ಬೆಂಗಳೂರು
ಡಾಬಾದಲ್ಲಿ ಊಟದ ಪಾರ್ಸೆಲ್ ತೆಗೆದುಕೊಂಡು ಹೋಗಲು ಬಂದಿದ್ದ ಯುವಕ ಸಿಗರೇಟ್ ತಂದು ಕೊಡಲಿಲ್ಲ ಎನ್ನುವ ಕಾರಣಕ್ಕೆ ಕುಡಿದ ಅಮಲಿನಲ್ಲಿ ಹಲ್ಲೆ ನಡೆಸಿ ಪರಾರಿಯಾಗಿದ್ದ ದುಷ್ಕರ್ಮಿಗಳಲ್ಲಿ ಮೂವರನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.ಜಿಗಣಿಯ ಸೊಣ್ಣಪ್ಪನಹಳ್ಳಿಯ ರಾಜು(23)ದಾಮೋಧರ(24)ಹಾಗೂ ಮಹೇಶ(23)ನನ್ನು ಬಂಧಿಸಿ ಉಳಿದವರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ
ಹಲ್ಲೆಯಿಂದಾಗಿ ತಲೆಗೆ ತೀವ್ರ ಗಾಯಗೊಂಡು ಸ್ಥಳೀಯ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕಳೆದ ಭಾನುವಾರ ರಾತ್ರಿ 11ರ ವೇಳೆ ಯಲಹಂಕ ವಿಐಟಿ ಕ್ರಾಸ್ ಬಳಿಯ ಡಾಬಾಗೆ ಬಂದ ಸುಮಾರು 10 ಮಂದಿ ದುಷ್ಕಮಿಗಳು ಊಟ ಪಾರ್ಸಲ್ ತೆಗೆದುಕೊಳ್ಳಲು ಬಂದಿದ್ದ ಯುವಕನನ್ನು ಸಿಗರೇಟ್ ತಂದು ಕೊಡುವಂತೆ ಕೇಳಿದ್ದಾರೆ.
ನಾನು ಬಂದಿರುವುದು ಊಟ ತೆಗೆದುಕೊಂಡು ಹೋಗಲು ಸಿಗರೇಟ್ ಎಲ್ಲಿ ದೊರೆಯುತ್ತದೆ ನನಗೆ ಗೊತ್ತಿಲ್ಲ ನಾನು ಹೋಗುವುದಿಲ್ಲ ಎಂದು ಹೇಳಿದ್ದಾನೆ ಇದರಿಂದ ಆಕ್ರೋಶಗೊಂಡು ಮದ್ಯದ ಅಮಲಿನಲ್ಲಿದ್ದ ದುಷ್ಕರ್ಮಿಗಳು ನಾವು ಕೇಳಿದರೂ ವಿಐಪಿಗಳೇ ಸಿಗರೇಟ್ ತಂದು ಕೊಡುತ್ತಾರೆ ನಿನಗೇನು ಎಂದು ಜಗಳ ತೆಗೆದು ರಂಪ ಮಾಡಿ ಹಲ್ಲೆಗೆ ಮುಂದಾಗಿದ್ದಾರೆ.
ನನ್ನನ್ನು ಬಿಟ್ಟುಬಿಡಿ ಎಂದು ಕಾಲಿಗೆ ಬಿದ್ದು ಗೋಗರೆದರೂ ಮೃಗಗಳಂತೆ ಅಮಾನವೀಯವಾಗಿ ವರ್ತಿಸಿ ರಾಡ್ ಮತ್ತು ಕುರ್ಚಿಯಿಂದ ಯುವಕನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು ಹಲ್ಲೆಯ ದೃಶ್ಯ ಡಾಬಾದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ಸಂಬಂಧ ಚಿಕ್ಕಜಾಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








