ತಿಪಟೂರು
ಆಧಾರ್ ಕಾರ್ಡ್ ಮಾಡಿಸಲು ಜನರು ಬೆಳಗ್ಗಿನ ಜಾವವೇ ತಾಲ್ಲೂಕು ಕಚೇರಿಯ ಮುಂದೆ ಟೋಕನ್ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂದು ಆಧಾರ್ ಕಾರ್ಡ್ ಇಲ್ಲದೆ ಸರ್ಕಾರದ ಯಾವುದೇ ಯೋಜನೆಗಳು ನಡೆಯುತ್ತಿಲ್ಲ. ಆದ್ದರಿಂದ ಆಧಾರ್ ಕಾರ್ಡ್ ಇಂದು ಅನಿವಾರ್ಯವಾಗಿರುವುದಕ್ಕೆ ವಯೋವೃದ್ಧರಲ್ಲದೆ ಮಹಿಳೆಯರು ತಮ್ಮ ಚಿಕ್ಕಮಕ್ಕಳೊಂದಿಗೆ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಕೊಡುವ 30 ಟೋಕನ್ಗೆ ಕಾಯುತ್ತಿದ್ದು, ಅದಕ್ಕೋಸ್ಕರ ನಾವು ಚಳಿಯನ್ನು ಲೆಕ್ಕಿಸದೆ ಬೆಳಗ್ಗೆ 4.00 ಗಂಟೆಗೆ ಬಂದೆ. ಆದರೆ ನನಗಿಂತಲೂ ಮೊದಲೇ 4-5 ಜನರಿದ್ದರು ಎಂದು ಚಳಿಯಲ್ಲಿ ನಡುಗುತ್ತಾ ಹೊಸಹಳ್ಳಿ ಗ್ರಾಮದ ವಾಸಿ 72 ವರ್ಷದ ಹೊನ್ನೇಗೌಡರು ಹೇಳಿದರು.
ಮಂಜಿಕೊಪ್ಪಲಿನ ಮಂಗಳ ತನ್ನ ಪುಟ್ಟ ಮಕ್ಕಳೊಂದಿಗೆ ನಾನು ನೆನ್ನೆ ಬಂದಾಗ ಟೋಕನ್ ಮುಗಿದು ಹೋಗಿತ್ತು. ಆದ್ದರಿಂದ ಇಂದು ಬೇಗನೆ ಬಂದು ಮೊದಲಿಗಳಾಗಿದ್ದೇನೆ. ಇಂದಾದರೂ ಈ ಆಧಾರ್ಕಾರ್ಡ್ ಆದರೆ ನಮಗೆ ನೆಮ್ಮದಿ ಎಂದರು. ನಗರದ ಅಂಚೆ ಕಚೇರಿಗಳಲ್ಲಿ ಹಾಗೂ ನಾಡಕಚೇರಿಗಳಲ್ಲಿ ಹಾಗೂ ಗ್ರಾಮಪಂಚಾಯ್ತಿಗೆ ಯಾವಾಗ ಹೋದರೂ ಸರ್ವರ್ ಇಲ್ಲ ಮತ್ತು ಹೊಸದಾಗಿ ಸೇರ್ಪಡಿಸಲು ಸಾಧ್ಯವಾಗುತ್ತಿಲ್ಲ ಮತ್ತು ಕೆಟ್ಟುಹೋಗಿದೆ ಎನ್ನುವುದರಿಂದ ನಾವಿಂದು ಬಂದು ಇಲ್ಲಿ ಕಾಯುವಂತಾಗಿದೆ ಅಳಲೊತ್ತುಕೊಂಡರು.
ತಾಲ್ಲೂಕು ಆಡಳಿತ ಇದರ ಬಗ್ಗೆ ಸೂಕ್ತ ಗಮನಹರಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಬೇಕೆಂದು ಗಾಂಧಿನಗರದ ಯಾಕೂಬ್ ಸಾಬ್ ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ