ವ್ಯಕ್ತಿ ಅಳಿದರು ಹೆಸರು ಚಿರಾಯುವಾಗಬೇಕು : ಸುರೇಶ್‍ಕುಮಾರ್

ತಿಪಟೂರು :

         ವ್ಯಕ್ತಿ ಅಳಿಯುವುದು ಸಹಜ ಆದರೆ ವ್ಯಕ್ತಿ ಅಳಿದರು ಅವರ ಹೆಸರು ಚಿರಾಯುವಾಗಬೇಕೆಂದು ಮಾಜಿ ಸಚಿವ ಸುರೇಶ್‍ಕುಮಾರ್ ತಿಳಿಸಿದರು.

        ಇಂದು ನಗರದ ಗುರುಕುಲಾನಂದಾಶ್ರಮದಲ್ಲಿ ತಾಲ್ಲೂಕು ಬಿ.ಜೆ.ಪಿ ಘಟಕದಿಂದ ಆಯೋಜಿಸಿದ್ದ ಭಾರತ ರತ್ನ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಯವರ ಜನ್ಮದಿನವನ್ನು ಉದ್ದೇಶಿಸಿ ಮಾತನಾಡಿದ ಅವರು ನಾವಿಂದು ಅಟಲ್ ಬಿಹಾರಿ ವಾಜಪೇಯಿ ಇಲ್ಲದೆ ಅವರ ಜನಮ್ಮದಿನವನ್ನು ಆಚರಿಸುತ್ತಿದ್ದೇವೆ. ಅವರು ವ್ಯಕ್ತಿತ್ವ ಎಂದರೆ 10 ಬಾರಿ ಸಂಸದನಾದರು ಒಬ್ಬ ಸಾಮಾನ್ಯ ಪ್ರಜೆಯು ಅವರನ್ನು ಯಾವಾಗ ಬೇಕಾದರು ಸಂದರ್ಶಿಸಬಹುದಾಗಿತ್ತು,

        ನಾನು ಸಂಸದ ನಾನು ಮಾಜಿ ಪ್ರಧಾನಿ ಎನ್ನುವ ಹಮ್ಮಬಿಮ್ಮು ತೋರದೆ ಸರಳತೆಯ ಸಕಾರ ಮೂರ್ತಿಯಾಗಿದ್ದರು. ವ್ಯಕ್ತಿಯೆಂದರೆ ಒಬ್ಬ ಇಂದು ದೇಶದಲ್ಲಿ ರೈತರು ತಮ್ಮ ಸರಕುಗಳನ್ನು ಇಂದು ಸೂಕ್ತ ಸಮಯಕ್ಕೆ ಮಾರುಕಟ್ಟೆಗೆ ಬರುತ್ತಿವೆ ಎಂದರೆ ಅದಕ್ಕೆ ಕಾರಣ ಭಾರತ ರತ್ನ ಅಲ್‍ಬಿಹಾರಿ ವಾಜಪೇಯಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿಕಾರಣ, ಅವರು ಜೊತೆಯಾಗಿ ತಂದ ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆ ಅಂತಹದ್ದು.

          ಹಿಂದೆ ಮೊದಲಬಾರಿಗೆ ಸಂಸತ್ತಿಗೆ ಆಯ್ಕೆಯಾದ ಸಂದರ್ಭದಲ್ಲಿ ನೀನು ಭಾರತದ ಪ್ರದಾನಿಯಾಗುತ್ತೀಯ ಎಂದು ನೆಹರು ಹೇಳಿದ್ದರೆಂದು ತಿಳಿಸಿದರು. ಪತ್ರಕರ್ತರು ಒಮ್ಮೆ ಪತ್ರಿಕೆಯಲ್ಲಿ ವಾಯಪೇಯಿರವರು ಸತ್ಯವಾದಿಗಳು, ಆದರೆ ಅವರಿರುವ ಪಕ್ಷವು ಕೆಟ್ಟದ್ದು ಎಂದಿದ್ದಕ್ಕೆ ಉತ್ತರಿಸಿದ ವಾಜಪೇಯಿರವರು ನಾನು ಒಳ್ಳೆಯವನಾಗಿದ್ದರೆ ಪಕ್ಷವೇವು ಒಳ್ಳೆಯದ್ದೆ, ಪಕ್ಷ ಕೆಟ್ಟದ್ದಾಗಿದ್ದರೆ ನಾನು ಹೇಗೆ ಒಳ್ಳೆಯವನಾಗುತ್ತಾನೆ.

          ಅದೇ ರೀತಿ ನಮ್ಮ ಕೇಂದ್ರದ ಮಾಜಿ ಸಚಿವರಾದ ಅನಂತ್‍ಕುಮಾರ್ ರವರು ಸಹ ಅವರು ಮರಣಿಸಿದ ಮೇಲೆ ಅವರು ಸಲ್ಲಿಸಿದ ಸೇವೆ ಎಂತಹದ್ದೆಂದು ನಮಗೆ ಅರಿವಾಗುತ್ತಿದೆ. ಅವರಿಲ್ಲದೇ ಹೋಗಿದ್ದರೆ ಇಂದಿಗೂ ಸಹ ಕಾವೇರಿ ಮತ್ತು ಕೃಷ್ಣ ನ್ಯಾಯಾಧಿಕರಣದಲ್ಲಿ ನಮಗೆ ನ್ಯಾಯ ಸಿಗುತ್ತಿರಲಿಲ್ಲವೆಂದು ವಿರೋಧಪಕ್ಷದವರೇ ಹೇಳುತ್ತಾರೆ ಅದಕ್ಕೆ ಸಾಕ್ಷಿಯಾಗಿ ಇಂದು ಮೇಕೆದಾಟು ಯೋಜನೆಯೂ ಕಾಣುತ್ತಿದ್ದೆ. ಅನಂತ್‍ಕುಮಾರ್ ಸಾವನ್ನಪ್ಪಿದ ಸಂದರ್ಭಲ್ಲಿ ಕೇಂದ್ರ ಮಂತ್ರಿಯೊಬ್ಬರು ದೆಹಲಿಯಲ್ಲಿ ಕನ್ನಡಿಗರ ಧ್ವನಿ ಅಡಗಿತು ಎಂದರು ಇದೇ ಅನಂತ್‍ಕುಮಾರ್‍ರವರು ರಾಜ್ಯಕ್ಕೆ ಸಲ್ಲಿಸಿರುವ ಸೇವೆಯನ್ನು ತಿಳಿಸುತ್ತದೆ. ವಾಜಪೇಯಿ ಮತ್ತು ಅನಂತ್‍ಕುಮಾರ್‍ರವರು ಎಂದು ಮರೆಯದ ಮಾಣಿಕ್ಯಗಳೆಂದರು.

          ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಸಿ.ನಾಗೇಶ್ ಇಂದು ವಾಜಪೇಯಿ ಮತ್ತು ಅನಂತ್‍ಕುಮಾರ್‍ರವರು ಕಳೆದು ಕೊಂಡಿರುವುದು ದೇಶಕ್ಕೆ ದುಃಖವಾಗಿದೆ ಆದರೆ ನಾವಿಂದು 2004ರಲ್ಲಿ ವಾಜಪೇಯಿರವರಿಗೆ ಮೋಸವಾದಂತೆ 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ಮೋಸವಾಗದಂತೆ ನೋಡಿಕೊಂಡು ದೇಶವನ್ನು ಅಭ್ಯುದಯಕ್ಕೆ ಶ್ರಮಿಸಬೇಕಾಗಿದೆ ಎಂದ ಅವರು, ಇಂದು ನೆಹರೂರವರ ಕುಟುಂಬದಲ್ಲಿ ಹಲವಾರು ಯೋಜನೆಗಳಿವೆ ಆದರೆ ನಮ್ಮ ವಾಜಪೇಯಿರವರು ತಾವು ಮಾಡಿದ ಮಹತ್ತರ ಯೋಜನೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಎಂದು ಹೆಸರಿಸಿದರು.

           ಆದರೆ 2004ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಯು.ಪಿ.ಎ. ಸರ್ಕಾರ ರಸ್ತೆಯಲ್ಲಿ ಇದ್ದ ವಾಜಪೇಯಿರವರ ಭಾವಚಿತ್ರವನ್ನು ತೆಗೆದುಹಾಕಿದ್ದೇ ಅವರ ಮಹತ್ಕಾರ್ಯವೆಂದರು. ಅಂದು ರಾ.ಹೇ 206ರಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು ಅದನ್ನು ಚತುಷ್ಪತಗೊಳಿಸಿ ಎಂದು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಅಂದಿನ ಯು.ಪಿ.ಎ ಸರ್ಕಾರ ತಿರಸ್ಕರಿಸಿತ್ತು.

           ಆದರೆ ಮೊನ್ನೆತಾನೆ ಕಾಮಗಾರಿ ನಡೆಯುತ್ತಿವು ರಾ.ಹೇ 206ಕ್ಕೆ ಕಿಬ್ಬನಹಳ್ಳಿ ಕ್ರಾಸ್ ಹತ್ತಿರ ಭೂಮಿಪೂಜೆಯನ್ನು ಹೇಗೆ ನಮ್ಮ ಸಂಸದರು ಮತ್ತು ರಾಜ್ಯದ ಉಪ ಮುಖ್ಯಮಂತ್ರಿಗಳು ಮಾಡಿದರು, ಇದು ಸರ್ಕಾರಿ ಕಾರ್ಯಕ್ರಮವೇ ಆಗಿದ್ದರೆ ಶಿಷ್ಠಾಚಾರವನ್ನು ಏಕೆ ಪಾಲಿಸಲಿಲ್ಲ, ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳನ್ನು ಕೇಳಿದ್ದಕ್ಕೆ ಜಿಲ್ಲಾಧಿಕಾರಿಗಳ ಆದೇಶವಿದೇ ಎನ್ನುತ್ತಾರೆ ಹೀಗಿದ್ದಾದ ರಾಜ್ಯ ಉದ್ದಾರವಾಗುವುದಾದರೂ ಹೇಗೆ.

          ನಮ್ಮ ರಾಜ್ಯದ ಸಮ್ಮಿಶ್ರ ಸರ್ಕಾರವು ಇಂದು ಸಮನ್ವಯದ ಕೊರತೆಯಿಂದ ಇದ್ದು ಎಲ್ಲಾ ಇಲಾಖೆಗಳಲ್ಲಿ ಹುದ್ದೆಗಳು ಖಾಲಿಇವೆ, ಮುಖ್ಯವಾಗಿ ರಾಜ್ಯದ ಉನ್ನತಿಗೆ ಬೇಕಿರುವುದು ಶಿಕ್ಷಣ, ಆದರೆ ಶಿಕ್ಷಣ ಇಲಾಖೆಯಲ್ಲಿ ಕಳೆದ 5 ವರ್ಷಗಳಿಂದ ಶಿಕ್ಷಕರು, ಉಪನ್ಯಾಸಕರುಗಳನ್ನು ಭರ್ತಿಮಾಡಿಲ್ಲ, ಯಾವುದೇ ಇಲಾಖೆಗಳಿಗೆ ಅನುದಾನಗಳಿಲ್ಲದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಆದ್ದರಿಂದ 2019ರ ಚುನಾವಣೆಯಲ್ಲಿ ಮತ್ತೊಮ್ಮೆ ಮೋಧಿಯವರನ್ನು ಆರಿಸಿ ಮತ್ತು ಬಿ.ಜೆ.ಪಿ.ಯ ಸೂರ್ಯ ಸಂಸತ್ತಿನಲ್ಲಿ ಪ್ರಜ್ವಲಿಸುವಂತೆ ಮಾಡುವ ಜವಾಬ್ದಾರಿ ನಿಮ್ಮ ಮೇಲೆದೆ ಆದ್ದರಿಂದ ಮೋದಿಯವರನ್ನು ಮತ್ತೆ ಗೆಲ್ಲಿಸಬೇಕೆಂದು ಕಾರ್ಯಕರ್ತರಿಗೆ ಕರೆನೀಡಿದರು.

          ಕಾರ್ಯಕ್ರಮದಲ್ಲಿ ಬಿ.ಜೆ.ಪಿ ತಾ ಅಧ್ಯಕ್ಷ ಹೆಚ್.ಬಿ.ದಿವಾಕರ್, ಎಸ್.ಸಿಮೋರ್ಚಾ ಉಪಧ್ಯಕ್ಷ ಗಂಗರಾಜು, ನಗರಾಧ್ಯಕ್ಷ ಲೋಕೇಶ್, ಜಿ.ಪಂ ಸದಸ್ಯೆ ಯಶೋಧಗಂಗರಾಜು, ನಗರಸಭೆ ಸ್ಥಾಯಿಸಮತಿ ಅಧ್ಯಕ್ಷ ಗಂಗರಾಜು, ನಗರಸಭಾ, ತಾ.ಪಂ, ಗ್ರಾ.ಪಂ ಸದಸ್ಯರುಗಳು, ಪಕ್ಷದ ಮುಖಂಡರುಗಳು, ಕಾರ್ಯಕರ್ತರುಗಳು ಮುಂತಾದವರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link