inspector ವಿರುದ್ಧ ದೂರು ನೀಡಿದ ನೊಂದ ವ್ಯಕ್ತಿ…!!!

ಬೆಂಗಳೂರು

      ಅಪಹರಣ ಪ್ರಕರಣದಲ್ಲಿ ಸೆರೆಯಾಗಿದ್ದ ಆರೋಪಿಗಳಿಂದ ಲಂಚ ಪಡೆದು ಪ್ರಕರಣ ಮುಚ್ಚಿ ಹಾಕಿದ್ದಾರೆ ಎಂದು ಆರೋಪಿಸಿ ನೊಂದ ವ್ಯಕ್ತಿಯೋರ್ವ ಇನ್ಸ್‍ಪೆಕ್ಟರ್ ಮುನಿಕೃಷ್ಣ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

      ಕಳೆದ 2017 ಮೇ 26 ರಂದು ಜೆಮ್ಸ್ ಡಿಸೋಜಾ ಎಂಬವರನ್ನು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹರೀಶ್ ಹಾಗೂ ಸುನೀಲ್ ಬೊಲಾರಾ ಎಂಬುವರು ಅಪಹರಿಸಿದ್ದರು. ಆದರೆ ಹೇಗೋ ಅವರ ಬಳಿಯಿಂದ ತಪ್ಪಿಸಿಕೊಂಡು ಬಂದಿದ್ದ ಜೆಮ್ಸ್ ಡಿಸೋಜಾ ತಮ್ಮ ಮನೆಯಲ್ಲಿ ರೆಕಾರ್ಡ್ ಆಗಿದ್ದ ಸಿಸಿಟಿವಿ ದೃಶ್ಯದ ಸಮೇತ ಇನ್ಸ್‍ಪೆಕ್ಟರ್ ಮುನಿಕೃಷ್ಣಗೆ ಆರೋಪಿಗಳ ವಿರುದ್ಧ ದೂರು ನೀಡಿದ್ದರು.

       ಆದರೆ ಮುನಿಕೃಷ್ಣ ಮಾತ್ರ ದೂರು ದಾಖಲಿಸಿಕೊಳ್ಳದೆ ಆರೋಪಿಗಳನ್ನ ಕರೆಸಿ 7 ಲಕ್ಷ ಹಣ ಪಡೆದು ಪ್ರಕರಣವನ್ನು ಮುಚ್ಚಿಹಾಕಿದ್ದಾರೆಂದು ಆರೋಪಿಸಿ ಜೆಮ್ಸ್ ಆಯುಕ್ತಗೆ ದೂರು ನೀಡಿದ್ದಾರೆ.ಈ ಹಿಂದೆ ಕಮ್ಮನಹಳ್ಳಿಯಲ್ಲಿ ಸ್ನೋಕರ್ ದಂಧೆ ನಡೆಸುತ್ತಿದ್ದ ಇಸ್ಮಾಯಿಲ್ ಎಂಬಾತನಲ್ಲಿ 1 ಲಕ್ಷ ಹಣಕ್ಕೆ ಡಿಮ್ಯಾಂಡ್ ಇಟ್ಟು ಸುಮಾರು 30 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದು ಮುನಿಕೃಷ್ಣ ಅಮಾನತಾಗಿದ್ದರು. ಬಳಿಕ ಚಿಕ್ಕಬಳ್ಳಾಪುರದ ಸ್ಪೆಷಲ್ ಬ್ರಾಂಚ್‍ಗೆ ವರ್ಗಾವಣೆ ಮಾಡಲಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link