ತುಮಕೂರು
ವಿಶ್ವವಿದ್ಯಾನಿಲಯ ಕೌಶಲ್ಯಾಬಿವೃದ್ದಿ ಕೇಂದ್ರದ ವತಿಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ‘ಸ್ವ ವಿವರ ರಚನೆ ಮತ್ತು ಸಂದರ್ಶನ ಸಿದ್ದತೆ’ ಕುರಿತು ಮೂರು ದಿನಗಳ ಕಾರ್ಯಗಾರವನ್ನು ಪರಿಕ್ಷಾಂಗ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು ಕಾರ್ಯಗಾರವನ್ನು ಉದ್ಘಾಟಿಸಿದ ತುಮಕೂರು ವಿಶ್ವವಿದ್ಯಾನಿಯದ ಕುಲಪತಿಗಳಾದ ಪ್ರೊ.ವೈ.ಎಸ್.ಸಿದ್ದೇಗೌಡರವರು ವಿಶ್ವವಿದ್ಯಾನಿಯವು ವಿದ್ಯಾರ್ಥಿಗಳ ಸರ್ವೋತೋಮುಖ ಅಭಿವೃದ್ಧಿಗೆ ನಿತ್ಯ ಶ್ರಮಿಸುತ್ತಿದ್ದು ವಿದ್ಯಾರ್ಥಿಗಳನ್ನು ಈ ಸಮಾಜಕ್ಕೆ ಕೌಶಲ್ಯ ಮತ್ತು ಜ್ಞಾನ ಭರಿತ ಸಂಪತ್ತನ್ನಾಗಿ ಮಾರ್ಪಡಿಸಿ ಕೊಡುಗೆಯಾಗಿ ನೀಡುವ ಸಂಕಲ್ಪವನ್ನು ಮಾಡಿದ್ದೇವೆ.
ಅದಕ್ಕಾಗಿ ಸ್ಪಾರ್ದಾತ್ಮಕ ಯುಗದಲ್ಲಿ ಯಶಸ್ಸು ಸಾದಿಸಲು ಬಹುಭಾಷ ಮತ್ತು ವ್ಯಕ್ತಿತ್ವ ವಿಕಸನ ಕೌಶಲ್ಯಗಳು ಅತ್ಯಗತ್ಯ, ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಜಗತ್ತಿನಾದ್ಯಂತ ಸ್ಪರ್ಧೆಗೆ ಇಳಿದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮತ್ತು ಕೀರ್ತಿಗಳಿಸಲು ಹೆಚ್ಚು ಕೌಶಲ್ಯ ಭರಿತ ಜ್ಞಾನವನ್ನು ಹೊಂದಿರಬೇಕಾಗುತ್ತದೆ.ವ್ಯಕ್ತಿತ್ವ ವಿಕಸನ ಮತ್ತು ಕಲಿಕಾ ದಾರಣ ಸಾಮಥ್ರ್ಯ ಕುಂಠಿತವಾಗಲು ಆಧುನಿಕ ಜೀವನ ಶೈಲಿಯ ತಂತ್ರಜ್ಞಾನವು ಕೂಡ ಕಾರಣವಾಗಿದ್ದು, ಅವಶ್ಯಕತೆಗೆ ತಕ್ಕಂತೆ ತಂತ್ರಜ್ಞಾನ ಅವಲಂಬಿಸಬೇಕು ಹೆಚ್ಚು ಕೌಶಲ್ಯ ಅಭಿವೃದ್ಧಿಗೆ ಒತ್ತು ಕೊಡಬೇಕಾಗುತ್ತದೆ.
ಆಂಗ್ಲ ಭಾಷೆ ಜಾಗತಿಕ ಮಾನ್ಯತೆ ಪಡೆದಿದ್ದು ವೃತ್ತಿ ಪರ ಮತ್ತು ವಯಕ್ತಿಕ ಜೀವನದ ಬೌದ್ದಿಕ ಗುಣಮಟ್ಟವನ್ನು ಅಳೆಯಲು ಭಾಷೆಯು ಕೂಡ ಮಾನದಂಡವಾಗಿರುತ್ತದೆ. ಆದ್ದರಿಂದ ಗ್ರಾಮೀಣ ಸಮುದಾಯದ ವಿದ್ಯಾರ್ಥಿಗಳು ಸಂವಹನ ಕೌಶಲ್ಯಗಳನ್ನು ಹೆಚ್ಚು ಕಲಿಯಬೇಕೆಂದು ಎಂದು ತಿಳಿಸಿದರು. ಮೂರು ದಿನಗಳ ಈ ಕಾರ್ಯಗಾರದಲ್ಲಿ ವಿಶ್ವವಿದ್ಯಾನಿಲಯದ 19 ಸ್ನಾತಕೋತ್ತರ ಅಧ್ಯಯನ ವಿಭಾಗಗಳ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಂತ ಹಂತವಾಗಿ ಇದರ ಸದುಪಯೋಗವನ್ನು ಪಡೆದುಕೊಂಡು ಮುಂದಿನ ವೃತ್ತಿ ಬದುಕಿನ ಯಶಸ್ಸನ್ನು ಸಾಧಿಸಿ ವಿಶ್ವವಿದ್ಯಾನಿಯಕ್ಕೆ ಒಳ್ಳೆಯ ಹೆಸರು ತರಬೇಕೆಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







