ಪರಿಶ್ರಮದಿಂದಲೇ ಭವಿಷ್ಯ ರೂಪಿಸಿಕೊಳ್ಳಿ;ರಮೇಶ್

ಚಿತ್ರದುರ್ಗ:

       ಚಂದ್ರವಳ್ಳಿ ಎಸ್.ಜೆ.ಎಂ. ಕಾಲೇಜಿನ ವತಿಯಿಂದ ಎನ್.ಎಸ್.ಎಸ್. ಘಟಕಗಳ ವತಿಯಿಂದ ಬೆಳಗಟ್ಟ ಗ್ರಾಮದಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್. ವಿಶೇಷ ವಾರ್ಷಿಕ ಶಿಬಿರಕ್ಕೆ ಎಸ್.ಜೆ.ಎಂ. ಮಹಾ ವಿದ್ಯಾಲಯದ ಪ್ರಚಾರ್ಯರಾದ ಡಾ. ಕೆ.ಸಿ.ರಮೇಶ್ ರವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿದರು.

        ನಂತರ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದು ವಿದ್ಯಾರ್ಥಿಗಳು ಪರಿಶ್ರಮದ ಮೂಲಕ ತಮ್ಮ ಭವಿಷ್ಯವನ್ನು ರೂಡಿಸಿ ಕೊಳ್ಳಬೇಕಾಗಿದೆ. ಎನ್ ಎಸ್ ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಪರಸ್ಪರ ಸ್ನೇಹ ಮನೋಭಾವ, ನಾಯಕತ್ವ ಗುಣಗಳನ್ನು ಕಲಿಸುವುದರೊಂದಿಗೆ ಗ್ರಾಮೀಣ ಜನರ ಬದುಕಿನ ಜೀವನ ತಿಳಿಯಲು ಸಹಕಾರಿಯಾಗುತ್ತದೆ.

       ಉತ್ತಮ ಜ್ಞಾನವನ್ನು ಪಡೆದರೆ ಸಮಾಜದಲ್ಲಿ ಭದ್ರವಾಗಿ ಇರಲು ಸಾದ್ಯವಾಗುತ್ತದೆ ಇಂದು ಎಲ್ಲೆಡೆ ನೀರಿನ ಅಭಾವ ಉಂಟಾಗಿ ಅಂತರ್ಜಲ ಕುಸಿಯುತ್ತಿದೆ. ಇದಕ್ಕೆ ನಿರಂತರ ಪರಿಸರದ ಮೇಲಾಗುತ್ತಿರುವ ಅತಿಕ್ರಮಣ ಕಾರಣವಾಗುತ್ತಿದೆ. ಇದರಿಂದ ನೀರಿನ ಮಹತ್ವ ಅರಿಯಬೇಕಾಗಿದೆ ನಮ್ಮ ಮನೆಯ ಸುತ್ತ ಮುತ್ತ ಸುಂದರ ಪರಿಸರ ನಿರ್ಮಾಣ ಮಾಡಿಕೊಳ್ಳಬೇಕು. ಎಲ್ಲರಿಗೂ ಪರಿಶುದ್ಧ ನೀರು ಸಿಗಬೇಕಾದರೆ ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸಿದರೆ ಕಾಲಕ್ಕೆ ಸರಿಯಾಗಿ ಮಳೆಯಾಗಿ ಉತ್ತಮ ಪರಿಸರ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

       ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್ ಜೆ ಎಂ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ|| ಎಂ.ಹೆಚ್. ಶ್ರೀನಿವಾಸ ರೆಡ್ಡಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ನಿರ್ಧಿಷ್ಟ ಗುರಿ ಹೊಂದಬೇಕು ಆ ಗುರಿ ಸಾಧನೆಗೆ ಸತತ ಪ್ರಯತ್ನ ನಡೆಸಿ ಅದರಲ್ಲಿ ಅಫಲತೆ ಹೊಂದಬೇಕು ಉತ್ತಮ ಆಲೋಚನೆ ಗುರು ಹಿರಿಯರಲ್ಲಿ ಗೌರವ ಹೊಂದಬೇಕು ಯಾವುದೇ ಸಮಸ್ಯೆ ಬಂದರೂ ಅವುಗಳನ್ನು ಸಮರ್ಥವಾಗಿ ಎದುರಿಸಿ ಸುಂದರ ಜೀವನ ನಿರ್ಮಾಣ ಮಾಡಿಕೊಳ್ಳಬೇಕು ಎನ್ ಎಸ್ ಎಸ್ ನಮಗೆಲ್ಲ ಆತ್ಮವಿಶ್ವಾಸ ಪರಸ್ಪರ ಬಾಂದವ್ಯ ಆತ್ಮೀಯ ಒಡನಾಟ ಕಲಿಸುತ್ತದೆ ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೇ ಸೇವೆ ಮಾಡುವುದೇ ನಿಜವಾದ ಸೇವೆ ಎಂದು ತಿಳಿಸಿದರು.

        ಕಾರ್ಯಕ್ರಮದಲ್ಲಿ ಮಾರುತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಡಿ.ಕೆ.ಜಯಶೀಲ ರೆಡ್ಡಿ ಉಪಸ್ಥಿತರಿದ್ದರು.ಎನ್ ಎಸ್ ಎಸ್ ಅಧಿಕಾರಿ ಪ್ರೊ|| ಬಿ. ರೇವಣ್ಣ ಸ್ವಾಗತಿಸಿದರು. ಹೆಚ್. ಸತೀಶ್ ನಾಯ್ಕ ವಂದಿಸಿದರು. ಶಿಬಿರದ ವಿದ್ಯಾರ್ಥಿನಿ ನಾಗಶ್ರೀ ಕಾರ್ಯಕ್ರಮ ನಿರೂಪಿಸಿದರು.ಇದಕ್ಕೂ ಮುನ್ನ ಶಿಬಿರದ ವಿದ್ಯಾರ್ಥಿಗಳಿಂದ ಜನತೆಯನ್ನು ಜಾಗೃತಿಗೊಳಿಸುವ ಬೀದಿ ನಾಟಕ , ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಗ್ರಾಮದ ಬೀದಿಗಳಲ್ಲಿ ಪಥ ಸಂಚಲನ ನಡೆಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap