ಜನ್ ಧನ್ ಹಣ ಪಡೆಯಲು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲುತ್ತಿರುವ ಬಡ ಜನ

ಚಿಕ್ಕನಾಯಕನಹಳ್ಳಿ :
    ಕೇಂದ್ರ ಸರ್ಕಾರ ಬಡವರ ಜನ್ ಧನ್ ಬ್ಯಾಂಕ್ ಖಾತೆಗಳಿಗೆ 500.ರೂ ಜಮೆ ಮಾಡಿದ್ದು ಹಣ ಡ್ರಾ ಮಾಡಿಕೊಳ್ಳಲು ಹಲವು ಜನರು ಬ್ಯಾಂಕ್ ಗಳ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
    ಪಟ್ಟಣದ ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗಳ ಮುಂದೆ ಜನರು ಸರತಿ ಸಾಲಿನಲ್ಲಿ, ದೈಹಿಕ ಅಂತರ ಕಾಯ್ದುಕೊಂಡು, ಕೇಂದ್ರ ಸರ್ಕಾರ ಘೋಷಿಸಿರುವ ಹಣ ಖಾತೆಗಳಿಗೆ ಬಂದಿದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸುತ್ತಿದ್ದಾರೆ, ಕೆಲವರು ಹಣ ಬಿಡಿಸಿಕೊಳ್ಳುತ್ತಿದ್ದಾರೆ.
    ಕೊರೋನಾ ಹಿನ್ನೆಲೆಯಲ್ಲಿ ಬಡವರಿಗೆ ಐವತ್ತು-ನೂರು ರೂಗಳು ಅಗತ್ಯವಾಗಿರುವುದರಿಂದ ಕೇಂದ್ರ ಸರ್ಕಾರ ಜನ್ ಧನ್ ಖಾತೆಯ ಫಲಾನುಭವಿಗಳು ಗಂಟೆ ಗಟ್ಟಲೆ ಕ್ಯೂನಲ್ಲಿ ನಿಂತು ಹಣಕ್ಕಾಗಿ ಹವಣಿಸುತ್ತಿರುವುದು ಸಾಮಾನ್ಯವಾಗಿದೆ .ಪಟ್ಟಣದ ಕೆನರಾ ಬ್ಯಾಂಕ್ ನಲ್ಲಿ ಹಣ ಹಿಂಪಡೆಯಲು ಹಾಗೂ ಬ್ಯಾಂಕಿನ ಒಳಗೆ ಹೋಗುವ ಪ್ರತಿ ಗ್ರಾಹಕರಿಗೂ ಸ್ಯಾನಿಟೈಸರ್ ನ್ನು ಹಾಕಿ ಒಬ್ಬೊಬ್ಬರನ್ನೇ ಒಳಗಡೆ ಬಿಡುತ್ತಿರುವುದು ಕಂಡು ಬಂದಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link