ವರಾಹಗಳ ವರಾತಕ್ಕೆ ಬ್ರೇಕ್

ಹೊನ್ನಾಳಿ:

       ಹಂದಿಗಳ ಮಾಲೀಕರು ನಿಗದಿತ ಅವಧಿಯೊಳಗೆ ಹಂದಿಗಳನ್ನು ಪಟ್ಟಣದಿಂದ ಹೊರಗೆ ಸಾಗಿಸದಿದ್ದರೆ ಪಪಂ ವತಿಯಿಂದಲೇ ಸಾಗಾಟ ಮಾಡಲಾಗುತ್ತದೆ ಎಂದು ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ ಎಚ್ಚರಿಸಿದರು.ಪಟ್ಟಣದಲ್ಲಿ ಗುರುವಾರ ಹಂದಿಗಳನ್ನು ಹಿಡಿದು ಸಾಗಾಟ ಮಾಡಿದ ಬಳಿಕ ಅವರು ಮಾತನಾಡಿದರು.

       ಹಂದಿಗಳ ಸಂಖ್ಯೆಯಲ್ಲಿನ ವಿಪರೀತ ಹೆಚ್ಚಳದಿಂದಾಗಿ ಹಲವಾರು ಮಾರಣಾಂತಿಕ ರೋಗಗಳು ಹರಡುತ್ತವೆ. ಚಿಕುನ್‍ಗುನ್ಯಾ, ಮೆದುಳುಜ್ವರ ಸೇರಿದಂತೆ ಅನೇಕ ರೋಗಗಳು ಹರಡುತ್ತವೆ. ಅಲ್ಲದೇ, ಹಂದಿಗಳ ಸಂಖ್ಯೆಯಲ್ಲಿ ಆಗುತ್ತಿರುವ ಹೆಚ್ಚಳದಿಂದಾಗಿ ಪಟ್ಟಣದಲ್ಲಿ ಜನ-ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ವಿವಿಧೆಡೆಯ ಜನವಸತಿ ಪ್ರದೇಶಗಳಲ್ಲಿ ಮಕ್ಕಳಿಗೂ ತೊಂದರೆ ಆಗುತ್ತಿದೆ. ಈ ಬಗ್ಗೆ ಅನೇಕ ದೂರುಗಳು ಬಂದಿರುವ ಕಾರಣ ನಿರ್ದಾಕ್ಷಿಣ್ಯ ಕ್ರಮಕ್ಕೆ ಪಪಂ ಮುಂದಾಗಿದೆ ಎಂದು ವಿವರಿಸಿದರು.

        ಹಂದಿ ಮಾಲೀಕ ಗೋಪಾಲ್ ಮಾತನಾಡಿ, ಪಪಂ ಮುಖ್ಯಾಧಿಕಾರಿಗಳ ನಿರ್ದೇಶನದ ಮೇರೆಗೆ ನಿಗದಿತ ಅವಧಿಯೊಳಗೆ ಹಂದಿಗಳನ್ನು ಹಿಡಿದು ಸಾಗಿಸಲಾಗುವುದು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ವಹಿಸುತ್ತೇವೆ ಎಂದು ಹೇಳಿದರು.
ಪಪಂ ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ಸಿಬ್ಬಂದಿ ನಾಗೇಶ್ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link