ತಿಪಟೂರು 

ತನ್ನ ಹೊತ್ತಿನ ತುತ್ತಿನ ಚೀಲವನ್ನು ತುಂಬಿಸಿಕೊಳ್ಳಲು ಜೀವಿಗಳು ಪ್ರಕೃತಿಯಲ್ಲಿ ಒಂದಲ್ಲಾ ಒಂದು ಸಾಹಸವನ್ನು ಮಾಡುವುದು ಮಾಮೂಲಿ. ಆದರೆ ತಿಪಟೂರು ನಗರದಲ್ಲಿ ವಲಸೆ ಹಕ್ಕಿಗಳ ಕಲರವ ಕೇಳಿಬರುತ್ತಿದೆ.
ನಗರದಲ್ಲಿ ಅದ್ದೂರಿ ಗಣಪತಿ ಜಾತ್ರೆ ನ. 23 ಮತ್ತು 24 ರಂದು ನಡೆಯುತ್ತಿದ್ದು, ಇದಕ್ಕಾಗಿ ದೇಶದ ಮೂಲೆಮೂಲೆಗಳಿಂದ ಮನರಂಜನೆ ಮತ್ತು ಭಕ್ತಿಗಾಗಿ ಆಗಮಿಸುತ್ತಿರುವುದು ವಿಶೇಷ. ಆದರೆ ಇದೇ ಜಾತ್ರೆಯು ಎಷ್ಟೊ ಜನರ ತುತ್ತಿನ ಚೀಲವನ್ನು ತುಂಬುತ್ತಿರುವುದು ಎಷ್ಟೊ ಜನರಿಗೆ ಗೊತ್ತೆ ಇಲ್ಲ.
ಜಾತ್ರೆಯಲ್ಲಿ ವಿವಿಧ ಬಗೆಯ ಆಟಿಕೆಗಳು, ಅಲಂಕಾರಿಕ ವಸ್ತುಗಳು, ಬಟ್ಟೆ, ಚಪ್ಪಲಿ, ಪುರಿ-ಖಾರ, ಬೆಂಡು ಬತ್ತಾಸು, ಸರ್ಕಸ್, ಅಮ್ಯೂಸ್‍ಮೆಂಟ್ ಪಾರ್ಕ್ ಮತ್ತು ವಿವಿಧ ರೀತಿಯ ಬಲೂನ್ ಗಳನ್ನು ಮಾರುತ್ತಾ ಜಾತ್ರೆ ಜಾತ್ರೆಗಳನ್ನು ಸುತ್ತಿ ತಮ್ಮ ತುತ್ತಿನ ಚೀಲಗಳನ್ನು ತುಂಬಿಸಿಕೊಳ್ಳುತ್ತಿದ್ದಾರೆ.
ಉತ್ತರ ಪ್ರದೇಶದಿಂದ ಬಂದಿರುವ ತಂಡ :
ಈ ಬಾರಿ ಜಾತ್ರೆಯ ವಿಶೇಷವೆಂದರೆ ಉತ್ತರ ಪ್ರದೇಶದಿಂದ ಜನರು ಮಕ್ಕಳು ಮರಿಯೊಂದಿಗೆ ತಮ್ಮ ವಿದ್ಯಾಭ್ಯಾಸವನ್ನು ಬದಿಗೊತ್ತಿ ತುತ್ತಿನ ಚೀಲವನ್ನು ತುಂಬಿಸಿಕೊಳ್ಳಲು ಸಮಾರು 30 ರಿಂದ 50 ಜನರು ನಗರಕ್ಕಾಗಿಮಿಸಿದ್ದಾರೆ. ಇವರು ವಿವಿಧ ಬಗೆಯ ಪೀಪಿಗಳು, ಬಲೂನ್‍ಗಳು, ಕೊಳಲು ಇನ್ನಿತರ ಆಟಿಕೆಗಳನ್ನು ಮಾರುತ್ತಾ ತಮ್ಮ ಜೀವನ ನಿರ್ವಹಿಸುತ್ತಿದ್ದಾರೆ. ವ್ಯಾಪಾರ ಕಡಿಮೆ ಎನ್ನುತ್ತಿದ್ದಾರೆ. ಆದರೂ ಇವರೆ ಹೇಳುವಂತೆ ನಾಳೆ, ನಾಡಿದ್ದು ಇನ್ನು ಹೆಚ್ಚಿನ ಭಕ್ತರು ಬರುತ್ತಾರೆ, ನಾವು ಕಳೆದ ಬಾರಿಯೂ ಬಂದಿದ್ದೆವು. ಆಗ ಉತ್ತಮವಾಗಿ ವ್ಯಾಪಾರವಾಗಿತ್ತು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
