ತುಮಕೂರು
ಸಮಕಾಲಿನ ಪರಿಸರ ವೈಪರಿತ್ಯದ ಸವಾಲುಗಳಿಗೆ ಉತ್ತರವನ್ನು ಆವಿಷ್ಕಾರಿಸುವ ಮಾರ್ಗಗಳನ್ನು ವಿಸ್ತರಿಸಿಕೂಂಡು ಸಮಾಜ ಕಟ್ಟುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಅತ್ಯಂತ ಕಾಳಜಿಯಿಂದ ಹವಾಮಾನ ಸಂರಕ್ಷಿಸುವ ಜವಬ್ಧಾರಿ ಹೊತ್ತು ಮುಂದಿನ ಪೀಳಿಗೆಗೆ ನೆರವಾಗಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಸ್‍ಆರ್ ನಿರಂಜನ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಸರ ವಿಜ್ಞಾನ ಪರಿಸರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಸಿ.ಎನ್.ಆರ್ ಬ್ಲಾಕ್‍ನ ಸಭಾಂಗಣದಲ್ಲಿ, ನ್ಯಾಷನಲ್ ಎನ್ವಿರಾನ್‍ಮೆಂಟಲ್ ಇನೋವೆಷನ್ ಸಮ್ಮಿತ್ ಎಂಬ ಎರಡು ದಿನಗಳ ಕಾರ್ಯಗಾರ ಉದ್ಘಾಟಿಸಿದ ಅವರು, ಜಾಗತಿಕ ಮಟ್ಟದ ಹವಾಮಾನ ವೈಪರಿತ್ಯದಿಂದ ಆಗಬಹುದಾದ ದುಷ್ಟಪರಿಣಾಮಗಳನ್ನು ಐಪಿಸಿಸಿ ವರದಿಮಾಡಿದ್ದು ಈ ಆತಂಕಕಾರಿ ಪರಿಸ್ಥಿತಿಯಲ್ಲಿ ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಬೇಕು ಎಂದರು.
ಹವಾಮಾನ ಕಲುಶಿತಗೊಂಡರೆ ಉತ್ತಮ ಆಹಾರ, ನೀರು, ಗಾಳಿ ದೊರೆಯುವುದಿಲ್ಲ, ಇವಿಲ್ಲದೆ ಜೀವ ಸಂಕುಲ ಬದುಕುವುದಿಲ್ಲ, ಈ ಎಚ್ಚರಿಕೆ ಅರಿತು ಸ್ವಚ್ಚ ಪರಿಸರ ಉಳಿಸಲು ಅನುಸರಿಸಬೇಕಾದ ಮಾರ್ಗೋಪಾಯಗಳ ಆವಿಷ್ಕಾರವನ್ನು ಪರಿಸರ ವಿಜ್ಞಾನ ವಿದ್ಯಾರ್ಥಿಗಳು ಸಂಶೋಧಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಉನ್ನತ ಶಿಕ್ಷಣದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಪರಿಸರ ವಿಜ್ಞಾನ ಸರ್ವಕಾಲಕ್ಕೂ ಅನ್ವಯಿಕ ಹಾಗೂ ಬಹು ಶಿಸ್ತೀಯ ವಿಷಯವಾಗಿ ಸರ್ವವ್ಯಾಪಕವಾಗಿ ಪಸರಿಸುತ್ತಿದೆ. ಸಮಕಾಲಿನ ಪರಿಸರ ವೈಪರಿತ್ಯ ನಿವಾರಣೆಗೆ ಸಂಶೋಧನಾ ಮಾರ್ಗಗಳನ್ನು ವಿಸ್ತರಿಸಿಕೂಂಡು ಸಮಾಜಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಪರಿಸರ ಮತ್ತು ಉನ್ನತ ಶಿಕ್ಷಣ, ಉನ್ನತ ಶಿಕ್ಷಣದಲ್ಲಿ ಪರಿಸರ ಪ್ರಜ್ಞೆ ಪರಿಸರ ಸಂರಕ್ಷಣೆಗಾಗಿ ನಾಯಕತ್ವ ಮತ್ತು ಅವಕಾಶಗಳು ಕುರಿತ ವಿಷಯಗಳು ಚರ್ಚೆಗೆ ಒಳಗಾಗಿ ಕಲುಷಿತಗೊಳ್ಳುತ್ತಿರುವ ಸಮಾಜಿಕ ಪರಿಸರವನ್ನು ಇದರೊಂದಿಗೆ ಆಂತರಿಕ ಸಂಬಂಧ ಬೆಸದುಕೊಂಡಿರುವ ಆರ್ಥಿಕ, ಸಾಂಸ್ಕತಿಕ, ವಿವಿಧ ಆಯಾಮಗಳ ಉನ್ನತೀಕರಣಗೊಳ್ಳವ ಅಗತ್ಯತೆ ಹೆಚ್ಚಾಗಬೇಕಿದೆ ಎಂದು ಪ್ರೊ. ಎಸ್ ಆರ್ ನಿರಂಜನ್ ಹೇಳಿದರು.
ಪರಿಸರ ಅಧ್ಯಯನವನ್ನು ಒಳಗೊಂಡಂತೆ ವಿಜ್ಞಾನ, ತಂತ್ರಜ್ಞಾನ, ಎಲ್ಲಾ ಮಾನವಿಕ ಸಾಮಾಜ ವಿಜ್ಞಾನಗಳನ್ನು ಮಾನವ ಕಲ್ಯಾಣಕ್ಕೆ ಮಾರ್ಪಡಿಸಿಕೊಂಡು ಅಧಿಕ ಆಹಾರೋತ್ಪಾದನೆಗಾಗಿ ರಾಸಯನಿಕ ಗೊಬ್ಬರಗಳ ಬಳಕೆ, ಅಂರ್ತಜಲದ ಬಳಕೆ, ಕೀಟನಾಶಕಗಳ ಬಳಕೆಯಿಂದಾಗಿ ಎಲ್ಲಾ ದೇಶಗಳು ಸ್ಪರ್ಧೆಗಿಳಿದು ಪರಿಸರವನ್ನು ನಾಶಮಾಡುತ್ತಿವೆ ಎಂದ ವಿಷಾದಿಸಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಜೆಎಸ್‍ಎಸ್ ವಿಜ್ಞಾನ ಮತ್ತುತಂತ್ರಜ್ಞಾನ ವಿಶ್ವವಿಧ್ಯಾನಿಲಯದ ಕುಲಸಚಿವರಾದ ಪ್ರೊ. ಕೆ ಎಸ್ ಲೋಕೇಶರವರು, ಪರಿಸರ ಮಾಲಿನ್ಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಅಗತ್ಯತೆ ಇದೆ ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಕೆ ಎನ್ ಗಂಗಾನಾಯ್ಕ್ ಮಾತನಾಡಿ, ಪರಿಸರ ಸಂರಕ್ಷಣೆಯನ್ನು ಎಲ್ಲಾ ಯುವಜನರು ನೈತಿಕ ಕರ್ತವ್ಯ ಎಂದು ಭಾವಿಸಿ ವಿನೂತನ ಆವಿಷ್ಕಾರ ಮತ್ತು ಪ್ರಯೋಗಾತ್ಮಕ ಚಿಂತನೆಗಳ ಮೂಲಕ ಉಳಿಸಿ ಬೆಳಸಬೇಕು ಎಂದು ಹೇಳಿದರು.ಡಾ.ಶರತ್‍ಚಂದ್ರ ಸ್ವಾಗತಿಸಿ, ಕಾರ್ಯಗಾರದ ಸಂಚಾಲಕರಾದ ಡಾ. ರಾಜನಾಯ್ಕ್ ವಿದ್ಯಾರ್ಥಿಗಳು ಏರ್ಪಡಿಸಿದ್ದ ವಸ್ತುಪ್ರದರ್ಶನ ಮತ್ತು ಮಾದರಿಗಳನ್ನು ಗಣ್ಯರಿಗೆ ವಿಶ್ಲೇಷಿಸಿ ವಂದನಾರ್ಪಣೆ ಮಾಡಿದರು.