ಬೆಂಗಳೂರು :ಪೆಟ್ರೋಲ್ ಬಂಕ್ ಗಳಲ್ಲಿ ಮಾಸ್ಕ್ ಹಾಕಿದರಷ್ಟೇ ಪೆಟ್ರೋಲ್..!

ಬೆಂಗಳೂರು:

      ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಗ್ರಾಹಕರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿದ್ದರೆ ಮಾತ್ರ ಬಂಕ್ ಗಳಲ್ಲಿ ವಾಹನಗಳಿಗೆ ಪೆಟ್ರೋಲ್-ಡೀಸೆಲ್ ನೀಡಲಾಗುತ್ತದೆ. 

     ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಇರುವ ಪ್ರದೇಶಗಳ ಪೆಟ್ರೋಲ್ ಬಂಕ್ ಮಾಲೀಕರು ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ಇಂತಹ ಒಂದು ತೀರ್ಮಾನ ಕೈಗೊಂಡಿದ್ದಾರೆಂದು ತಿಳಿದಿಬಂದಿದೆ. ಈ ನಿಟ್ಟಿನಲ್ಲಿ ಬಂಕ್ ಮಾಲೀಕರು ಮಾಸ್ಕ್ ಧರಿಸಿದ್ದರೆ ಮಾತ್ರ ಪೆಟ್ರೋಲ್-ಡೀಸೆಲ್ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಭಿತ್ತಿ ಫಲಕ ಅಂಟಿಸಿದ್ದಾರೆ. 

     ಪೆಟ್ರೋಲ್-ಡೀಸೆಲ್ ಅಗತ್ಯ ಸೇವಾ ವ್ಯಾಪ್ತಿಗೆ ಬರುವುದರಿಂದ ಆತಂಕದ ನಡುವೆಯೂ ಪೆಟ್ರೋಲ್ ಬಂಕ್ ತೆರೆದು ಸೇವೆ ನೀಡಲಾಗುತ್ತಿದೆ. ರೆಡ್ ಅಲರ್ಟ್ ಇರುವ ಪ್ರದೇಶಗಳ ಪೆಟ್ರೋಲ್ ಬಂಕ್ ಗಳ ಸಿಬ್ಬಂದಿಯ ಸುರಕ್ಷತೆ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲಾ ಬಂಕ್ ಗಳಲ್ಲಿ ಇದನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಸುರಕ್ಷತೆ ದೃಷ್ಟಿಯಿಂದ ಹೇಳಿದರೂ ಕೆಲ ಗ್ರಾಹಕರು ಕೇಳಿಸಿಕೊಳ್ಳುವುದಿಲ್ಲ. ಹೀಗಾಗಿ ರೆಡ್ ಅಲರ್ಟ್ ಇರುವ ಪ್ರದೇಶಗಳಲ್ಲಿ ಮಾತ್ರ ಈ ಮಾಸ್ಕ್ ಕಡ್ಡಾಯ ಎಂದು ಸೂಚಿಸಲಾಗಿದೆ ಎಂದು ಬೆಂಗಳೂರು ಪೆಟ್ರೋಲ್ ಡೀಲರ್ ಅಸೋಸಿಯೇಷನ್ ಅಧ್ಯಕ್ಷ ಡಾ.ಬಾಲಾಜಿ ಹೇಳಿದ್ದಾರೆ.
 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap