62ನೇ ಪರಿನಿರ್ವಾಣ ದಿನ ಆಚರಣೆ

ಹರಪನಹಳ್ಳಿ :

         ಪಟ್ಟಣದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಎಸ್.ಎಸ್.ಹಿರೇಮಠ ಸಾಂಸ್ಕತಿಕ ಅಧ್ಯಯನ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಡಾ.ಬಿ.ಆರ್.ಅಂಬೇಡ್ಕರ 62ನೇ ಪರಿನಿರ್ವಾಣ ದಿನ ಆಚರಿಸಿದರು.

       ಉಪನ್ಯಾಸ ನೀಡಿದ ಕೊಟ್ಟೂರು ಉಪನ್ಯಾಸಕ ಡಾ.ಸತೀಶಪಾಟೀಲ್ ಮಾತನಾಡಿ, ಮಿಂಚು ಬಂದಾಗ ಅದರ ಬೆಳಕಿನಲ್ಲಿ ಹಾದಿ ಹುಡುಕಬೇಕೆ ಹೊರತು, ಮಿಂಚನ್ನೆ ನೋಡುವ ಪ್ರಯತ್ನ ಮಾಡುವುದು ಒಳ್ಳೆಯದಲ್ಲ ಎಂದರು.

       ಆಧುನಿಕ ಭಾರತದಲ್ಲಿ ಚರಿತ್ರೆ ಪುರಾಣ ಆಗುತ್ತಿವೆ, ಪುರಾಣಗಳೆಲ್ಲಾ ಚರಿತ್ರೆ ಆಗುತ್ತಿರುವುದು ದುರಂತ. ಅಮಾನವೀಯ, ಅಸಂವಿಧಾನ ಉಲ್ಲಂಘಿಸುವ ಮನೋಭಾವ ಪ್ರತಿಯೊಬ್ಬರು ರೂಢಿಸಿಕೊಂಡರೆ ಭಾರತದ ಸಂವಿಧಾನಕ್ಕೆ ಗೌರವ ತಂದುಕೊಟ್ಟಂತಾಗುತ್ತದೆ. ಎಂದರು.

       ಎಲ್ಲ ವರ್ಗದ ನಾಯಕ ಅಂಬೇಡ್ಕರ ಸಂವಿಧಾನ ಶಿಲ್ಪಿ, ಶೋಷಿತರ ನಾಯಕವೆಂದು ಬಿಂಬಿಸಿ, ಅವರಲ್ಲಿದ್ದ ಒರ್ವ ಆರ್ಥಿಕ ತಜ್ಞ ಎಂಬುದನ್ನು ಬಿಂಬಿಸುತ್ತಿಲ್ಲ. ಬೌದ್ಧ ಧರ್ಮ ಸ್ವೀಕರಿಸಿ, ಅಲ್ಲಿ ನವಯಾನ ಆರಂಭಿಸಿ ಬೌದ್ಧ ಧರ್ಮದ ಪುನರುತ್ಥಾನ ಮಾಡಿದ ಅವರ ಹೋರಾಟ ಅವಿಸ್ಮರಣೀಯ ಎಂದು ತಿಳಿಸಿದರು.

         ಕಟ್ಟಿಸೇತುರಾಮಚಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಎಂ.ತಿಮ್ಮಪ್ಪ ಮಾತನಾಡಿ, ಹನ್ನೆರಡನೇ ಶತಮಾನದ ಬಸವಣ್ಣನ ವಚನ ಚಳುವಳಿಯ ಸಾಹಿತ್ಯ, ಸಮ ಸಮಾಜದ ಕನಸು ಕಂಡ ಅಂಬೇಡ್ಕರರ ಹೋರಾಟ ಜನರನ್ನು ಬಡಿದೆಬ್ಬಿಸಿದವು ಎಂದರು.
ಸಾಹಿತಿ ಪೂಜಾರ ದುರ್ಗೇಶ್ ಮಾತನಾಡಿ, ಅಂಬೇಡ್ಕರ ಹೆಸರು ದುರ್ಬಳಕೆ ಆಗುತ್ತಿದೆ, ಅವರ ಆದರ್ಶ ಆಚರಣೆಗೆ ತರದೇ, ಜಯಂತಿಗೆ ಸೀಮಿತವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

         ತಾ.ಪಂ.ಸದಸ್ಯ ಒ.ರಾಮಪ್ಪ, ಆಯೋಜಕರಾದ ಸಿ.ಗಂಗಾಧರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಂಜಿನಪ್ಪ ಮಾತನಾಡಿದರು.

        ಎಂ.ಗಂಗಪ್ಪ, ಗುಡಿಹಳ್ಳಿ ಹಾಲೇಶ್, ಪುಣಬಗಟ್ಟಿ ನಿಂಗಪ್ಪ, ರಮೇಶನಾಯ್ಕ, ಎನ್.ಜಿ.ಬಸವರಾಜ್, ಕಸಾಪ ಅಧ್ಯಕ್ಷ ಡಿ.ರಾಮನಮಲಿ, ಕಾರ್ಯದರ್ಶಿ ಹೇಮಣ್ಣ ಮೋರಗೆರೆ, ಶಕುಂತಲಾ ಬನ್ಸೋಡೆ, ಆಂಜನೇಯ, ಮೆಹಬೂಬ್‍ಭಾಷು, ಬೋವಿ ರಾಮಚಂದ್ರ, ಬಸವರಾಜ್ ಇತರರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link