ಬೆಂಗಳೂರು
ವೇಗವಾಗಿ ಬಂದ ಲಗೇಜ್ ವಾಹನ ತಪ್ಪಿ ಉರುಳಿಬಿದ್ದ ಪರಿಣಾಮ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬ ಸಾವಿಗೀಡಾಗಿರುವ ದಾರುಣ ಘಟನೆ ಹೊಸಕೋಟೆಯ ಯಡಗೊಂಡಹಳ್ಳಿ ಬಳಿ ನಡೆದಿದೆ.
ಯಡಗೊಂಡಹಳ್ಳಿ ಮುನಿಯಪ್ಪ(55)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ಹೊಸಕೋಟೆ ಸಮೀಪದ ಯಡಗೊಂಡಹಳ್ಳಿ ಬಳಿ ಭಾನುವಾರ ಸಂಜೆ 5.32ಕ್ಕೆ ಘಟನೆ ನಡೆದಿದೆ. ಮುತ್ಕೂರು ಕಡೆಯಿಂದ ಬಂದ ದ್ರಾಕ್ಷಿ ತುಂಬಿದ ವಾಹನ ತಿರುವಿನಲ್ಲಿ ಅತಿವೇಗದಲ್ಲಿ ಟರ್ನ್ ಮಾಡಿದ್ದರಿಂದ ರಸ್ತೆ ದಾಟಲು ನಿಂತಿದ್ದ ಮುನಿಯಪ್ಪನ ಮೇಲೆ ಉರುಳಿಬಿದ್ದಿದೆ. ಸ್ಥಳೀಯರು ತಕ್ಷಣವೇ ಮುನಿಯಪ್ಪನನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲೇ ಮುನಿಯಪ್ಪ ಕೊನೆಯುಸಿರೆಳೆದಿದ್ದಾರೆ
ಅಪಘಾತದ ಬೆನ್ನಲ್ಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ವಾಹನದಲ್ಲಿದ್ದ ಕ್ಲೀನರ್‍ನನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆಈ ಸಂಬಂಧ ಅನುಗೊಂಡನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.