ಜಗಳೂರು :
ಸರ್ದಾರ್ ವಲ್ಲಭ ಬಾಯಿ ಪಟೇಲರು ವಿಶ್ವಕ್ಕೆ ಏಕಾತೆಯ ಸಂದೇಶ ಸಾರಿ ವಿಶ್ವಮಾನವರಾಗಿದ್ದು ಅವರ ತತ್ವಾಧರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು
ವಿಶ್ವದಲ್ಲಿಯೇ ಅತೀ ಎತ್ತರ ಸರ್ದಾರ್ ವಲ್ಲಭ ಬಾಯಿ ಪಟೇಲ್ ರ ಪ್ರತಿಮೆ ನಿರ್ಮಾಣಗೊಂಡು ಲೊಕಾರ್ಪಣ ಗೊಂಡಿರುವ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಬುಧವಾರ ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಏಕಾತ ಓಟಕ್ಕೆ ಚಾಲನೆ ನೀಡಿ ನಂತರ ಅವರು ಮಾತನಾಡಿದರು.
ತಮ್ಮ ಜೀವಿತಾವಧಿಯಲ್ಲಿ ದೇಶದ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದಂತ ಮಹಾನ್ ನಾಯಕ ದೇಶದ ಪ್ರಥಮ ಉಪ ಪ್ರಧಾನಿಯಾಗಿ ಹಲವಾರು ಸುಧಾರಣೆಗಳನ್ನು ತಂದರು. ಜೊತೆಗೆ ಭಾರತ ಏಕಿಕರಣ ದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಹಿಗಾಗಿಯೇ ಈ ಪ್ರತಿಮೆಗೆ ಏಕಾತ ಪ್ರತಿಮೆ ಎಂದು ನಾಮಕರಣಮಾಡಲಾಗಿರುವುದು ಸ್ವಾಗತಾರ್ಹವಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶ್ರಮದಿಂದ ಗುಜರಾತ್‍ನಲ್ಲಿ ವಿಶ್ವದಲ್ಲಿಯೇ ಅತೀ ಎತ್ತರದ ಪ್ರತಿಮೆಯನ್ನು ನಿರ್ಮಿಸಲು ಯಶಸ್ವಿಯಾಗಿ ಇಂದು ಲೊಕಾರ್ಪಣೆ ಮಾಡಿರುವುದು ದೇಶಕ್ಕೆ ಮಾಧರಿಯಾಗಿದ್ದು, ಸರ್ದಾರ್ ವಲ್ಲಭ ಬಾಯಿ ಪಟೇಲರ ಜೀವನ ಚರಿತ್ರೆಗಳನ್ನು ಅಭ್ಯಸಿಸುವ ಮೂಲಕ ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿ ಕೊಳ್ಳಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಡಿ.ವಿ. ನಾಗಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ಆರ್.ತಿಪ್ಪೇಸ್ವಾಮಿ, ಪಾಪಲಿಂಗ , ತಾಲೂಕು ಪಂಚಾಯಿತಿ ಸದಸ್ಯ ತಿಮ್ಮೇಶ್, ಪಿಕಾರ್ಢ ಬ್ಯಾಂಕ್ ಸದಸ್ಯರಾದ ಮೆದಿಕೇರನಹಳ್ಳಿ ರಾಜು, ಮುಖಂಡರುಗಳಾದ ಶಿವಕುಮಾರ ಸ್ವಾಮಿ, ರುದ್ರಮುನಿ, ಅಫೀಜ್, ಅಜೇಯ್‍ಟೈಲರ್ ಸೇರಿದಂತೆ ಮತ್ತಿತರರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ