ಹುಳಿಯಾರು:
ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಗಲಭೆಗೆ ಕಾರಣವಾದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಹಾಗೂ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಗಳನ್ನು ನಿಷೇಧಿಸುವಂತೆ ಹುಳಿಯಾರು ಹೋಬಳಿಯ ಯಳನಾಡುವಿನ ಭಜರಂಗದಳ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಹುಳಿಯಾರಿನ ಉಪತಹಸೀಲ್ದಾರ್ ಸುಮಿತ್ರಾ ಅವರಿಗೆ ಯಳನಾಡು ಭಜರಂಗದಳದ ಅಧ್ಯಕ್ಷ ಮೋಹನ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.ರಾಜ್ಯ ಹಾಗೂ ದೇಶವು ಶಾಂತಿ ಮತ್ತು ಸಹಬಾಳ್ವೆಯಿಂದ ಕೂಡಿತ್ತು. ಇಂತಹ ಸಂದರ್ಭದಲ್ಲಿ ಎಡ್.ಡಿ.ಪಿ.ಐ ಹಾಗೂ ಕೆ.ಎಫ್.ಡಿ ಮೊದಲಾದ ಮತಾಂಧ ಸಂಘಟನೆಗಳು ಮತೀಯ ಗಲಾಟೆ ಹುಟ್ಟುಹಾಕಿ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟಮಾಡಿರುವುದಲ್ಲದೆ ಪೊಲೀಸರ ಮೇಲೆ ದೌರ್ಜನ್ಯ, ಹಲ್ಲೆ ಹಾಗೂ ಆ ಕ್ಷೇತ್ರದ ಶಾಸಕರ ನಿವಾಸಕ್ಕೆ ಹಾನಿಮಾಡಿದ್ದಾರೆ. ಕೋಮುವಾದ ಪ್ರಚೋದನೆ ಮಾಡುವ ಮೂಲಕ ದೇಶದ ಜನರಲ್ಲಿ ಭೀತಿ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂಘಟನೆಗಳನ್ನು ಈ ಕೂಡಲೇ ಸರ್ಕಾರಗಳು ರದ್ದುಗೊಳಿಸಬೇಕೆಂದು ಹಾಗೂ ಗಲಭೆಯಲ್ಲಿ ಉಂಟಾಗಿರುವ ಆಸ್ತಿ ನಷ್ಟದ ಮೊತ್ತವನ್ನು ಆರೋಪಿಗಳಿಂದ ವಸೂಲಿ ಮಾಡಬೇಕು ಎಂದು ಮನವಿ ಪತ್ರ ಸಲ್ಲಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ