ಕಸದ ಸಮಸ್ಯೆ ನಿವಾರಣೆಗೆ ಜನರ ಸಹಕಾರ ಅವಶ್ಯಕ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ 

ಬೆಂಗಳೂರು: 
 
         ನಗರದಲ್ಲಿ ಕಸ ಸಮಸ್ಯೆ ಸೇರಿದಂತೆ ಪ್ರತಿಯೊಂದು ಸರಕಾರದ ನಿರ್ಧಾರಕ್ಕೆ ಸಾರ್ವಜನಿಕರ ಸಹಕಾರ ಇದ್ದರೆ ಮಾತ್ರ ಎಲ್ಲ ಸಮಸ್ಯೆ ಪರಿಹರಿಸಲು ಸಾಧ್ಯ ಎಂದು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
        ಟೌನ್‌ಹಾಲ್‌ನಲ್ಲಿ ಇಂದು ಆಯೋಜಿಸಿದ್ದ ಬಿಬಿಎಂಪಿ ಪೂರ್ವ ವಲಯದ ಜನಸ್ಪಂದನ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್‌ ಅವರು ಜನರ ಸಮಸ್ಯೆ ಆಲಿಸಿದರು. ಬಳಿಕ ಮಾತನಾಡಿದ ಅವರು, 
        ಸಾರ್ವಜನಿಕರ ಕಷ್ಟ ಸ್ಪಂದಿಸಲು ಸರಕಾರಕ್ಕೆ ಒಂದು ವೇದಿಕೆ ಅವಶ್ಯಕ. ಇಂಥ ಕಾರ್ಯಕ್ರಮ ಸಾಕಷ್ಟುಗಳು ಆಗಬೇಕಿತ್ತು. 
32 ಜನರು ತಮ್ಮ ದೂರು, ಸಲಹೆಯನ್ನು ನಾನೇ ಖುದ್ದು ಬರೆದುಕೊಂಡಿದ್ದೇನೆ. 
ಬೆಂಗಳೂರು ಬಹಳ ವೇಗವಾಗಿ ಬೆಳೆಯುತ್ತಿದೆ. 
           ಮೊದಲು ಇದ್ದ ನಗರಕ್ಕಿಂತ ನಾಲ್ಕು ಪಟ್ಟು ಜಾಸ್ತಿಯಾಗಿದೆ. ನಗರ ಬೆಳೆದಿದ್ದರೂ ರಸ್ತೆ ಬೆಳೆದಿಲ್ಲ. ಹೀಗಾಗಿ ಸಾಕಷ್ಟು ಟ್ರಾಫಿಕ್‌ ಸಮಸ್ಯೆ ತಲೆದೂರಿದೆ. ಬೆಂಗಳೂರಿನಲ್ಲಿರುವ ಕೆಲ ಪ್ರದೇಶಕ್ಕೆ ಹೋದರೆ ವಾಪಾಸ್‌ ಬರಲು ಸಾಧ್ಯವಿಲ್ಲ ಆ ಪರಿಸ್ಥಿತಿ ನಿರ್ಮಾಣವಾಗಿದೆ.‌
           ಬೆಂಗಳೂರು ಕಸದ ಸಮಸ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿಯಾಗಿ್ರದೆ. ಸಾಕಷ್ಟು ಯೋಜನೆ ತರುತ್ತಿದ್ದರೂ ಜನರ ಸಹಕಾರವಿಲ್ಲದೇ ಯಾವ ಕೆಲಸವೂ ಯಶಸ್ಸು ಆಗುವುದಿಲ್ಲ. 
       
           ಸರಕಾರದಿಂದ ಈಗಾಗಲೇ ಸಾಕಷ್ಟು ಯೋಜನೆ ಜಾರಿ ಇದೆ. ರಸ್ತೆ ಗುಡಿಸುವ 17 ಕ್ಲೀನಿಂಗ್ ಮಷಿನ್‌ಗಳನ್ನು ಖರೀದಿಗೆ ಒಪ್ಪಿಗೆ ನೀಡಿದ್ದೇನೆ. ತ್ಯಾಜ್ಯ ವಿಕರೆವಾರಿ ಗುತ್ತಿಗೆದಾರರ ಬಾಕಿ ಹಣ 165 ಕೋಟಿ ನೀಡಲೂ ಒಪ್ಪಲಾಗಿದೆ.‌ ಆದರೆ ಮೂರು ತಿಂಗಳೊಳಗಾಗಿ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಬೇಕು ಎಂದು ಅವರಿಗೆ ಗಡುವು ನೀಡಲಾಗಿದೆ.
          ಬೆಂಗಳೂರಿಗೆ ನೀರಿನ‌ ಸಮಸ್ಯೆ ತಲೆದೂರಿದೆ . ಭವಿಷ್ಯದಲ್ಲಿ ಬೆಂಗಳೂರು ನೀರಿನ ವಿಚಾರದಲ್ಲಿ ಕಷ್ಟಕ್ಕೆ ಸಿಲುಕಲಿದೆ.ಕಾವೇರಿಯ ೫ನೇ ಹಂತದ ಯೋಜನೆ ತರಲಾಗುತ್ತಿದ್ದು, ಇದೇ ಕೊನೆಯ ಹಂತವಾಗಲಿದೆ. ಇದಕ್ಕೂ ಮೀರಿದ ಹಂತದಲ್ಲಿ ನೀರು ಪೂರೈಕೆ ಅಸಾಧ್ಯ. ಹೀಗಾಗಿ ಇದಕ್ಕೆ ಬೇರೆ ಮಾರ್ಗವನ್ನು ಈಗಿನಿಂದಲೇ ಹುಡುಕಿಕೊಳ್ಳಬೇಕು. ನೀರು ಮರುಬಳಕೆಯನ್ನು ಪ್ರತಿಯೊಬ್ಬರು ಮಾಡಬೇಕಿದೆ.
          ಬೆಂಗಳೂರಿನಲ್ಲಿ ಭವಿಷ್ಯದಲ್ಲಿ ಕುಡಿಯುವ ನೀರಿಗೆ ಕಷ್ಟವಾಗಲಿದೆ. ಎತ್ತಿನಹೊಳಿ ಯೋಜನೆಯಡಿ 2.5 ಟಿಎಂಸಿ ಮಾತ್ರ ಬೆಂಗಳೂರಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ. ತಿಪ್ಪಗೊಂಡನ ಡ್ಯಾಂ ಪುನಶ್ಚೇತನಗೊಳಿಸಿ, ಅಲ್ಲಿ ನೀರು ಶೇಖರಿಸಲು ತೀರ್ಮಾನಿಸಲಾಗಿದೆ. 
 ಟ್ರಾಫಿಕ್‌ ನಿಯಮ ಉಲ್ಲಂಘಿಸುವವರ ವಿರುದ್ಧ ಕಣ್ಣಿಡಲು
           167 ಜಂಕ್ಷನ್‌ನಲ್ಲಿ ಸಿಸಿ ಕ್ಯಾಮರಾ ಹಾಕಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಕಾರದಿಂದ ಇನ್ನೂ 5 ಸಾವಿರ ಕ್ಯಾಮರಾ ಅಳವಡಿಕೆ ಮಾಡಲಾಗುತ್ತಿದೆ. 
            ಬೀದಿ ಬದಿ ವಿದ್ಯುತ್‌ಕಂಬಗಳಿಗೆ ಎಲ್‌ಇಡಿ ಬಲ್ಬ್‌ ಹಾಕಲು ನಿರ್ಧರಿಸಲಾಗಿದ್ದು, ಇದರ ನಿರ್ವಹಣೆಗೆ ಕಂಟ್ರೋಲ್‌ ರೂಂ ತೆರೆಯಲಾಗುವುದು. ಇದಕ್ಕೆ ಸಚಿವ ಸಂಪುಟದಲ್ಲಿ ಶೀಘ್ರವೇ ಒಪ್ಪಿಗೆ ಪಡೆಯಲಾಗುವುದು. ಈ ಬಲ್ಬ್‌ ಹಾಕುವುದರಿಂದ ಶೇ.80 ರಷ್ಟು ವಿದ್ಯುತ್‌ ಉಳಿತಾಯವಾಗಲಿದೆ.‌
           ಬಿಬಿಎಂಪಿ ವ್ಯಾಪ್ತಿ ಮೂಲ ಸಮಸ್ಯೆ ನಿವಾರಣೆಗೆ ಸರಕಾರದಿಂದ ಸಾಕಷ್ಟು ಅನುದಾನ ನೀಡಲಾಗಿದೆ. ತೆರಿಗೆ ಹಣ ಸೇರಿ ಮೂರು ವರ್ಷದಲ್ಲಿ 21 ಸಾವಿರ ಕೋಟಿ ಹಣ ವೆಚ್ಚ ಮಾಡಲಾಗುತ್ತದೆ. ಈ ಹಣ ಸಮರ್ಪಕ ಬಳಕೆಯಾಗುತ್ತಿದೆಯೇ ಎಂದು ಖುದ್ದು ನಾನೇ ಇಲಾಖೆಗಳ ಪರಿಶೀಲನೆ ಮಾಡುತ್ತೇನೆ.
 ಬಿಬಿಎಂಪಿ ವ್ಯಾಪ್ತಿಯ ಶಾಲೆಗಳನ್ನು ಮೇಲ್ದರ್ಜೆಗೇರಿಸಲು 
 
          ಮೈಕ್ರೋಸಾಫ್ಟ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಶಿಕ್ಷಣ ಹಾಗೂ ವ್ಯವಸ್ಥೆಯಲ್ಲಿ ಖಾಸಗಿ ಶಾಲೆಯನ್ನು ಈ ಶಾಲೆಗಳು‌ ಮೀರಿಸುವ ಭರವಸೆ ಇದೆ. ಇದರ ಜೊತೆಗೆ ಬಿಬಿಎಂಪಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
           ರೆಸಿಡೆನ್ಸಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ತಡೆಯುವ ಸಂಬಂಧ ಈಗಾಗಲೇ ಕ್ರಮ‌ಕೈಗೊಂಡಿದ್ದೇನೆ.ಆದರೆ ಅಲ್ಲಿರುವ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಪರ್ಯಾಯ ಸ್ಥಳ‌ನೀಡಿ ಅವರನ್ನು ಸ್ಥಳಾಂತರ ಮಾಡಲಾಗಿತ್ತದೆ.
         ಟ್ರೇಡ್‌‌ಲೈಸನ್ಸ್‌ ಇಲ್ಲ ಅಂಗಡಿಗಳನ್ನು ಮುಚ್ಚಲು ಸೂಚಿಸಿದ್ದೇನೆ. ಇನ್ನು ಮುಂದೆ‌ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಶಾಪ್‌ಗಳ ಟ್ರೇಡಿಂಗ್‌ ಲೈಸೆನ್ಸ್‌ ರದ್ದು ಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಪಾರ್ಕಿಂಗ್‌ ನಿರ್ಮಾಣಕ್ಕೂ ಈಗಾಗಲೇ ಕ್ರಮ‌ಕೈಗೊಂಡಿದ್ದು ಮಲ್ಟಿ ಪಾರ್ಕಿಂಗ್‌ ಕಟ್ಟಡ ನಿರ್ಮಿಸಲಾಗುತ್ತಿದೆ. ಪೂರ್ವ ವಲಯದ ನಿವಾಸಿಗಳು ಕಸ, ವಿದ್ಯುತ್, ನೀರು, ಟ್ರಾಫಿಕ್, ಫ್ಲೈಓವರ್‌ ಸೇರಿದಂತೆ ಹಲವು ಸಮಸ್ಯೆ ತೋಡಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap