ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ

ಹೊಳಲ್ಕೆರೆ:

      ಪಟ್ಟಣದ ಪಟ್ಟಣ ಪಂಚಾಯಿತಿಯಲ್ಲಿ ಪ.ಪಂ. ಅಧ್ಯಕ್ಷೆ ಸವಿತಾ ಬಸವರಾಜ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಸಾಮಾನ್ಯ ಸಭೆ ನಡೆಯಿತು.

       ಪಟ್ಟಣದಲ್ಲಿ 9 ಶುಧ್ದ ನೀರಿನ ಘಟಕಗಳಿವೆ ಅದರಲ್ಲಿ 8 ಘಟಗಳು ಚಾಲನೆಯಲ್ಲಿವೆ. ತಿಂಗಳಿಗೆ 3 ಲಕ್ಷ ರೂಗಳ ಆದಾಯವಿದ್ದರು ಕೇವಲ 30 ಸಾವಿರ ರೂಗಳು ಖಾತೆಯಲ್ಲಿ ತೋರಿಸುತ್ತಿದ್ದಾರೆ. ಹಾಗಾದರೆ ಶುಧ್ದ ನೀರಿನ ಘಟಕಗಳ ಸಂಪೂರ್ಣ ಅವ್ಯವಹಾರ ಆಗಿದೆ ಎಂದು ಪ.ಪಂ. ಸದಸ್ಯ ಕೆ.ಸಿ.ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.

       ಶುಧ್ದ ನೀರಿನ ಘಟಕಗಳು ಪ್ರಾರಂಭವಾಗಿ ಕೇವಲ ಆರು ತಿಂಗಳಿನಿಂದ ಪ.ಪಂ. ವಶಕ್ಕೆ ತೆಗೆದುಕೊಂಡಿದ್ದೇವೆ. ಕೆಲವು ಒಂದು ವರ್ಷದಿಂದ ತೆಗೆದುಕೊಂಡಿದ್ದೇವೆ. ಅದರ ದುರಸ್ಥಿ ಹಾಗೂ ವಿದ್ಯುತ್ ಬಿಲ್, ಕಾವಲಗಾರನಿಗೆ ಸಂಬಳ ಕೊಟ್ಟಿದ್ದೇವೆ ಎಂದು ಶುಧ್ದ ನೀರಿನ ಘಟಕದ ಉಸ್ತುವಾರಿ ಉನ್ನಿಕುಮಾರ್ ಸ್ಪಷ್ಟಪಡಿಸಿದರು.

       ಪ.ಪಂ. ಮುಖ್ಯಾಧಿಕಾರಿ ಡಿ.ಉಮೇಶ್ ಮಾತನಾಡಿ ಶುಧ್ದ ನೀರಿನ ಘಟಕಗಳು ಟೆಂಡರ್ ಕರೆಯಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

       ಕಸ ವಿಲೇವಾರಿ ಮಾಡುವ ಜೀಪ್‍ಗಳಿ ನೋಂದಣಿ ಆಗಿರುವುದಿಲ್ಲ. ಮುಂದೆ ವಾಹನ ಚಾಲಕನಿಗೆ ಏನಾದರು ಅವಗಢ ಸಂಭಿವಿಸಿದರೆ ಯಾರು ಹೊಣೆ ಎಂದು ಪ.ಪಂ. ಸದಸ್ಯ ಮುರುಗೇಶ್ ತಿಳಿಸಿದರು.

      ಪ.ಪಂ. ಮುಖ್ಯಾಧಿಕಾರಿ ಡಿ.ಉಮೇಶ್ ಮಾತನಾಡಿ ಈಗಾಗಲೆ ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಮುಂದಿನ ದಿನಗಳಲ್ಲಿ ನೋಂದಣಿ ಮಾಡಿಸುತ್ತೇವೆ ಎಂದರು.

        ಪ.ಪಂ. ಕಟ್ಟಡ ಪ್ರಾರಂಭಿಸಲು ನಿರ್ಮಿತಿ ಕೇಂದ್ರದವರ ಮೇಲೆ ಏನು ಕ್ರಮ ಜರುಗಿಸಿದ್ದೀರಾ ಎಂದು ಸದಸ್ಯರೆಲ್ಲರು ಮುಖ್ಯಾಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

       4 ಕೋಟಿ ಹಣ ಯಾವಾ ತಾಲ್ಲುಕಿನಲ್ಲಿ ಪ.ಪಂ ಗೆ ಇಷ್ಟೊಂದು ಹಣ ಮುಂಜೂರಾಗಿಲ್ಲ. ನಮ್ಮ ತಾಲ್ಲುಕಿಗೆ ಮಾನ್ಯ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮುಂಜೂರು ಮಾಡಿಸಿದರು ಇನ್ನು ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಪ.ಪಂ ಸದಸ್ಯ ಮುರುಗೇಶ್ ತಿಳಿಸಿದರು.

      ಶಾಸಕರು ಇನ್ನು ಹೆಚ್ಚಿನ ಅನುದಾನ ತಂದು ವಿಶಾಲವಾಗಿ ಕಟ್ಟಡ ನಿರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದರಿಂದ ತಡವಾಗಿದೆ ಎಂದು ಮುಖ್ಯಾಧಿಕಾರಿ ಡಿ.ಉಮೇಶ್ ತಿಳಿಸಿದರು.

      ಸಹಾಯಕ ನಿರ್ದೇಶಕರು (ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ ಇವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಬಾಲಕ/ಬಾಲಕೀಯರ ವಿದ್ಯಾರ್ಥಿ ನಿಲಯಕ್ಕೆ ನಿವೇಶನವನ್ನು ಮನವಿಯನ್ನು ಸಲ್ಲಿದ್ದಾರೆ ಎಂದು ಚರ್ಚಿಸಿದರು.ಅವಕಾಶ ಇದ್ದರೆ ಕೊಡಬಹುದು ಎಂದು ಎಲ್ಲಾ ಸದಸ್ಯರು ಸರ್ವಾನುಮತದಿಂದ ಒಪ್ಪಿರುತ್ತಾರೆ.ಈ ಸಭೆಯಲ್ಲಿ ಸದಸ್ಯರುಗಳಾದ ರಾಜಣ್ಣ, ಅಲ್ಲಾಬಕಷ್, ಇಂದೂಧರ್ ಮೂರ್ತಿ, ಸಯ್ಯಿದ್, ಸಜೀಲ್, ಚಂದ್ರಕಲಾ ಪ್ರಕಾಶ್, ಶಾರದಮ್ಮ ರುದ್ರಪ್ಪ, ಹಬೀಬುರ್ ರಹಮಾನ್, ಸಯ್ಯದ್ ಖಾದರ್, ಸವಿತಾ ಕಾಟ್ರೋತ್, ಮುರುಗೇಶ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link