ಉಡುಪಿ
ಬೆಂಗಳೂರು ಆಯಿತು ಈಗ ಕುಂದಾಪುರ, ಕಲಬುರಗಿಯಲ್ಲೂ ಪಾಕ್ ಪರ ಘೋಷಣೆ ಕೇಳಿಬಂದಿದೆ. ಹುಬ್ಬಳ್ಳಿಯಲ್ಲಿ ಮೊದಲು ಪ್ರತಿಷ್ಠಿತ ಕೆ.ಎಲ್.ಇ ಕಾಲೇಜಿನ ಮೂವರು ವಿದ್ಯಾರ್ಥಿಗಳು “ಪಾಕಿಸ್ತಾನ್ ಜಿಂದಾಬಾದ್” ಎಂದು ಘೋಷಣೆ ಕೂಗಿದ ವಿಡಿಯೋ ವೈರಲ್ ಆಗಿತ್ತು.
ಇದಾದ ನಂತರ ಬೆಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಅಮೂಲ್ಯ ಎಂಬ ಯುವತಿ ಪಾಕ್ ಪರ ಘೋಷಣೆ ಕೂಗಿದ್ದಳು. ಕಳೆದ ವಾರವಷ್ಟೇ ಹುಬ್ಬಳ್ಳಿಯ ಶಾಲೆಯೊಂದರ ಗೋಡೆ ಮೇಲೆ ಪಾಕಿಸ್ತಾನ್ ಜಿಂದಾಬಾದ್ ಎಂಬ ಬರಹಗಳು ಗೋಚರಿಸಿದ್ದವು. ಇದೀಗ ಮತ್ತೆ ಕುಂದಾಪುರ, ಕಲಬುರ್ಗಿಯಲ್ಲೂ ಪಾಕ್ ಪರ ಘೋಷಣೆ ಕೇಳಿಬಂದಿದೆ .
ಕುಂದಾಪುರದ ಶಕ್ತಿ ಕೇಂದ್ರವಾದ ಮಿನಿ ವಿಧಾನಸೌಧದ ಎದುರು ವ್ಯಕ್ತಿಯೊಬ್ಬರು “ಪಾಕಿಸ್ತಾನ ಜಿಂದಾಬಾದ್” ಎಂದು ಇಂದು ಘೋಷಣೆ ಕೂಗಿದ್ದಾರೆ. ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಕುಂದಾಪುರ ಪೊಲೀಸ್ ಠಾಣಾಧಿಕಾರಿ ಹರೀಶ್ ಘೋಷಣೆ ಕೂಗಿದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಇನ್ನು ಕಲಬರ್ಗಿಯ ಸಾತ್ ಗುಂಬಜ್ ನಲ್ಲಿನ ಮನೆ ಗೋಡೆಯೊಂದರ ಮೇಲೆ ಪಾಕಿಸ್ತಾನ್ ಪರವಾಗಿ ಹಾಗೂ ಮೋದಿ ವಿರುದ್ಧವಾಗಿ ಟೀಕೆಗಳನ್ನು ಗೋಡೆಗಳ ಮೇಲೆ ಬರೆಯಲಾಗಿರುವುದಾಗಿ ತಿಳಿದುಬಂದಿದೆ. ಪೊಲೀಸರು ಈ ಬರಹಗಳನ್ನು ಅಳಿಸಿದ್ದು, ಇದರ ಹಿಂದೆ ಯಾರಿದ್ದಾರೆ ಎಂದು ತನಿಖೆ ಕೈಗೊಂಡಿದ್ದಾರೆ. ಆ ಪ್ರದೇಶದ ಸಿ.ಸಿ.ಟಿವಿಯನ್ನು ಪರಿಶೀಲಿಸುತ್ತಿ ದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ