ಪತ್ರಕರ್ತರ ಮೇಲೆ ದೌರ್ಜನ್ಯ ಖಂಡಿಸಿ ಕ್ರಮಕ್ಕಾಗಿ ತಹಶೀಲ್ದಾರ್ ಮನವಿ

ಪಾವಗಡ

    ತುಮಕೂರು ನಗರದ ಸತ್ಯಮಂಗಳ ಕೈಗಾರಿಕಾ ಪ್ರದೇಶದ ಬೇಳೂರು ಬಯೋಟೆಕ್ ಖಾರ್ಕಾನೆಯಲ್ಲಿ ಉಂಟಾಗಿದ್ದ ಬಾಯ್ಲರ್ ಸ್ಪೋಟ ವರದಿಯನ್ನು ಮಾಡಲು ಮಂಗಳವಾರ ತೆರಳಿದ್ದ ವರದಿಗಾರರು ಹಾಗೂ ಕ್ಯಾಮರಾಮ್ಯಾನ್ ಮೇಲಿನ ಹಲ್ಲೆಯನ್ನು ಖಂಡಿಸಿ ಪಾವಗಡ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬುದುವಾರ ಪಟ್ಟಣದ ತಹಶೀಲ್ದಾರ್ ಕಛೇರಿ ಬಳಿ ಸಾಂಕೇತಿಕ ಧರಣಿ ನಡೆಸಿ ತಹಶೀಳ್ದಾರ್ ವರದರಾಜುಗೆ ಮನವಿ ಪತ್ರ ಸಲ್ಲಿಸಿದರು.

    ಈ ಸಂಧರ್ಭದಲ್ಲಿ ತುಮಕೂರು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಸ್.ಎನ್. ಪ್ರಸನ್ನಮೂರ್ತಿ, ತಪ್ಪಿತಸ್ಥರನ್ನು ಕೂಡಲೆ ಶಿಕ್ಷಸಬೇಕು ಎಂದು ಒತ್ತಾಯಿಸಿದರು.

    ಹಿರಿಯ ಪತ್ರಕರ್ತರರಾದ ಸತ್ಯಲೋಕೇಶ್ ಮಾತನಾಡಿ, ನಾಲ್ಕನೆ ಅಂಗವಾದ ಪತ್ರಿಕಾ ರಂಗದದಲ್ಲಿ ಕೆಲಸ ಮಾಡುವುದು ಬಹಳ ಕಷ್ಟಕರವಾಗಿದ್ದು, ಇಂತಹ ಹಲ್ಲೆಗಳು ರಾಜ್ಯದಲ್ಲೆ ಪದೆ ಪದೇ ನಡೆಯುತ್ತಿದ್ದು, ಹಲ್ಲೆಯಲ್ಲಿ ಬಾಗಿಯಾದವರಿಗೆ ಕಠಿಣ ಶಿಕ್ಷೆ ವಿದಿಸಬೇಕು ಎಂದು ಆಗ್ರಹಿಸಿದರು.

     ತಾ. ಅಧ್ಯಕ್ಷ ಎಚ್. ರಾಮಾಂಜಿನಪ್ಪ, ರಾಂಪುರನಾಗೇಶ್, ಚಂಚಲಪ್ಪ, ಜಿ.ನಾಗೇಂದ್ರ, ಜಿ.ಎನ್. ನಾಗರಾಜು, ನವೀನ್, ವೀರಸೇನಾ, ಮೈಕೆಲ್, ದಿಗಂತನಾಗೇಂದ್ರ, ಕಿರ್ಲಾಹಳ್ಳಿನವೀನ್‍ಕುಮಾರ್, ಮಲ್ಲೇಶ್, ರಾಜುಕುಮಾರ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link