ಚಿತ್ರದುರ್ಗ:
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತುಮಕೂರು, ಚಿತ್ರದುರ್ಗ, ದಾವಣಗೆರೆ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲು ದೇಶದ ಪ್ರಧಾನಿ ನರೇಂದ್ರಮೋದಿರವರು ಏ.8 ರಂದು ಚಿತ್ರದುರ್ಗಕ್ಕೆ ಆಗಮಿಸುತ್ತಿರುವುದರಿಂದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬೃಹತ್ ಪೆಂಡಾಲ್ ನಿರ್ಮಾಣಕ್ಕೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎ.ನಾರಾಯಣಸ್ವಾಮಿ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಅತ್ಯಾಧುನಿಕ ಪೆಂಡಾಲ್ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದ ಅಭ್ಯರ್ಥಿ ಎ.ನಾರಾಯಣಸ್ವಾಮಿ ಸ್ವಚ್ಚ ಹಾಗೂ ಪಾರದರ್ಶಕ ಆಡಳಿತ ನಡೆಸಿ ನಾಲ್ಕುವರೆ ವರ್ಷಗಳ ಕಾಲ ದೇಶವನ್ನು ಸುಭದ್ರವಾಗಿರಿಸಿರುವ ಪ್ರಧಾನಿ ನರೇಂದ್ರಮೋದಿರವರು ಮತ್ತೊಮ್ಮೆ ದೇಶಕ್ಕೆ ಪ್ರಧಾನಿಯಾಗಬೇಕಾಗಿರುವುದರಿಂದ ಸಾಗರೋಪಾದಿಯಲ್ಲಿ ಜನ ಮೋದಿರವರನ್ನು ನೋಡಲು ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಗಿ ಭದ್ರತೆಯಿರುವುದರಿಂದ ಕ್ಷೇತ್ರದ ಮತದಾರರು ಹಾಗೂ ಸಾರ್ವಜನಿಕರು ನಿಗಧಿತ ಸಮಯದೊಳಗೆ ಬರಬೇಕೆಂದು ಮನವಿ ಮಾಡಿದರು.
ಬಿಜೆಪಿ.ಗೆ ತತ್ವ ಸಿದ್ದಾಂತ, ದೇಶಭಕ್ತಿ ಮುಖ್ಯವೇ ವಿನಃ ಮಾಠ, ಮಂತ್ರ, ವಾಸ್ತು, ನಿಂಬೆಹಣ್ಣು ಇವುಗಳಲ್ಲ. ಭಾರತೀಯರ ಸಂಪ್ರದಾಯದಂತೆ ಧರ್ಮವನ್ನು ಎತ್ತಿಹಿಡಿಯುವುದೇ ಬಿಜೆಪಿ.ಮೂಲ ಉದ್ದೇಶ. ಮಾಠ, ಮಂತ್ರ, ನಿಂಬೆಹಣ್ಣು ಏನಿದ್ದರೂ ಜೆಡಿಎಸ್.ನ ರೇವಣ್ಣನಿಗೆ ಬಿಟ್ಟಿದ್ದೇವೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಲೋಕಸಭಾ ಉಸ್ತುವಾರಿ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಪ್ರಭಾರಿ ಟಿ.ಜಿ.ನರೇಂದ್ರನಾಥ್, ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್, ಶಿವಣ್ಣಾಚಾರ್, ವಕ್ತಾರ ನಾಗರಾಜ್ ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವೆಂಕಟೇಶ್‍ಯಾದವ್, ರಂಗಸ್ವಾಮಿ, ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷೆ ಶ್ಯಾಮಲಶಿವಪ್ರಕಾಶ್, ರೇಖ, ರಾಜೇಶ್ ಬುರುಡೆಕಟ್ಟೆ, ಚೇತು ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.