ಪರಿಪೂರ್ಣ ಸ್ವಾತಂತ್ರ ಸಿಕ್ಕಾಗ ಅಭಿವೃದ್ದಿ ಸಾಧ್ಯ

ಚಿತ್ರದುರ್ಗ;

       ನಗರದಎಸ್.ಜೆ.ಎಂ. ಮಹಿಳಾ ಕಾಲೇಜಿನಲ್ಲಿ ಮಹಿಳಾ ಸಬಲೀಕರಣಘಟಕ ಹಾಗೂ ಎನ್.ಎಸ್.ಎಸ್. ಘಟಕಗಳ ವತಿಯಿಂದಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.ಮಹಿಳಾ ಸಬಲೀಕರಣಘಟಕದ ಸಂಯೋಜಕರಾದ ಪ್ರೊ.ಗಾಯತ್ರಿ ಮಾತನಾಡಿ, ಇಂದು ಪುರುಷ ಪ್ರಧಾನ ಸಮಾಜ ಹೇರಿರುವಅಸಮಾನತೆ, ಶೋಷಣೆ, ದಬ್ಬಾಳಿಕೆ, ಹಿಂಸೆಗಳ ವಿರುದ್ಧ ಸಂಘಟಿತ ಹೋರಾಟ ಮಾಡಿ ಜಯಗಳಿಸಿದ ಹಿನ್ನೆಲೆಯಲ್ಲಿ ನಡೆಯುವ ವಿಜಯೋತ್ಸವದ ದಿನ ಮಾರ್ಚ್ 8 ವಿಶ್ವ ಮಹಿಳಾ ದಿನಾಚರಣೆ. ನೂರಕ್ಕೂ ಹೆಚ್ಚು ವರ್ಷಗಳಿಂದ ಅಂತರಾಷ್ಟ್ರೀಯಮಹಿಳಾ ದಿನಾಚರಣೆಯನ್ನುಆಚರಿಸುತ್ತಿದ್ದರೂ ಮಹಿಳೆಯರ ಬಗೆಗಿನ ಪೂರ್ವಾಗ್ರಹಕಡಿಮೆಯಾಗಿಲ್ಲ, ಸಾಮಾಜಿಕತಾರತಮ್ಯ ನಿಂತಿಲ್ಲ ಎಂದರು

        ಮಹಿಳೆಯರಿಗೆ ಪರಿಪೂರ್ಣ ಸ್ವಾತಂತ್ರ್ಯ ಸಿಗಬೇಕು.ಆಗಷ್ಟೇ ಸಮಾಜದಲ್ಲಿ ಆಕೆ ಮತ್ತಷ್ಟೂಅ ಬೆಳೆಯಲು ಸಾಧ್ಯವಾಗುತ್ತದೆ.ಮಹಿಳೆಯರು ಎಚ್ಚೆತ್ತುಕೊಂಡರೆ ನಿಜವಾದರಾಷ್ಟ್ರದ ನಿರ್ಮಾಣ ಸಾಧ್ಯವಾಗುತ್ತದೆಎಂದರು.ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಹಪ್ರಾದ್ಯಾಪಕ ಡಾ|| ಫಣಿಬುರ್ಲಿ ಮಾತನಾಡಿ, ಪ್ರತಿಯೊಬ್ಬಪುರುಷನ ಯಶಸ್ಸಿನ ಹಿಂದೆ ಹೆಣ್ಣಿನ ಪಾತ್ರವಿದೆ.ಸಮಾಜದಲ್ಲಿಅರ್ಧದಷ್ಟಿರುವ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಆದ್ಯತೆಗಳು ಸಿಗಬೇಕು, ಆಗ ಮಾತ್ರ ದೇಶದ ಅಭಿವೃದ್ಧಿಯಾಗಲು ಸಾಧ್ಯ.

      ಸ್ತ್ರೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಅವಕಾಶ ಕಲ್ಪಿಸಿಕೊಡಬೇಕು ಮಹಿಳಾ ಜಗತ್ತನ್ನು ಕೇಂದ್ರೀಕರಿಸಿಕೊಂಡು ಮಹಿಳಾ ಪ್ರಗತಿಯ ಮಾತುಗಳನ್ನಾಡುವುದಕ್ಕಿಂತ ದೌರ್ಜನ್ಯಗಳ ಕೂಪಕ್ಕೆ ಬಿದ್ದು ನಲುಗುತ್ತಿರುವ ಮಹಿಳೆಯರಲ್ಲಿ ಆತ್ಮಸ್ಥೈರ್ಯತುಂಬಿ ಮೇಲಕ್ಕೆತ್ತುವ ಪ್ರಯತ್ನಗಳಾಗಬೇಕು.ಮಹಿಳೆಯರಿಗೆ ಮೀಸಲಾತಿಕೊಟ್ಟರೆ ಸಾಲದು ಹೆಣ್ಣುಮಕ್ಕಳನ್ನು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಬಲಪಡಿಸಬೇಕಾಗಿದೆ ಎಂದು ಹೇಳಿದರು ಸಮಾಜದಲ್ಲಿ ಮಹಿಳೆಯನ್ನು ಸಮಾನ ಮನೋಭಾವನೆಯಿಂದಕಾಣಬೇಕಾಗಿದೆ.ಎಲ್ಲಿ ಹೆಣ್ಣು ಪೂಜಿಸಲ್ಪಡುತ್ತಾಳೋ ಅಲ್ಲಿದೇವರು ನೆಲೆಸಿರುತ್ತಾನೆ, ವೇದಗಳ ಕಾಲದಲ್ಲಿ ಮಹಿಳೆಯರ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿತ್ತು ಎಂಬುದನ್ನು ತಿಳಿಸಿಕೊಟ್ಟರು.

       ಸಬಲೀಕರಣದಲ್ಲಿ ಶಿಕ್ಷಣದ ಪಾತ್ರವನ್ನು ವಿವರಿಸುತ್ತಾ ಸಬಲೀಕರಣಕ್ಕಾಗಿಇರುವಂತ ಸರ್ಕಾರದ ಯೋಜನೆಗಳಾದ ರಾಷ್ಟ್ರೀಯ ಮಹಿಳಾ ಕೋಶ, ಬಾಲ್ಯ ವಿವಾಹ ನಿಷೇಧಕಾಯ್ದೆ, ಬಾಲಿಕ ಸಮೃದ್ಧಿ ಯೋಜನೆ, ಇಂದಿರಾ ಮಹಿಳಾ ಯೋಜನೆ, ಮಹಿಳಾ ರಾಷ್ಟ್ರೀಯಯೋಜನೆ, ಸತಿ ಸಹಗಮನ ನಿಷೇಧ ಕಾಯ್ದೆಗಳನ್ನು ಕುರಿತು ಮಾಹಿತಿ ನೀಡಿದರು.ಮಹಿಳೆ ಇಲ್ಲದ ಪ್ರಪಂಚದೇವರಿಲ್ಲದದೇಗುಲ ಇದ್ದಂತೆ.ಇಂದಿನ ಮಹಿಳೆ ತನ್ನ ಸಾಧನೆಯಿಂದಜಗತ್ತಿನಲ್ಲಿ ಗುರುತಿಸಿಕೊಂಡಿದ್ದಾಳೆ, ಮಹಿಳೆಯರ ಮೇಲಿನ ಪಕ್ಷಪಾತ ಸಲ್ಲದು, ಪ್ರತಿಯೊಬ್ಬ ಮಹಿಳೆಯರಿಗೆ ಗೌರವ ನೀಡಿದಲ್ಲಿ ಮಾತ್ರ ಈ ದಿನಾಚರಣೆಗೆಅರ್ಥ ಬರುತ್ತದೆಎಂದರು.

        ಐಕ್ಯೂಎಸಿ ಸಂಚಾಲಕರು ಹಾಗೂಗ್ರಂಥಾಲಯದ ಮುಖ್ಯಸ್ಥಎನ್. ಚಲುವರಾಜುರವರು ಲಿಂಗ ಅಸಮಾನತೆಯ ಬಗ್ಗೆ ಜಾಗೃತಿ ಮೂಡಿಸಬೇಕಾದಅಗತ್ಯತೆಯನ್ನು ಹೇಳಿದರು.ಮಹಿಳೆಯರಿಗೆ ಶಿಕ್ಷಣ ದೊರೆತಾಗ ಮಾತ್ರ ಶೈಕ್ಷಣಿಕಅಭಿವೃದ್ಧಿ ಸಾಧ್ಯವಾಗಿ ಮುಂದಿನ ಪೀಳಿಗೆಗೂ ಮುಂದುವರೆಸಲು ಸಾಧ್ಯವಾಗುತ್ತದೆ.ಮಹಿಳಾ ಅಭಿವೃದ್ಧಿ ಮೂಲಕವೇ ನವಭಾರತದಕನಸನ್ನುಕಾಣಲು ಸಾಧ್ಯ, ತನಗೆಇಷ್ಟವಾದಉದ್ಯೋಗಕ್ಷೇತ್ರದಲ್ಲಿತನ್ನನ್ನು ತೊಡಗಿಸಿಕೊಂಡಾಗ ಮಾತ್ರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಬಲೀಕರಣ ಸಾಧ್ಯವಾಗುತ್ತದೆಎಂದರು.

       ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ.ಎಸ್.ಬಿ. ಶಿವಕುಮಾರ್ ಮಾತನಾಡಿ, ಈ ದೇಶ ಕಂಡಂತಹ ಹಲವಾರು ಮಹಿಳೆಯರ ಸಾಧನೆಯನ್ನುಕುರಿತು ಮಾಡನಾಡುತ್ತಾ ಶ್ರೀಮತಿ ಇಂದಿರಾಗಾಂಧಿ, ಮದರ್‍ಥೇರೇಸಾ, ಜೀಜಾ ಹರಿಸಿಂಗ್, ಕಿರಣ್ ಬೇಡಿ, ಒನಕೆ ಓಬವ್ವ, ಕಿತ್ತೂರುರಾಣಿಚೆನ್ನಮ್ಮ, ಸುಧಾ ನಾರಾಯಣಮೂರ್ತಿ ಇವರು ಸಾಮಾಜಿಕ, ಆರ್ಥಿಕ, ಆಡಳಿತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ಶ್ಲಾಘಿಸಿದರು.

        ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ನೀಲುಫರ್, ಚಂದನ, ಮೋನಿಕ ಮತ್ತು ನಯನಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಶ್ರೀ ಮಕ್ಸೂದ್‍ಅಹಮದ್‍ದೈಹಿಕ ನಿರ್ದೇಶಕರು, ಪ್ರೊ.ರಜಪೂತ್, ಪ್ರೊ. ರಾಜಾನಾಯ್ಕ, ಪ್ರೊ. ಪರಮೇಶ್ವರಪ್ಪ, ಡಾ. ಸಿ. ಸುಧಾರಾಣ,ಡಾ. ಸಿ.ಟಿ. ಜಯಣ್ಣ, ಶ್ರೀ.ನಾಗರಾಜ್ ಹಾಗೂ ಬೋಧಕೇತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿನಿಯರುಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕುಮಾರಿ ಭಾರತಿಜೆ.ಪ್ರಾರ್ಥನೆ ಮಾಡಿದರು.ಸ್ವಾಗತ ಹೀನಾ ಕೌಸರ್ ಡಿ. ವಂದನಾರ್ಪಣೆಕೈರುನ್ನೀಸಾ ಹಾಗೂ ನಿರೂಪಣೆಯನ್ನುಆರ್.ಜಯಮ್ಮ ನಡೆಸಿಕೊಟ್ಟರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link