ಹುಳಿಯಾರು
ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಳಿಯಾರಿನ ಬೆಸ್ಕಾಂ ಕಚೇರಿಯ ಮುಂಭಾಗದ ಮನೆಯೊಂದರ ಬಳಿ ನಡೆದಿದೆ.ಹೊಸದುರ್ಗ ತಾಲ್ಲೂಕು ದೊಡ್ಡಹೊನ್ನಳ್ಳಿ ಗ್ರಾಮದ ತಿಪ್ಪೇಸ್ವಾಮಿ (35) ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ. ಈತ ತಾನುಟ್ಟಿದ್ದ ಪಂಚೆಯಿಂದ ಇಲ್ಲಿನ ಗಂಟೆ ಹೂವಿನ ಮರಕ್ಕೆ ನೇಣು ಬಿಗಿದು ಸಾವನ್ನಪ್ಪಿದ್ದಾನೆ.
ಮೃತರಿಗೆ ಓರ್ವ ಪತ್ನಿ ಮೂವರು ಮಕ್ಕಳಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.