ಶಿರಾ :
ತಾಲ್ಲೂಕಿನ ಹಾರೋಗೆರೆಯಲ್ಲಿರುವ ಅಮ್ಮಾಜಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮಂಗಳವಾರ ರಾತ್ರಿ ಸುಮಾರು ಏಳು ಗಂಟೆಗೆ ಭಾರಿ ಗುಡುಗು ಸಹಿತ ಮಳೆ ಬಿದ್ದಿದ್ದು ಜೊತೆಗೆ ಸಿಡಿಲು ಬಂದಿತ್ತು ಇದರಿಂದಾಗಿ ಶಾಲೆಯಲ್ಲಿರುವ ಗಣಕಯಂತ್ರದ ಕೊಠಡಿಯಲ್ಲಿ ಸಿಡಿಲಿನ ರಭಸಕ್ಕೆ ಬೆಂಕಿ ಹತ್ತಿಕೊಂಡು ಸುಟ್ಟು ಭಸ್ಮವಾಗಿದೆ.
ಗಣಕಯಂತ್ರದ ಕೊಠಡಿಗೆ ಸಿಡಿಲು ಬಡಿದು ಗಣಕಯಂತ್ರದ ಪೂರಕ ಸಾಮಗ್ರಿಗಳು, ವಿದ್ಯುತ್ ಉಪಕರಣಗಳು, ಜೆರಾಕ್ಸ್ ಮಿಷಿನ್ ಸೇರಿದಂತೆ ಹಲವು ವಸ್ತುಗಳು ಸುಟ್ಟು ಹೋಗಿರುವ ಘಟನೆ ಶಿರಾ ತಾಲೂಕಿನ ಅಮ್ಮಾಜಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ನಡೆದಿದೆ .ಕಂಪ್ಯೂಟರ್ ಗಳು, ಶಾಲಾ ದಾಖಲಾತಿಗಳು, ಪುಸ್ತಕಗಳು, ಜೆರಾಕ್ಸ್ ಮಿಷನ್, ವಿದ್ಯುತ್ ಉಪಕರಣ, ಯುಪಿಎಸ್, ಪ್ರೊಜೆಕ್ಟರ್, ಪ್ಯಾನಸೋನಿಕ್ ಬ್ಯಾಟರಿ, ಕಂಪ್ಯೂಟರ್ ಟೇಬಲ್ ಕ್ರೀಡೋಪಕರಣಗಳು ಸೇರಿದಂತೆ ಶಾಲೆಗೆ ಸಂಬಂಧಿಸಿದ ಹಲವು ವಸ್ತುಗಳು ಸುಟ್ಟು ಹೋಗಿವೆ.ಈ ಘಟನೆಯಿಂದ ಸುಮಾರು ಮೂರು ಲಕ್ಷ ರೂಪಾಯಿ ನಷ್ಟ ಉಂಟಾಗಿದ್ದು, ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








