ಲಂಡನ್ ಷೇರು ಮಾರುಕಟ್ಟೆಯ ಪಟ್ಟಿ ಸಮಾರಂಭಕ್ಕೆ ಪಿಣರಾಯಿ ವಿಜಯನ್ .!

ತಿರುವನಂತರಪುರಂ

      ಲಂಡನ್ ಷೇರು ಮಾರುಕಟ್ಟೆಯಲ್ಲಿ ಮೇ 17ರಂದು ಆಯೋಜಿಸಿರುವ ಕೆಐಐಎಫ್ ಬಿ ಮಸಾಲೆಗಳ ಬಾಂಡ್ ಪಟ್ಟಿ ಸಮಾರಂಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಲಿದ್ದಾರೆ.

      ಲಂಡನ್ ಷೇರು ಮಾರುಕಟ್ಟೆ ವತಿಯಿಂದ ವಿಜಯನ್ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದ್ದು, ಬ್ರಿಟನ್ ಪ್ರವಾಸಕ್ಕೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಕಾರ್ಯಾಲಯ ಶೀಘ್ರವೇ ಮನವಿ ಮಾಡಲಿದೆ.

      ಒಂದು ವೇಳೆ ಕೇಂದ್ರ ಸರ್ಕಾರದಿಂದ ಅನುಮತಿ ದೊರೆತರೆ ಲಂಡನ್ ಷೇರು ಮಾರುಕಟ್ಟೆಯ ಲಿಸ್ಟಿಂಗ್ ಸಮಾರಂಭದಲ್ಲಿ ಪಾಲ್ಗೊಳ್ಳುವ ಭಾರತದ ಮೊದಲ ಮುಖ್ಯಮಂತ್ರಿ ವಿಜಯನ್ ಆಗಲಿದ್ದಾರೆ.

      ಕೇರಳ ಸರ್ಕಾರ ಅಧೀನದ ಕೇರಳ ಬಂಡವಾಳ ಹೂಡಿಕೆ ಮೂಲಸೌಕರ್ಯ ಮಂಡಳಿಯ (ಕೆಐಐಎಫ್ ಬಿ) 2150 ಕೋಟಿ ರೂಪಾಯಿ ಮೌಲ್ಯದ ಮಸಾಲೆ ಬಾಂಡ್ ಗಳನ್ನು ಅಂತಾರಾಷ್ಟ್ರೀಯ ಸೆಕ್ಯೂರಿಟಿಸ್ ಮಾರ್ಕೆಟ್ ನ ಪಟ್ಟಿಯಲ್ಲಿ ಸೇರಿಸಲಾಗುವುದು.

       ಈ ಮಧ್ಯೆ ಕೆಐಐಎಫ್ ಬಿ ಮೂಲಕ ಹಣ ಸಂಗ್ರಹಿಸುವ ಕ್ರಮ ಖಂಡಿಸಿರುವ ಕೇರಳ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತಲಾ, ಈ ಮೂಲಕ ಕೆನಡಾದ ಪೆನ್ಷನ್ ಫಂಡ್ ಹಾಗೂ ಹಗರಣದಲ್ಲಿ ಶಾಮಿಲಾಗಿರುವ ಎಸ್ ಎನ್ ಸಿ ಲವಲೀನ್ ಅವರೊಂದಿಗೆ ನೇರ ಸಂಬಂಧ ಹೊಂದುವ ಸಂಕೇತವಾಗಿದೆ ಎಂದು ಆರೋಪಿಸಿದ್ದಾರೆ.

        ಎನ್ ಎನ್ ಸಿ ಲವಲೀನ್, 1995 ರಲ್ಲಿ ಕೇರಳದಲ್ಲಿ ಜಲವಿದ್ಯುತ್ ಹಗರಣದಲ್ಲಿ ಭಾಗಿಯಾಗಿತ್ತು. ಈ ಸಂದರ್ಭದಲ್ಲಿ ವಿಜಯನ್ ಅವರು ಇಂಧನ ಸಚಿವರಾಗಿದ್ದರು ಎಂದು ಚೆನ್ನಿತಲಾ ಆರೋಪಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link