ಎಂ ಎನ್ ಕೋಟೆ
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಅಳಿಲಘಟ್ಟ ಮಜರೆ ಯರೇಕಾವಲ್ ನಲ್ಲಿ ಸೋಮವಾರ ಮಧ್ಯಾಹ್ನ ರೈತ ರಾಮಯ್ಯ ಅವರ ಬಣವೆಗೆ ಬೆಂಕಿ ಬಿದ್ದು ಸುಮಾರು 40 ಸಾವಿರ ರೂ. ನಷ್ಠ ಉಂಟಾಗಿದೆ. ಇಂತಹ ಆರ್ಥಿಕ ದುಸ್ಥಿತಿಯಲ್ಲಿ ಬಡವರು ಕಷ್ಟ ಪಟ್ಟು ಬೆಳೆದ ರಾಗಿ ಬಣವೆಗೆ ಬೆಂಕಿ ಬಿದ್ದಿರುವುದರಿಂದ ಬಡ ಕುಟುಂಬ ಬೀದಿಪಾಲಾಗಿದೆ.
ದನಕರುಗಳಿಗೆ ಮೇವು ಇಲ್ಲದಂತಾಗಿದೆ. ಸೋಮವಾರ ಮಧ್ಯಾಹ್ನ ಹಠಾತ್ ಬೆಂಕಿ ಬಿದ್ದಿದ್ದು ಕಿಡಿಗೇಡಿಗಳು ಇಟ್ಟಿದ್ದಾರಾ ಅಥವಾ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆಯೋ ಗೊತ್ತಿಲ್ಲ. ರಾಮಯ್ಯ ಎಂಬುವರ ಕುಟುಂಬ ಬೀದಿಪಾಲಾಗಿದೆ. ಸುಮಾರು 20 ಸಾವಿರ ರೂ ಖರ್ಚು ಮಾಡಿ ರಾಗಿ ಬೆಳೆಯನ್ನು ಬೆಳೆದಿದ್ದು ರಾಗಿ ಬಣವೆಗೆ ಬೆಂಕಿ ಬಿದ್ದಿರುವುದು ಜನ ಮತ್ತು ಜಾನುವಾರುಗಳಿಗೆ ತೊಂದರೆ ಉಂಟಾಗಿದೆ.
ಈ ಪ್ರದೇಶದಲ್ಲಿ ಕಿಡಿಗೇಡಿಗಳು ಈ ಹಿಂದೆ ತಮ್ಮನ ಬಣವೆಗೆ ಬೆಂಕಿ ಇಟ್ಟಿದ್ದು ಈಗ ಅಣ್ಣನ ಬಣವೆಗೆ ಬೆಂಕಿ ಇಟ್ಟಿದ್ದಾರೆ. ಇದು ಬೇಕು ಅಂತ ಮಾಡುತ್ತಿರುವ ಕೃತ್ಯ. ಇಂತಹವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ನೊಂದ ರೈತರಿಗೆ ಪರಿಹಾರ ಕೊಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








