ಹದಗೆಟ್ಟ ರಸ್ತೆ : ಜಿಪಂ, ಪಿಡಬ್ಲ್ಯುಡಿ ಇಲಾಖೆಗೆ ಗ್ರಾಮಸ್ಥರಿಂದ ಹಿಡಿ ಶಾಪ

ಹೊಸದುರ್ಗ

    ತಾಲೂಕಿನ ಜೋಡಿ ತುಂಬಿನಕೆರೆ ಬಳಿ ರಸ್ತೆ ಮದ್ಯೆದಲ್ಲಿ ಸೇತುವೆ ಕುಸಿದಿದ್ದು ರಸ್ತೆ ತುಂಬಾ ತ್ಯಾಪೆಯಿಂದ ಸಂಪೂರ್ಣ ಹದಗೆಟ್ಟಿದ್ದು ವಾಹನ ಸವಾರರು ಕಳೆದ ಮೂರ್ನಾಲ್ಕು ದಿನಗಳಿಂದ ಸಂಬಂಧಪಟ್ಟ ಪಿಡಬ್ಲ್ಯುಡಿ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿಯವರಿಗೆ ಕರೆ ಮಾಡಿ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಇಡೀ ಶಾಪ ಹಾಕುತ್ತಿದ್ದಾರೆ.

     ಮಾವಿನಕಟ್ಟೆ ಬೀಸನಹಳ್ಳಿ ಮಾರ್ಗವಾಗಿ ಜೋಡಿ ತುಂಬಿನಕೆರೆ ನಾಗರಕಟ್ಟೆ ಎನ್ ಜಿ ಹಳ್ಳಿ ಹೆಬ್ಬಳ್ಳಿ ಕಡಿವಾಣಕಟ್ಟೆ ಮೂಲಕ ಮಲ್ಲಪ್ಪನಹಳ್ಳಿ ರಸ್ತೆಯನ್ನು ಸಂಧಿಸುವ ರಸ್ತೆ ಮಾರ್ಗ ಇದಾಗಿರುತ್ತದೆ. ದಿನನಿತ್ಯ ನೂರಾರು ವಾಹನಗಳು, ಶಾಲಾಮಕ್ಕಳು ಓಡಾಡುವ ರಸ್ತೆ ಇದಾಗಿದ್ದು ಕುಸಿದಿರುವ ಸೇತುವೆಯನ್ನು ದುರಸ್ತಿಪಡಿಸುವ ಕಾರ್ಯ ನಡೆಸದೇ ಇರುವುದು ಗ್ರಾಮಸ್ಥರಿಗೆ ನುಂಗಲಾರದ ತುತ್ತಾಗಿದೆ.

ರಸ್ತೆ ತುಂಬೆಲ್ಲಾ ತ್ಯಾಪೆಗಳು :

      ಸುಮಾರು ಹತ್ತು ವರ್ಷಗಳಿಂದ ರಸ್ತೆ ಹಾಳಾದರೆ ತ್ಯಾಪೆ ಹಾಕಿಕೊಂಡು ಬರುತ್ತಿದ್ದಾರೆ. ಹೀಗಿದ್ದರೂ ಶಾಶ್ವತವಾಗಿ ದುರಸ್ತಿಗೊಳಿಸುವ ಕೆಲಸವನ್ನು ಸಂಬಂಧಪಟ್ಟ ಇಲಾಖೆ ನಿರ್ವಹಿಸಿಲ್ಲ. ಹತ್ತಾರು ಗ್ರಾಮಗಳ ನಡುವೆ ಈ ರಸ್ತೆ ಹಾದುಹೋಗಿದೆ. ರಸ್ತೆ ಗುಂಡಿಗಳಲ್ಲಿ ಮಳೆಯ ನೀರು ನಿಂತು ವಾಹನಗಳು ಸಂಚರಿಸುವ ವೇಳೆ ಪ್ರಯಾಣಿಕರಿಗೆ ಕೆಸರು ಎರೆಚಂತಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೆಲ ಗ್ರಾಮಸ್ಥರು ಆಕ್ರೋಶ ಆಗಿರುವುದುಂಟು.

       ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದರು ಅವರು ಕ್ರಮ ಕೈಗೊಳ್ಳದಿರುವುದು ತುಂಬಾ ಬೇಸರವಾಗಿದ್ದು ಮುಂದೆ ಆಗುವ ಅನಾಹುತಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಹೊಣೆಗಾರರಾಗಿರುತ್ತಾರೆ ಎಂದು ದೂರಿದ ಗ್ರಾಮಸ್ಥರು ತಕ್ಷಣವೇ ಜಿಲ್ಲಾಧಿಕಾರಿಗಳು ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap