ಬೆಂಗಳೂರು
ಅಪರೂಪದ ಕಂಕಣ ಸೂರ್ಯಗ್ರಹಣವು ಗುರುವಾರ ಬೆಳಿಗ್ಗೆ 8 ಗಂಟೆ 44 ನಿಮಿಷಕ್ಕೆ ಗ್ರಹಣ ಸ್ಪರ್ಶಿಸಿ ಬೆಳಿಗ್ಗೆ 11.04ರ ಹೊತ್ತಿಗೆ ಪೂರ್ಣಗೊಳ್ಳಲಿದ್ದು ಇದರ ವೀಕ್ಷಣೆಗೆ ಜನತೆ ಕಾತರಿದಿಂದ ಕಾಯತೊಡಗಿದ್ದಾರೆ.ಗ್ರಹಣ ಪೂರ್ಣ ಪ್ರಮಾಣದಲ್ಲಿ ಬೆಳಿಗ್ಗೆ 9.30ರ ವೇಳೆಗೆ ಗೊಚರಿಸಲಿದೆ ಮಂಗಳೂರು, ಉಡುಪಿ ಮತ್ತು ಕೊಡಗಿನಲ್ಲಿ ಸೂರ್ಯ ಗ್ರಹಣ ಸ್ಪಷ್ಟವಾಗಿ ಗೊಚರಿಸಿದೆ ಉಳಿದೆಡೆ ಭಾಗಶಃವಾಗಿ ಕಾಣಿಸಲಿದೆ.
ಆಕಾಶದಲ್ಲಿ ನಡೆಯಲಿರುವ ಈ ವಿದ್ಯಾಮಾನವನ್ನು ನೋಡಲು ಖಗೋಳ ವಿಜ್ಞಾನಿಗಳು, ಜೋತಿಷಿಗಳು ಅಷ್ಟೇ ಅಲ್ಲದೇ ವಿದ್ಯಾರ್ಥಿಗಳು ಕೂಡ ಕಾತುರರಾಗಿ ಕ್ಷಣಗಣನೆಯಲ್ಲಿ ತೊಡಗಿದ್ದಾರೆ.
ಕಂಕಣ ಸೂರ್ಯ ಗ್ರಹಣ ಭಾರತದಲ್ಲಿ ಮಾತ್ರವಲ್ಲದೇ ಸೌದಿ ಅರೇಬಿಯಾ, ಒಮಾನ್, ಶ್ರೀಲಂತಾ, ಇಂಡೋನೇಷ್ಯಾ, ಸಿಂಗಪುರ, ಮತ್ತಿತರ ದೇಶಗಳಲ್ಲಿ ಕಾಣಿಸಿಕೊಳ್ಳಲಿದೆ.10 ವರ್ಷಗಳ ಹಿಂದೆ 2010ರ ಜ. 15 ರಂದು ಕಂಕಣ ಸೂರ್ಯ ಗ್ರಹಣ 11 ನಿಮಿಷ 8 ಸೆಂಕೆಡ್ ಗಳ ಕಾಲ ಸಂಭವಿಸಲಿದೆ.
ಹಲವು ದೇವಾಲಯಗಳಲ್ಲಿ ಗ್ರಹಣ ದೋಷ ನಿವಾರಣೆಗೆ ಹೋಮ, ಪೂಜೆಗೆ ಸಿದ್ಧತೆಗಳು ನಡೆಯುತ್ತಿವೆ. ಮನೆ ಮನೆಗಳಲ್ಲಿ ಹೆಂಗಸರು ಗ್ರಹಣದ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನಾಳೆ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ದೇವಾಲಯಗಳ ದೇವರ ದರ್ಶನದ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ
ಧರ್ಮಸ್ಥಳದಲ್ಲಿ ಡಿ. 26ರಂದು ಮಧ್ಯಾಹ್ನ 12 ಗಂಟೆ ನಂತರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ ನಡೆಯುತ್ತಿದ್ದ ದೇವರ ದರ್ಶನ, ತುಲಾ ಭಾರ, ಅಭಿಷೇಕ ಸೇವೆಗಳನ್ನು ಅಂದು ರದ್ದುಪಡಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿಯೂ ದರ್ಶನ ವ್ಯತ್ಯಯವಾಗಲಿದೆ.
ಕುಕ್ಕೆಯಲ್ಲಿ ಸಂಜೆ 5 ಗಂಟೆಗೆ ದರ್ಶನ ಗ್ರಹಣದ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಮಣ್ಯದಲ್ಲಿ ಸಂಜೆ 5 ಗಂಟೆ ನಂತರ ಭಕ್ತರಿಗೆ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ.
ಬರಿಗಣ್ಣಿನಿಂದ ಬೇಡ
ಕಂಕಣ ಸೂರ್ಯಗ್ರಹಣ ನೋಡಲು ಚೆನ್ನಾಗಿರುವಂತೆ ಕಂಡರೂ ಇದನ್ನು ಬರಿಗಣ್ಣಿನಿಂದ ನೋಡಬಾರದು. ಮಸೂರ ದೂರದರ್ಶಕಗಳನ್ನು ಬಳಸಬೇಕು. ಕಿರಣಗಳು ತೀಷ್ಣವಾಗಿರುವುದರಿಂದ ಇವುಗಳ ಬಳಕೆಯಿಲ್ಲದೆ ಬರಿಗಣ್ಣಿನಿಂದ ನೋಡಬಾರದು. ಗ್ರಹಣಕಾಲದಲ್ಲಿ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದು ಮೂರು ಒಂದೇ ಸರಣ ರೇಖೆಯಲ್ಲಿರುವುದರಿಂದ ಗುರುತ್ವಾಕರ್ಷಣೆ ಏರುಪೇರಾಗಲಿದೆ. ಇದರಿಂದ ನಿಸರ್ಗದಲ್ಲೂ ಸಾಕಷ್ಟು ಬದಲಾವಣೆಯಾಗಲಿದೆ.ಜವಹಾರ್‌ಲಾಲ್ ನೆಹರು ತಾರಾಲಯದಲ್ಲಿಸಾರ್ವಜನಿಕರು ಸೂರ್ಯ ಗ್ರಹಣ ವೀಕ್ಷಿಸಲು ಟೆಲಿಸ್ಕೋಪ್‌ಗಳ ವ್ಯವಸ್ಥೆ ಮಾಡಲಾಗಿದೆ.