ಮಧುಗಿರಿ :
322 ಗ್ರಾಮಗಳಿಗೆ ಇರುವುದೊಂದೆ ಆಂಬುಲೈನ್ಸ್ ತುರ್ತು ಸೇವೆ ಒದಗಿಸುವುದು ಕಷ್ಟಕರ ಸರ್ಕಾರಕ್ಕೆ ಮನವಿ ಹೋದರೂ ಸ್ಪಂದನೆ ಇಲ್ಲ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ
ಐಡಿಹಳ್ಳಿ ಹೋಬಳಿಗೆ ಒಂದು ಅಂಬುಲೈನ್ಸನ್ನು ತಾಲ್ಲೂಕು ಆರೋಗ್ಯಧಿಕಾರಿ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಲ್ಕೂ ದಿಕ್ಕುಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಹಿನ್ನೆಲೆಯಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತಿದ್ದು ಹಾಗೂ ಗ್ರಾಮೀಣ ಭಾಗದಲ್ಲಿ ಹೆರಿಗೆ ಹಾವು ಕಡಿತ ಮತ್ತಿತರ ತುರ್ತು ಆರೋಗ್ಯ ಸಂಧರ್ಭದಲ್ಲಿ ಆರೋಗ್ಯ ಕವಚ ಯೋಜನೆಯಡಿಯಲ್ಲಿ ಐದು ಹೋಬಳಿಗೂ ಒಂದೇ ಒಂದು ಆಂಬುಲೈನ್ಸ್ ಆಮೆಗತಿಯಲ್ಲಿ ತುರ್ತುಸೇವೆ ಒದಗಿಸುತ್ತಿರುವ ವಾತವರಣವನ್ನು ತಾಲ್ಲೂಕಿನಲ್ಲಿ ಕಾಣಬಹುದಾಗಿತ್ತು.
ಈಗಾಗಲೇ ತಾಲ್ಲೂಕಿನಲ್ಲಿ ಒಟ್ಟಾರೆಯಾಗಿ ಎರಡು 108 ವಾಹನ ಹಾಗೂ ನಗುಮಗು ವಾಹನ ನಾಗರೀಕ ಸೇವೆಗೆ ಸಜ್ಜಾಗಿವೆ. 5 ಹೋಬಳಿಗಳಲ್ಲಿ ಕಸಬಾ ಹಾಗೂ ಐಡಿಹಳ್ಳಿ ಹೋಬಳಿಯಲ್ಲಿನ ಜನರಿಗೆ ಇಂದಿನಿಂದ 108 ಅಂಬುಲೈನ್ಸ್ ದೊರೆಯಲಿದೆ.
ದೊಡ್ಡೇರಿ, ಮಿಡಿಗೇಶಿ, ಪುರವರ ಹೋಬಳಿಯ ಆಸ್ಪತ್ರೆಗಳಿಗೆ 108 ತುರ್ತು ಸೇವಾ ವಾಹನ ಸೌಲಭ್ಯ ಒದಗಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗ ಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ