ಮಲೆಬೆನ್ನೂರು:
ಕಳೆದ ನಾಲ್ಕು ತಿಂಗಳ ವೇತನ ಪಾವತಿಸುವಂತೆ ಒತ್ತಾಯಿಸಿ ಗುತ್ತಿಗೆ ನೌಕರರು ಶುಕ್ರವಾರ ಮಲೆಬೆನ್ನೂರಿನ ನೀರಾವರಿ ನಿಗಮ ಕಚೇರಿಗೆ ಮತ್ತಿಗೆ ಹಾಕಿ ಪ್ರತಿಭಟಿಸಿದರು.
ಬಸವಾಪಟ್ಟಣ, ಮಲೆಬೆನ್ನೂರು,ಸಾಸ್ವೇಹಳ್ಳಿ ಭದ್ರಾನಾಲಾ ಉಪ ವಿಭಾಗಗಳ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿ,ವೇತನ ಪಾವತಿಯಾಗದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಒಂದು ತಿಂಗಳ ಹಿಂದೆ ಬಾಕಿ ವೇತನ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ರಾಮಪ್ಪನವರ ಎದುರು ಪ್ರಭಾರಿ ಇಇ ಗವಿಸಿದ್ದೇಶ್ವರ್ ಒಪ್ಪಿಗೆ ಸೂಚಿಸಿದ್ದರು.ಆದರೆ,ನಮ್ಮ ಮೇಲಿನ ದುರುದ್ದೇಶದಿಂದ ಇಇ ಬಿಲ್‍ಗಳನ್ನು ತಡವಾಗಿ ಕಳಿಸಿದ್ದು,ವೇತನ ಪಾವತಿಗೆ ಮತ್ತಷ್ಟು ವಿಳಂಬವಾಗಿದೆ ಎಂಧೂ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಆಚಿಜನೇಯ ಆರೋಪಿಸಿದರು.
ಪ್ರತಿ ಸಲ ಹೋರಾಟ ಮಾಡಿಯೇ ವೇತನ ಪಡೆಯಬೇಕಾಗಿದೆ. ಭಾನುವಾರವೂ ಸಹ ಕೆಲಸ ಮಾಡಿದರೂ ನಮಗೆ ತಿಂಗಳಿಗೆ 30 ದಿನದ ವೇತನದ ಬದಲಿಗೆ 26 ದಿನಗಳ ವೇತನ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಎಸ್ ಆರ್ ದರದಂತೆ ನಮಗೆ ವೇತನ ಮಾವತಿಯಾಗಬೇಕು. ತಿಂಗಳಿಗೆ 30 ದಿನದ ವೇತನ ಪಾವತಿಸಬೇಕು. ದೀಪಾವಳಿ ಹಬ್ಬದೋಳಗೆ 4 ತಿಂಗಳ ವೇತನ ನೀಡಬೇಕು.ಅಲ್ಲಿಯವರೆಗೂ ಭದ್ರಾ ನಾಲೆಯ ನೀರು ನಿರ್ವಹಣೆ ಕಾರ್ಯ ಸ್ಥಗಿತಗೊಳಿಸಿ , ಅನಿರ್ಧಿಷ್ಠಾವಧಿವರೆಗೆ ಧರಣಿ ನಡೆಸುತ್ತೇವೆ ಎಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು. ಎ.ಕೆ ಆಂಜನೇಯ, ಬಿ.ಶಿವಪ್ಪ, ಯಶವಂತ್, ಲಕ್ಕಪ್ಪ, ನೀಲಪ್ಪ, ರವಿ, ಸುರೇಶ್, ಗುರುರಾಜ್, ಜಗದೀಶ್, ಮಂಜುನಾಥ, ಶ್ವೇತ, ದಾಕ್ಷಾಯಿಣಮ್ಮ, ಮಂಜುಳಾಬಾಯಿ ,ಸಬೀನಬಾನು, ಭೀಮಾನಾಯ್ಕ್, ಬಸವರಾಜ್, ಸಿ.ರಾಜು, ಅಣ್ಣಪ್ಪ, ಮಹೇಶ್ ಮತ್ತಿತರರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ