ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡವರ ಪಟ್ಟಿ ಬಿಡುಗಡೆ

ಬೆಂಗಳೂರು

      ಮೈತ್ರಿ ಸರ್ಕಾರದ ಮಿತ್ರಪಕ್ಷಗಳ ನಡುವೆ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದ್ದ ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ ಹಾಗು ಸಂಸದೀಯ ಕಾರ್ಯದರ್ಶಿಗಳ ನೇಮಕಾತಿ ಪಟ್ಟಿಗೆ ಕೊನೆಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅನುಮೋದನೆ ನೀಡಿದ್ದಾರೆ.

      ಇಂದು ಬೆಳಗ್ಗೆ ಬಾಕಿ ಉಳಿಸಿಕೊಂಡಿದ್ದ 5 ರಲ್ಲಿ 3 ನಿಗಮ ಮಂಡಳಿ ಅಧ್ಯಕ್ಷರ ಹುದ್ದೆಗಳು,ಹಾಗು 9 ಸಂಸದೀಯ ಕಾರ್ಯದರ್ಶಿ ಹುದ್ದೆಗಳಲ್ಲಿ 8 ಹುದ್ದೆಗಳ ನೇಮಕಾತಿಗೆ ಮುಖ್ಯಮಂತ್ರಿಗಳು ಅಂಕಿತ ಹಾಕಿದ್ದಾರೆ. ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮ,ಹಾಗು ಮಾಲಿನ್ಯ ನಿಯಂತ್ರಣ ಮಂಡಳಿಗೆ ಮುಖ್ಯಮಂತ್ರಿ ಬ್ರೇಕ್ ಹಾಕಿದ್ದಾರೆ.

      ಅಂತೆಯೇ ಸಂಸದೀಯ ಕಾರ್ಯದರ್ಶಿಗಳ ಪಟ್ಟಿಯಲ್ಲಿ ಎಂ.ಎ.ಗೋಪಾಲಸ್ವಾಮಿ ನೇಮಕಾತಿಗೆ ಸಚಿವ ಹೆಚ್.ಡಿ.ರೇವಣ್ಣ ಒಪ್ಪಿಗೆ ಸೂಚಿಸಿಲ್ಲ. ಅಂತೆಯೇ ಯೋಜನಾ ಆಯೋಗದ ಉಪಾಧ್ಯಕ್ಷ ಶರಣ ಬಸಪ್ಪ ದರ್ಶನಾಪುರ್ ,ದೆಹಲಿ ವಿಶೇಷ ಪ್ರತಿನಿಧಿ ಡಾ.ಅಜೆಯ್ ಧರ್ಮಸಿಂಗ್, ರಾಜಕೀಯ ಕಾರ್ಯದರ್ಶಿ ವಿ.ಮುನಿಯಪ್ಪ ಅವರ ನೇಮಕಾತಿಗೂ ಮುಖ್ಯಮಂತ್ರಿ ಕುಮಾರಸ್ವಾಮಿ ತಡೆಯೊಡ್ಡಿದ್ದಾರೆ.ಉಳಿದ ಹುದ್ದೆಗಳ ನೇಮಕಾತಿ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಚರ್ಚಿಸಿ ಅಂಕಿತ ಹಾಕುವ ಸಾದ್ಯತೆ ಇದೆ ಎನ್ನಲಾಗಿದೆ.

ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡವರ ಪಟ್ಟಿ ಇಂತಿದೆ;
* ಅಬ್ದುಲ್ ಜಬ್ಬಾರ್- ವಿಧಾನ ಪರಿಷತ್ ಸದಸ್ಯ
* ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ – ವಿಧಾನ ಸಭೆ ಸದಸ್ಯೆ
* ಐವಾನ್ ಡಿಸೋಜ- ವಿಧಾನ ಪರಿಷತ್ ಸದಸ್ಯ
* ಕೌಜಲಗಿ ಮಹಂತೇಶ್ ಶಿವಾನಂದ್- ವಿಧಾನ ಸಭೆ ಸದಸ್ಯ
* ರೂಪಕಲಾ ಎಂ.ಶಶಿಧರ್ – ವಿಧಾನ ಸಭೆ ಸದಸ್ಯೆ
* ಕೆ.ಗೋವಿಂದರಾಜು -ವಿಧಾನ ಪರಿಷತ್ ಸದಸ್ಯ
* ಕೆ.ರಾಘವೇಂದ್ರ ಬಸವರಾಜ್ ಹಿಟ್ನಾಳ್ – ವಿಧಾನ ಸಭೆ ಸದಸ್ಯ
* ಡಿ.ಎಸ್.ಹುಲಗೇರಿ – ವಿಧಾನ ಸಭೆ ಸದಸ್ಯ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap