ನಗರದಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ

ಹಿರಿಯೂರು:

      ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ನಗರದ ಮೊದಲನೇ ವೈದ್ಯ ಪೌರಕಾರ್ಮಿಕ. ಇವರ ಶ್ರಮ ಅವಿಸ್ಮರಣೀಯವಾದುದು ಎಂದು ನಗರಸಭೆ ಸದಸ್ಯ ಜಿ.ಪ್ರೇಮ್‍ಕುಮಾರ್ ಹೇಳಿದರು.

      ನಗರದ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಮಳೆ, ಗಾಳಿ, ಬಿಸಿಲು ಹಾಗೂ ವೈಯಕ್ತಿಕ ಆರೋಗ್ಯವನ್ನು ಲೆಕ್ಕಿಸದೆ ನಿಷ್ಠವಂತರಾಗಿ ದುಡಿದು ಆರೋಗ್ಯಕರ ವಾತವರಣ ನಿರ್ಮಿಸುವ ತ್ಯಾಗಜೀವಿಗಳು. ಅವರು ವೈದ್ಯರಷ್ಟೇ ಶ್ರೇಷ್ಠತೆಯನ್ನು ಹೊಂದಿರುವಂತವರು. ಇಂತಹ ಕಾರ್ಮಿಕರಿಗೆ ಸರಕಾರಗಳು ಪ್ರತಿ ಮೂರು ತಿಂಗಳಿಗೊಮ್ಮೆ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕೆಂದು ಆಗ್ರಹಿಸಿದರು.

     ವಸತಿ ಇಲ್ಲದವರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಾಗೂ ಮನೆಗಳನ್ನು ಹಂಚುವ ಸಮಯದಲ್ಲಿ ಪೌರಕಾರ್ಮಿಕರಿಗೆ ಮೊದಲ ಆದ್ಯತೆ ನೀಡುವಂತೆ ಶಾಸಕರೊಂದಿಗೆ ಚರ್ಚಿಸಿ ಅವರಿಗೆ ಪ್ರಮಾಣೀಕವಾಗಿ ಮನೆಗಳನ್ನು ನೀಡಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಟಿ.ಚಂದ್ರಶೇಖರ್ ಮಾತನಾಡಿ ಜಿಲ್ಲೆಯಲ್ಲಿಯೇ ಸ್ವಚ್ಛತೆ ಕಾಪಾಡುವ ಕಾರ್ಯದಲ್ಲಿ ಹಿರಿಯೂರು ನಗರಸಭೆ ಮೊದಲನೇ ಸ್ಥಾನದಲ್ಲಿದ್ದು, ಆ ಪ್ರಸಂಸೆ ನಮ್ಮ ಪೌರಕಾರ್ಮಿಕರಿಗೆ ಸಲ್ಲಬೇಕು. ಇಂತಹ ಕಾರ್ಮಿಕರಿಗೆ ಉಚಿತ ಸಮವಸ್ತ್ರಗಳನ್ನು ಕಾಲಕಾಲಕ್ಕೆ ಸರಿಯಾಗಿ ಸರಬರಾಜು ಮಾಡಬೇಕೆಂದು ಆಯುಕ್ತರಿಗೆ ತಿಳಿಸಿದರು.

      ಕಾರ್ಯಕ್ರಮವನ್ನು ಪ್ರಭಾರಿ ಅಧ್ಯಕ್ಷೆ ಇಮ್ರಾನಭಾನು ಉದ್ಘಾಟಿಸಿದರು. ಆಯುಕ್ತ ರಮೇಶಸುಣಗಾರ್, ಪೌರಕಾರ್ಮಿಕ ಸಂಘದ ಅಧ್ಯಕ್ಷ ಕದುರಪ್ಪ, ನಗರಸಭೆ ಸದಸ್ಯರಾದ ಮಂಜುಳ, ವನಿತಾಹನುಮಂತಪ್ಪ, ಲಕ್ಷ್ಮೀದೇವಿ, ಪುಷ್ಪಲತಾ, ಆರೋಗ್ಯ ನೀರಿಕ್ಷಕರಾದ ಬಾಬುರೆಡ್ಡಿ, ಸುನೀಲ್, ಕಚೇರಿ ವ್ಯವಸ್ಥಾಪಕಿ ಲೀಲಾವತಿ ಹಾಗೂ ಎಲ್ಲಾ ಪೌರ ಕಾರ್ಮಿಕ ವರ್ಗದವರು ಉಪಸ್ಥಿತರಿದ್ದರು.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap