕ್ಯಾತರಾಯ ಮಾತನಾಡಿ, ನೌಕರರಿಗೆ ವರ್ಗಾವಣೆ ಸಹಜವಾಗಿದ್ದು, ನನ್ನ ಬಹುತೇಕ ಸೇವೆಯನ್ನು ಕೊರಟಗೆರೆ ತಾಲ್ಲೂಕಿನಲ್ಲಿ  ಸಲ್ಲಿಸಿದ್ದು, ಈಗ ಶಿರಾ ತಾಲ್ಲೂಕಿಗೆ ವರ್ಗಾವಣೆಯಾಗಿದ್ದೇನೆ.  ನನ್ನ 15 ವರ್ಷಗಳ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಅವಧಿಯಲ್ಲಿ ಸರ್ಕಾರಿ ನೌಕರರ ಸಂಘದ ಕಟ್ಟಡವು ಅಪೂರ್ಣವಾಗಿದೆ.  ಜನಪ್ರತಿನಿಧಿಗಳ ಅನುದಾನದಿಂದ 2 ಹಂತಸ್ಥಿನ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಯಿತು. ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗುರುಭವನವನ್ನು ಶಿಕ್ಷಕರೊಂದಿಗೆ, ಜನಪ್ರತಿನಿಧಿಗಳ ಅನುದಾನದಿಂದ ಪೂರ್ಣಗೊಳಿಸಲಾಯಿತು. ಮತ್ತೆ 15 ವರ್ಷಗಳ ನಂತರ ನವೀಕರಣ ಗೊಳಿಸಲಾಯಿತು.
 
       ಇದರೊಂದಿಗೆ ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳೊಂದಿಗೆ ಸಾರ್ವಜನಿಕರ ಪ್ರತಿಭಾವಂತ ಮಕ್ಕಳಿಗೂ ಸಹ ಪ್ರತಿವರ್ಷ ಪುರಸ್ಕರಿಸುವಂತಹ ಕಾರ್ಯಕ್ರಮ ಮಾಡುವ ಮುಖೇನ ಸರ್ಕಾರಿ ನೌಕರರಲ್ಲಿ ಸಮಾನತೆ ಕಾಯ್ದುಕೊಂಡು ಬಂದಿದ್ದೇನೆ.  ನೌಕರ ವರ್ಗದಲ್ಲಿ ಕೆಲವರು ನೌಕರರ ಸಂಘದ ವಿರೋಧಿಗಳೊಂದಿಗೆ ಸೇರಿಕೊಂಡು ಸರ್ಕಾರಿ ನೌಕರರಿಗೆ ಕಿರುಕುಳ ನೀಡುತ್ತಾ ಸಂಘ ಸೇರಿದಂತೆ ಇನ್ನಿತರರ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳಿಗೆ ನಾನು ಸೊಪ್ಪು ಹಾಕುವುದಿಲ್ಲ. ಸರ್ಕಾರಿ ನೌಕರರ ಪ್ರೀತಿ ಮತ್ತು ಆಶೀರ್ವಾದ ಸದಾ ನನ್ನ ಮೇಲಿದ್ದು ಮುಂದಿನ ದಿನಗಳಲ್ಲಿ ಇಂತಹ ವ್ಯಕ್ತಿಗಳನ್ನು ನೌಕರರ ಸಂಘದಿಂದ ದೂರವಿಡಲಿ ಎಂದರು.
       
        ಕಾರ್ಯಕ್ರಮದಲ್ಲಿ ನೌಕರರ ಸಂಘದ ಅಧ್ಯಕ್ಷ ಎಲ್.ಕಾಮಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಸ್.ಕೆ.ನಾಗರಾಜು, ಶಿರಾ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಲಕ್ಷ್ಮೀಶ್, ಸಿದ್ದಲಿಂಗಾರಾಧ್ಯ, ಚಿಕ್ಕಪ್ಪಯ್ಯ, ಹಿಂದುಳಿದ ವರ್ಗದ ಇಲಾಖೆಯ ಅಧಿಕಾರಿ ಅನಂತರಾಜು, ಅಬಕಾರಿ ನಿರೀಕ್ಷಕ ರಾಮಮೂರ್ತಿ, ಭೂಮಾಪನ ಇಲಾಖೆಯ ಸೂಪರ್‍ವೈಜರ್ ಜಿ.ವಿ.ಮಂಜುನಾಥ್, ಹೆಚ್.ಆರ್.ಹನುಮಂತರಾಯಪ್ಪ, ಮಹಾಲಿಂಗಪ್ಪ, ದಿವಾಕರ್, ಈಶ್ವರಯ್ಯ, ಮೃತ್ಯುಂಜಯ, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link