ಕೊರಟಗೆರೆ : ಸೀಲ್‍ಡೌನ್ ನಿವಾಸಿಗಳ ನಿರ್ಲಕ್ಷ್ಯ  

ಕೊರಟಗೆರೆ

     ತಾಲ್ಲೂಕಿನ ಕಾಮರಾಜನಹಳ್ಳಿ ಗ್ರಾಮದಲ್ಲಿ ಕೊರೋನಾ ಪಾಸಿಟಿವ್ ಬಂದ ವ್ಯಕ್ತಿ ಮನೆಯ ರಸ್ತೆಯಲ್ಲಿ 5 ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಆದರೆ ಅಲ್ಲಿನ ನಿವಾಸಿಗಳ ಬಗ್ಗೆ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದ್ದು, ಉಪವಾಸ ಇರುವ ಪರಿಸ್ಥಿತಿ ತಂದೊಡ್ಡಿದೆ. ಈ ಹಂತದಲ್ಲಿ ಫೇಂಡ್ಸ್ ಗ್ರೂಪ್ ನವರು ವರಮಹಾಲಕ್ಷ್ಮೀ ಹಬ್ಬದಂದು ಆಹಾರ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

     ಕಳೆದ ಐದು ದಿನಗಳ ಹಿಂದೆ ತಾಲ್ಲೂಕಿನ ಕಾಮರಾಜನಹಳ್ಳಿ ಗ್ರಾಮದಲ್ಲಿ ಕೊರೋನಾ ಪಾಸಿಟಿವ್ ಬಂದ ವ್ಯಕ್ತಿಯ ಮನೆಯ ರಸ್ತೆಯಲ್ಲಿನ ಕೂಲಿ ಕಾರ್ಮಿಕರ 5 ಮನೆಗಳನ್ನು ಹೂಲಿಕುಂಟೆ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತ ಇವರನ್ನು ಹೋಂ ಕ್ವಾರಂಟೈನ್‍ಗಳನ್ನಾಗಿ ಮಾಡಿದ್ದಾರೆ. ಯಾರೂ ಹೊರಗೆ ಬರಬಾರದು, ಇವರ ಬಗ್ಗೆ ಅಕ್ಕ ಪಕ್ಕದ ಮನೆಗಳ ನಿವಾಸಿಗಳು ಗಮನ ಹರಿಸಿ ಎಂದು ಎಚ್ಚರಿಸಿ, ಸರ್ಕಾರದ ಆದೇಶದಂತೆ ನಾಮ ಫಲಕ ಹಾಕಿ ಬಂದಿದ್ದಾರೆ.

    ಆದರೆ ಸರ್ಕಾರದ ಆದೇಶದಂತೆ ಸೀಲ್‍ಡೌನ್ ಆದ ಮನೆಗಳಿಗೆ ತಾಲ್ಲೂಕು ಆಡಳಿತ ಆಹಾರ ಪದಾರ್ಥಗಳು ಸೇರಿದಂತೆ ಕುಡಿಯುವ ನೀರು ಮತ್ತು ಚಿಕ್ಕ ಮಕ್ಕಳಿಗೆ ಹಾಲು ಸಹ ನೀಡದೆ ಉಪವಾಸ ಬೀಳುವ ಪರಿಸ್ಥಿತಿ ಒದಗಿದೆ. ಈ ಸಂದರ್ಭದಲ್ಲಿ ಕಾಮರಾಜನಹಳ್ಳಿ ನಿವಾಸಿಯೊಬ್ಬರು ಇವರ ಪರಿಸ್ಥಿತಿ ಅರಿತು, ಕೊರಟಗೆರೆ ಪಟ್ಟಣದ ಸೇವಾ ಮನೋಭಾವ ಉಳ್ಳ ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ರವಿಕುಮಾರ್‍ಗೆ ದೂರವಾಣಿ ಮೂಲಕ ಸೀಲ್ ಡೌನ್ ನಿವಾಸಿಗಳ ಪರಿಸ್ಥಿತಿ ವಿವರಿಸಿದ್ದಾರೆ. ಆಗ ತಕ್ಷಣ ಗ್ರೂಪ್‍ನವರು ವರಮಹಾಲಕ್ಷ್ಮೀ ಹಬ್ಬದಂದು 5 ಮನೆಗಳಿಗೆ ಆಹಾರದ ಕಿಟ್ ಗಳನ್ನು ಒದಗಿಸಿ ಮಾನವೀಯತೆ ಮೆರೆದಿದ್ದಾರೆ.

     ಕೊರೋನಾ ರೋಗ ನಿವಾರಣೆಗೆ ರಾಜ್ಯ ಸರ್ಕಾರ ಲಕ್ಷಾಂತರ ರೂ.ಗಳನ್ನು ವೆಚ್ಚ ಮಾಡುತ್ತಿದ್ದರೂ, ಕೊರಟಗೆರೆ ತಾಲ್ಲೂಕಿನಲ್ಲಿ ಸೀಲ್‍ಡೌನ್ ಆದ ಎಲ್ಲಾ ಕಡೆಯೂ ಇದೇ ರೀತಿ ಆಹಾರ ನೀಡದೆ ನಿರ್ಲಕ್ಷ ಮಾಡುತ್ತಿದ್ದಾರೆ ಎಂದು ಕೇಳಿ ಬರುತ್ತಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೀಲ್‍ಡೌನ್ ಆದ ಕಡೆಗಳಲ್ಲಿ ಆಹಾರದ ಕಿಟ್ ಒದಗಿಸುವಂತೆ ಫ್ರೆಂಡ್ಸ್ ಗ್ರೂಪ್ ನವರು ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link