ಎಂ ಎನ್ ಕೋಟೆ
ಗುಬ್ಬಿ ತಾಲ್ಲೂಕಿನ ಅಳಿಲಘಟ್ಟ ಗ್ರಾಮ ಪಂಚಾಯಿತಿಯ ಸಾಮಾಜಿಕ ಲೆಕ್ಕ ಪರಿಶೋಧಕ ಗ್ರಾಮ ಸಭೆ ಹಲವು ಸಮಸ್ಯೆಗಳ ನಡುವೆ ಮುಕ್ತಾಯವಾಯಿತು. ಗ್ರಾಮ ಸಭೆಗೆ ಗ್ರಾಮ ಪಂಚಾಯಿತಿಯ ಸದಸ್ಯರು ಗೈರಾಗಿದ್ದಾರೆ. ಅಧ್ಯಕ್ಷರನ್ನು ಹೊರತು ಪಡಿಸಿ ಇಬ್ಬರು ಸದಸ್ಯರನ್ನು ಬಿಟ್ಟರೆ ಬೇರೆ ಯಾವ ಸದಸ್ಯರು ಭಾಗವಹಿಸಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ರವಿ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ನಡಾವಳಿಕೆ ಪುಸ್ತಕಕ್ಕೆ ಸದಸ್ಯರು ಸಹಿ ಹಾಕಬೇಕು. ಆದರೆ ಮಹಿಳಾ ಸದಸ್ಯರುಗಳ ಬದಲು ಅವರ ಪತಿ ಸಹಿ ಮಾಡುತ್ತಾರೆ. ವಾರ್ಡ್ ಸಭೆ ಮಾಡಬೇಕು. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೂ ಮಾಡಿಲ್ಲ ಎಂದು ಅವರು ಗ್ರಾಮ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಿಳಿಸುವಲ್ಲಿ ಪಿಡಿಓ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಭೆಯಲ್ಲಿ ಪಿಡಿಓ ವಿರುದ್ಧ ಹಾರಿಹಾಯ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನಾಗರಾಜು ಮಾತನಾಡಿ, ಗ್ರಾಮ ಸಭೆಯ ನೋಟಿಸ್ ಒಂದು ವಾರದ ಮುಂಚೆ ಕೊಡಬೇಕು. ಆದರೆ ಇಲ್ಲಿನ ಪಿಡಿಓ ನಿರ್ಲಕ್ಷ್ಯ ದಿಂದ ಕಳೆದ ರಾತ್ರಿ ನೋಟೀಸ್ ಕೊಟ್ಟಿದ್ದಾರೆ. ಸಾರ್ವಜನಿಕರಿಗೆ ನಾವು ಹೇಗೆ ಹೇಳಬೇಕು. ಈ ಸಭೆಗೆ ಪಿಡಿಓ ಮಂಜುನಾಥ್ ಬರಬೇಕಿತ್ತು. ಆದರೆ ಗೈರು ಹಾಜರಾಗಿದ್ದಾರೆ ಅವರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಇಲ್ಲಿ ಯಾವ ಕೆಲಸಗಳು ಕೂಡ ಆಗುತ್ತಿಲ್ಲ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ನಮಗೆ ಹೇಳಲ್ಲ. ತುರ್ತು ಇದ್ದಾಗ ಮಾತ್ರ ನಮ್ಮ ಗಮನಕ್ಕೆ ತರುತ್ತಾರೆ. ಯಾವುದೇ ಸಭೆಗಳಿಗೆ ಒಂದು ವಾರದ ಮುಂಚೆ ನೋಟಿಸ್ ಕೊಡಬೇಕು. ನಾಳೆ ಅನ್ನಬೇಕಾದರೆ ನೋಟೀಸ್ ಕೊಡುತ್ತಾರೆ. ಗ್ರಾಮ ಸಭೆಗೆ ಊರಿನ ಗ್ರಾಮಸ್ಥರಿಗೆ ತಿಳಿಸಬೇಕು. ಇಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಪಿಡಿಓರವರ ಬೇಜವಾಬ್ದಾರಿ ತನದಿಂದ ಬಡವರಿಗೆ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಗ್ರಾಮ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕ್ ಸಂಯೋಜಕ ಹೊನ್ನಪ್ಪ ರವರು, ನಾನು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಪಿಡಿಓ ಗ್ರಾಮ ಸಭೆಗೆ ಒರಬೇಕಿತ್ತು. ಆದರೆ ಬಂದಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅವರ ವಿರುದ್ಧ ಕ್ರಮ ಕೈಗೊಳಲು ತಿಳಿಸುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶಂಕರ್ ದಿಡ್ಡಿಮಣಿ, ಅರಣ್ಯ ಅಧಿಕಾರಿ ರಾಜಣ್ಣ, ಲಿಂಗರಾಜು ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ರವಿ ಕುಮಾರ್, ಮಂಜುನಾಥ್ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








