ಉದ್ಯೋಗ ಗಿಟ್ಟಿಸಲು ಪ್ರಧಾನಿ ಸಹಿ ನಕಲು ಮಾಡಿದ ಭೂಪ

ಬೆಂಗಳೂರು

          ನ್ಯಾಯಾಲಯದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯ ನಕಲಿ ಸಹಿ ಮಾಡಿ ಹೈಕೋರ್ಟ್ ರಿಜಿಸ್ಟ್ರಾರ್‍ಗೆ ಖತರ್ನಾಕ್ ವ್ಯಕ್ತಿಯೊಬ್ಬ ಪತ್ರ ಬರೆದಿರುವ ಘಟನೆ ಬೆಳಕಿಗೆ ಬಂದಿದೆ.

         ಹೈಕೋರ್ಟ್‍ನಲ್ಲಿ ಬೆರಳಚ್ಚುಗಾರರ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಸಂಜಯ್ ಕುಮಾರ್ (30) ಪ್ರಧಾನಿ ಮೋದಿ ಹೆಸರಲ್ಲಿ ನಕಲಿ ಪತ್ರವನ್ನ ರಾಜೇಶ್ವರಿ ಹೈಕೋರ್ಟ್ ಡೆಪ್ಯುಟಿ ರಿಜಿಸ್ಟ್ರಾರ್ ಹೆಸರಿಗೆ ಕಳುಹಿಸಿದ್ದಾನೆ .ಇದರಿಂದ ಅನುಮಾನಗೊಂಡ ರಿಜಿಸ್ಟ್ರಾರ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

           ವಿಧಾನಸೌಧ ಪೊಲೀಸ್ ಠಾಣಾ ಇನ್ಸ್‍ಪೆಕ್ಟರ್ ಶಂಕರಾಚಾರ್ ನೇತೃತ್ವದಲ್ಲಿ ನಡೆಸಿದ ಕಾರ್ಯಚರಣೆಯಲ್ಲಿ ನಕಲಿ ಸಹಿ ಮಾಡಿರುವ ವಿಷಯ ಬಯಲಿಗೆ ಬಂದಿದೆ. ಐಪಿಸಿ ಸೆಕ್ಷನ್ 420, 465, 471, 478 ಅಡಿ ಪ್ರಕರಣ ದಾಖಲಿಸಿ, ಆರೋಪಿ ಬೆಳಗಾವಿಯಲ್ಲಿರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

            ಇನ್ನು ಆರೋಪಿ ತನಿಖೆಯಲ್ಲಿ ಕಂಪ್ಯೂಟರ್ ಸೆಂಟರ್‍ಗೆ ಹೋಗಿ ನಕಲಿ ದಾಖಲೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಧಾರವಾಡ ಹೈಕೋರ್ಟ್‍ನಿಂದ ಬೆಂಗಳೂರು ಹೈಕೋರ್ಟ್‍ಗೆ ಪೋಸ್ಟ್ ಮಾಡಿರುವ ವಿಚಾರ ತಿಳಿದು ಬಂದಿದ್ದು ತನಿಖೆ ಮುಂದುವರೆದಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap