ಬೆಂಗಳೂರು:
ದೇಶದ ಅತಿದೊಡ್ಡ ಬಿಸ್ಕತ್ತು ತಯಾರಕ ಕಂಪನಿಯಾದ ಪಾರ್ಲೆ ಪುಡ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ .
ದೇಶದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿರುವುದರಿಂದ ಮತ್ತು ಗ್ರಾಮೀಣ ಭಾಗದಲ್ಲಿ ಬೇಡಿಕೆ ಕುಸಿಯುತ್ತಿರುವುದರಿಂದ ಉತ್ಪಾದನೆಯ ಮೇಲೆ ನೇರ ಪರಿಣಾಮ ಬೀರುವ ಸಂಭವವಿರುವುದರಿಂದ ಸದ್ಯ ದೇಶದಲ್ಲಿಯೆ ಅರ್ಥಿಕ ಪರಿಸ್ಥತಿ ದುಸ್ತರವಾಗಿರುವುದರಿಂದ ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಪೈಕಿ ಸುಮಾರು 10,000 ಕಾರ್ಮಿಕರನ್ನು ವಜಾಗೊಳಿಸಲು ಯೋಚಿಸುತ್ತಿದೆ ಎಂದು ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯ ಕುಸಿತವು ಕಾರುಗಳಿಂದ ಬಟ್ಟೆಯವರೆಗಿನ ಎಲ್ಲದರ ಮಾರಾಟವನ್ನು ಕುಂಠಿತಗೊಳಿಸುತ್ತಿದೆ, ಉತ್ಪಾದನೆಯನ್ನು ಮೊಟಕುಗೊಳಿಸಲು ಕಂಪನಿಗಳು ಮುಂದಾಗುತ್ತಿವೆ ಮತ್ತು ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲು ಸರ್ಕಾರವು ಆರ್ಥಿಕವಾಗಿ ಕಂಪನಿಗಳನ್ನು ಸಬಲಗೊಳಿಸಲು ಮುಂದದಾಗಿದೆ.
ಪಾರ್ಲೆಯ ಬಿಸ್ಕತ್ತು ಮಾರಾಟದಲ್ಲಿ ತೀವ್ರ ಕುಸಿತ ದಾಖಲಾಗುತ್ತಿದು ಇದರಿಂದಾಗಿ ಕಂಪನಿಗೆ ತೀವ್ರ ಸಂಕಷ್ಟ ಎದುರಾಗಿರುವುದರಿಂದ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಕುಗ್ಗಿಸಲು ಯೋಚಿಸುತ್ತಿದ್ದು ಇದರಿಂದಾಗಿ ಅನೇಕ ಜನರು ತಮ್ಮ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಪಾರ್ಲೆ ಸಿಇಓ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








