ಪ್ರೇಮ ವೈಫಲ್ಯದಿಂದ ಪಿಎಚ್‌ಡಿ ವಿದ್ಯಾರ್ಥಿ ಸಾವು..!

ಬೆಂಗಳೂರು

   ಪ್ರೇಮ ವೈಫಲ್ಯದಿಂದ ಯಲಹಂಕದ ಗಾಂಧಿ ಕೃಷಿ ವಿಶ್ವವಿದ್ಯಾಲಯದ (ಜಿಕೆವಿಕೆ) ಸಂಶೋಧನಾ ವಿದ್ಯಾರ್ಥಿನಿ (ಪಿಎಚ್‌ಡಿ) ಪ್ರಸನ್ನ ತ್ರಿಪಾಠಿ ಅವರು ನೇಣಿಗೆ ಶರಣಾಗಿರುವ ಧಾರುಣ ಘಟನೆ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.

    ಉತ್ತರ ಪ್ರದೇಶ ಮೂಲದ ಪ್ರಸನ್ನ ತ್ರಿಪಾಠಿ (25) ಅವರು ಜಿಕೆವಿಕೆಯಲ್ಲಿ ಡಾಕ್ಟರೇಟ್ ಸಂಶೋಧನಾ ವಿದ್ಯಾರ್ಥಿ ಯಾಗಿದ್ದಾರೆ ಕೊಡಿಗೆಹಳ್ಳಿಯ ಕೆನರಾ ಬ್ಯಾಂಕ್‌ಲೇಔಟ್‌ನ ಮಾರುತಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.ಪ್ರಸನ್ನ ತ್ರಿಪಾಠಿ ಅವರ ಜೊತೆಯಿದ್ದ ಸಹಪಾಠಿ ತಮಿಳುನಾಡಿನ ಡಾಕ್ಟರೇಟ್ ವಿದ್ಯಾರ್ಥಿ ಮೂರು ದಿನಗಳ ಹಿಂದೆ ಊರಿಗೆ ಹೋಗಿದ್ದರು.

    ಕಾಲೇಜಿಗೆ ರಜೆ ಇದ್ದುದ್ದರಿಂದ ಮನೆಯಲ್ಲಿ ಉಳಿದುಕೊಂಡಿದ್ದ ಪ್ರಸನ್ನ ತ್ರಿಪಾಠಿ ರಾತ್ರಿ 10 ರವೇಳೆ ನೇಣಿಗೆ ಶರಣಾಗಿದ್ದಾರೆ. ಇವರಿಬ್ಬರು ಸಹ ಜೀವನ ನಡೆಸುತ್ತಿರುವ ಮಾಹಿತಿ ಇದ್ದು ಇಬ್ಬರ ನಡುವಿನ ಉಂಟಾದ ಜಗಳದಿಂದ ಪ್ರಸನ್ನ ತ್ರಿಪಾಠಿ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ.

    ಆತ್ಮಹತ್ಯೆಗೂ ಮುನ್ನ ಪ್ರಸನ್ನ ತ್ರಿಪಾಠಿ ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದಿಟ್ಟಿದ್ದು ಆಕೆಗೆ ಜೊತೆಗೆಯಿದ್ದ ತಮಿಳುನಾಡು ಮೂಲದ ವಿದ್ಯಾರ್ಥಿಯನ್ನು ಕರೆಸಿ ಮಾಹಿತಿ ಪಡೆಯಲಾಗುತ್ತಿದೆ, ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link