ಜಿಲ್ಲೆಯಲ್ಲಿ ಶೇ. 75ರಷ್ಟು ಮತ ಚಲಾವಣೆ
ತುಮಕೂರು:
ವಿಧಾನಪರಿಷತ್ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬುಧವಾರ ಚುನಾವಣೆ ನಡೆದಿದ್ದು, ಮತದಾನ ಬಹುತೇಕ ಶಾಂತಿಯುತವಾಗಿ ಜರುಗಿರುವುದು ಜಿಲ್ಲೆಯಲ್ಲಿ ಕಂಡುಬಂದಿದೆ.
ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆಯ 32 ತಾಲೂಕುಗಳನ್ನೊಳಗೊಂಡ ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಅತೀ ಹೆಚ್ಚು ಮತದಾರರು ತುಮಕೂರು ಜಿಲ್ಲೆಯಲ್ಲಿದ್ದು, ಒಟ್ಟು 29,415 ಮತದಾರರ ಪೈಕಿ ಪುರುಷರು, ಮಹಿಳೆಯರು ಸೇರಿ ಒಟ್ಟು ಮಂದಿಉ ಮತ ಚಲಾಯಿಸಿದ್ದು ಶೇ. ಶೇ.75 ರಷ್ಟು ಮತ ಚಲಾವಣೆ ಪ್ರಮಾಣ ದಾಖಲಾಗಿದೆ. ನ.2ರಂದು ಮತ ಎಣಿಕೆ ನಡೆಯಲಿದೆ.
ನಿಯಮ ಪಾಲಿಸಿ ಮತ ಚಲಾವಣೆ:
ಜಿಲ್ಲೆಯಲ್ಲಿ ಒಟ್ಟು 64 ಮತ ಕೇಂದ್ರಗಳನ್ನು ತೆರೆದಿದ್ದು, ಕೋವಿಡ್ ಮುಂಜಾಗ್ರತ ನಿಯಮಗಳ ಪಾಲನೆಗೆ ಮತಗಟ್ಟೆಯಲ್ಲಿ ಒತ್ತುಕೊಡಲಾಗಿತ್ತು. ಮತಗಟ್ಟೆಗೆ ಆಗಮಿಸುವ ಪದವೀಧರರನ್ನು 6 ಅಡಿ ಸಾಮಾಜಿಕ ಅಂತರದೊಂದಿಗೆ ಸರತಿ ಸಾಲಿನಲ್ಲಿ ನಿಲ್ಲಿಸಲಾಯಿತಲ್ಲದೇ, ಕೈಗೆ ಹ್ಯಾಂಡ್ ಸ್ಯಾನಿಟೈಜರ್, ಗ್ಲ್ಯಾಸ್‍ಗಳನ್ನು ಹಾಕಿ ಪ್ರಾಶಸ್ತ್ಯ ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಮತಗಟ್ಟೆ ಕೇಂದ್ರಗಳ ಬಳಿ ಪೊಲೀಸ್ ಪಹರೆಯನ್ನು ಹಾಕಲಾಗಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳು ಶಾಮಿಯಾನ ಟೇಬಲ್ ಹಾಕಿ ಕುಳಿತು ಮತದಾರರಿಗೆ ಮತದಾನದ ಕ್ರಮ ಸಂಖ್ಯೆ ಚೀಟಿ ಬರೆದುಕೊಟ್ಟು, ತಮ್ಮ ಅಭ್ಯರ್ಥಿಪರ ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಆರಂಭದಲ್ಲಿ ನೀರಸ ನಂತರ ಬಿರುಸು:
ಬೆಳಿಗ್ಗೆ 8ಕ್ಕೆ ಮತ ಚಲಾವಣೆ ಆರಂಭಗೊಂಡರೂ 10ರವೇಳೆಗೆ ಶೇ.10.6ರಷ್ಟು ಮಾತ್ರ ಮತ ಚಲಾವಣೆಯಾಗಿದ್ದರೆ. ಮಧ್ಯಾಹ್ನ 12ಕ್ಕೆ ಶೇ.29.6ರಷ್ಟು ಮತ ಚಲಾವಣೆ ಪ್ರಮಾಣ ಕಂಡುಬಂತು. ಮಧ್ಯಾಹ್ನ 2ರವೇಳೆಗೆ ಶೇ.52ರಷ್ಟು ಮತಪ್ರಮಾಣ ದಾಖಲಾಗಿದ್ದರೆ, ಸಂಜೆ 4ಕ್ಕೆ ಶೇ.69ರಷ್ಟು ಮತ ಪ್ರಮಾಣ ದಾಖಲಾಗಿತ್ತು. ಮತದಾನ ಕೊನೆಗೊಂಡ ಸಂಜೆ 5ರ ವೇಳೆಗೆ ಶೇ ರಷ್ಟು ಮತಪ್ರಮಾಣ ದಾಖಲಾಗಿದ್ದು, ವಿಶೇಷವೆನಿಸಿತು. ಗ್ರಾಮೀಣ ಭಾಗದಲ್ಲಿ ನಗರ, ಪಟ್ಟಣ ಪ್ರದೇಶದಲ್ಲಿ ಮತದಾನ ಬಿರುಸಾಗಿ ನಡೆದಿದ್ದು ಕಂಡುಬಂತು. 85 ವರ್ಷ ದಾಟಿದ ಹಿರಿಯ ಪದವೀಧರರು ಸಹ ಉತ್ಸಾಹದಿಂದ ಬಂದು ನಿಟ್ಟೂರು ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಗಣ್ಯರು, ಅಭ್ಯರ್ಥಿಗಳ ಮತದಾನ:
ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ, ಚಿಕ್ಕನಾಯಕನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮೇಶ್‍ಬಾಬು, ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ತೂಪಲ್ಲಿ ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಮತ ಚಲಾಯಿಸಿದರು. ಪಕ್ಷೇತರ ಅಭ್ಯರ್ಥಿಗಳ ಪೈಕಿ ಪ್ರಮುಖರಾದ ಡಿ.ಟಿ.ಶ್ರೀನಿವಾಸ್ ಹಿರಿಯೂರು ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ, ಹಾಲನೂರು ಲೇಪಾಕ್ಷಿ, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಯುವಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ ಅವರು ಕ್ಯಾತ್ಸಂದ್ರ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಸಿದ್ಧಗಂಗಾ ಕಾಲೇಜು ಮತಗಟ್ಟೆಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಂಸದ ಜಿ.ಎಸ್.ಬಸವರಾಜು ಮತದಾನ ಮಾಡಿದರು.
ವಿವಿಧ ಮತಗಟ್ಟೆಗಳಿಗೆ ಅಭ್ಯರ್ಥಿಗಳ ಭೇಟಿ:
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು ಕ್ಷೇತ್ರ ವ್ಯಾಪ್ತಿಯ ವಿವಿಧ ಮತಗಟ್ಟೆಗಳಿಗೆ ಭೇಟಿ ಮಾಡಿ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿ, ಕಡೇ ಕ್ಷಣದಲ್ಲಿ ಮತದಾರರ ಬಳಿ ಮತಯಾಚಿಸುತ್ತಿದ್ದ ದೃಶ್ಯವೂ ಕಂಡು ಬಂತು. ಮತದಾನ ಕೇಂದ್ರದ ಹೊರಗಡೆ ಟೇಬಲ್ ಹಾಕಿಕೊಂಡು ಕುಳಿತುಕೊಂಡಿದ್ದ ಬೂತ್ ಏಜೆಂಟರುಗಳು ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳಿಗೆ ಇಷ್ಟು ಮತ ತಮ್ಮ ಅಭ್ಯರ್ಥಿಗಳಿಗೆ ಇಷ್ಟು ಮತ ಬಿದ್ದಿದೆ ಎಂಬ ಲೆಕ್ಕಚಾರದಲ್ಲಿ ತೊಡಗಿದ್ದ ದೃಶ್ಯವೂ ಕಂಡುಬಂತು. ಆ ಪಕ್ಷದವರು ಒಂದು ಮತಕ್ಕೆ ಇಷ್ಟು ಕೊಟ್ಟಿದ್ದಾರೆ, ಈ ಪಕ್ಷದವರು ಇಷ್ಟು ಕೊಟ್ಟಿದ್ದಾರೆ ಎಂಬ ಗುಸುಗುಸವೂ ಮತಗಟ್ಟೆ ಕೇಂದ್ರದ ಬಳಿ ಕೇಳಿಬಂತು. ಅಭಿವೃದ್ಧಿ ವಿಚಾರಗಳಿಗಿಂತ ಪಕ್ಷ, ಜಾತಿ, ಹಣದ ಸಂಗತಿಗಳು ಈ ಬಾರಿಯ ಚುನಾವಣೆಯಲ್ಲಿ ಮಹತ್ವ ಪಡೆದಿದ್ದವು.
ಮತದಾನ ಮುಗಿಯುತ್ತಲೇ ಬೆಟ್ಟಿಂಗ್:
ಮತದಾನ ಸಂಜೆ 5ಕ್ಕೆ ಮುಗಿಯುತ್ತಲೇ ತಮ್ಮ ತಮ್ಮ ಬೂತ್‍ಗಳಲ್ಲಿ ಆಗಿರುವ ಮತ ಪ್ರಮಾಣದ ಆಧಾರದಲ್ಲಿ ನಮ್ಮ ಬೂತ್‍ನಲ್ಲಿ ಇವರು ಇಷ್ಟು ಲೀಡ್ ಪಡೆಯುವುದು ಗ್ಯಾರಂಟಿ, ಇವರು ಗೆದ್ದೆ ಗೆಲ್ಲುತ್ತಾರೆ ಎಂದು ಬೆಟ್ಟಿಂಗ್‍ಗಳನ್ನು ಕಟ್ಟಿಕೊಳ್ಳುತ್ತಿರುವುದು ಪದವೀಧರ ಹಾಗೂ ಶಿಕ್ಷಕರ ಮತದಾರ ವಲಯದಲ್ಲಿ ಕಂಡುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
