ಗ್ರಾ ಪಂ ನಲ್ಲಿ ಪಿಡಿಓ ಹಾಗೂ ಸದಸ್ಯರ ಸಭೆ

ಹೊಸದುರ್ಗ:

    ಗ್ರಾಮದ ಘನ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣ ಘಟಕ ಸ್ಥಾಪನೆಗೆ ವಿವಿಧ ಅನುದಾನಗಳ ಮೂಲಕ 42 ಲಕ್ಷರೂ ಅನುದಾನ ಮಂಜೂರಾಗಿದ್ದು ಶೀಘ್ರವಾಗಿ ಕಾರ್ಯರೂಪಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಕೆಅನಂತ್ ಗ್ರಾಮಾಡಳಿತಕ್ಕೆ  ತಿಳಿಸಿದರು.

   ತಾಲೂಕಿನ ಶ್ರೀರಾಂಪುರ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಶನಿವಾರ ಕರೆಯಲಾಗಿದ್ದ ಗ್ರಾಪಂ ಪಿಡಿಓ ಹಾಗೂ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

       ಗ್ರಾಮದಲ್ಲಿ  ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿದೆ ಕಸ ವಿಲೇವಾರಿಯಲ್ಲಿ ಗ್ರಾಮಾಡಳಿತ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ .ತಾಲೂಕಿನ ಅತಿದೊಡ್ಡ ಹೋಬಳಿ ಕೇಂದ್ರ ಬಾಗವಾಗಿರುವ ಶ್ರೀರಾಂಪುರ ಗ್ರಾಮ ಸದ್ಯದಲ್ಲಿಯೇ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆ ಹೊಂದುವ ಎಲ್ಲಾ ಅವಕಾಶಗಳು ಇರುವ ಕಾರಣ ದಿಂದ ಮುಂದಿನ ದಿನಗಳಲ್ಲಿ ಕಸ ವಿಲೇವಾರಿ ಸಮಸ್ಯೆಯಾಗದಂತೆ ಘನತ್ಯಾಜ್ಯ ವಿಂಗಡನೆ ಹಾಗೂ ಸಂಸ್ಕರಣ ಘಟಕ ಸ್ಥಾಪನೆಗೆ ಅಗತ್ಯಜಾಗ ಗುರುತಿಸಿ ಮಂಜೂರಾತಿಗೆಅಗತ್ಯಕ್ರಮ ಕೈಗೊಳ್ಳುವಂತೆ ತಿಳಿಸಿದರು.

     ಇದಕ್ಕೆ ಪ್ರತಿಕ್ರಿಯಿಸಿ ಪಿಡಿಓ ನಾಗರಾಜಪ್ಪ ಸಂಸ್ಕರಣ ಘಟಕ ಸ್ಥಾಪನೆಗೆ ಈಗಾಗಲೇ ಗರೀಂಬೀಳು ಗೇಟ್ ಬಳಿ ಜಾಗ ಗುರುತಿಸಿ ಮಂಜೂರಾತಿಗಾಗಿ ತಹಶೀಲ್ದಾರ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

    ಗ್ರಾಮದಲ್ಲಿ ಸಮರ್ಪಕ ನೀರು ಸರಬರಾಜು ಮಾಡಲು ಅನುಕೂಲವಾಗುವಂತೆ ಮದ್ಯಂತರ ನೀರು ಸರಬರಾಜು ಕೇಂದ್ರ ತೆರೆದು ಅಲ್ಲಿ ಬೃಹದಾಕಾರದ ತೊಟ್ಟಿ ನಿರ್ಮಿಸಿ ಎಲ್ಲಾ ಬೋರ್‍ವೆಲ್ ಗಳ ನೀರನ್ನು ಒಂದು ಕಡೆ ಸಂಗ್ರಹಿಸಿ ಅದರ ಮೂಲಕ ಎಲ್ಲಾ ಭಾಗಗಳಿಗೂ ಸೂಕ್ತ ರೀತಿಯಲ್ಲಿ ನೀರು ಸರಬರಾಜಾಗುವಂತೆ ಹೊಸದಾಗಿ ಪೈಪ್ ಲೈನ್ ಅಳವಡಿಕೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು 15 ಲಕ್ಷ ಅನುದಾನ ನೀಡಲಾಗಿದೆಎಂದು ತಿಳಿಸಿದರು.

    ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಸುಮತಿ ನಿರಂಜನಮೂರ್ತಿ, ತಾಪಂ ಸದಸ್ಯ ಹಾಲಪ್ಪ, ಸದಸ್ಯರಾದ ಸೋಮಶೇಖರ್, ರೇವಣ್ಣ, ಇಂದ್ರಮ್ಮ ಮುಂತಾದ ಸದಸ್ಯರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link