ಗುತ್ತಲ:
ಗುತ್ತಲ ಪಟ್ಟಣದ ಹೊರವಲಯದ ಮೈಲಾರ ರಸ್ತೆಯಲ್ಲಿ ಸಮೀಪದ ತುಂಗಭದ್ರಾ ನದಿಯಿಂದ ಹಾವೇರಿಗೆ ದಿನನಿತ್ಯ ನೀರು ಸರಬರಾಜು ಆಗುವಂತಹ ಪೈಪ್ ಲೈನ್ ಒಡೆದು ಸುಮಾರು 6 ಗಂಟೆಗಿಂತ ಹೆಚ್ಚಿನ ಸಮಯವಾದರು ಪೈಪ್ ಲೈನ್ ಒಡೆದು ಅಕ್ಕ ಪಕ್ಕದ ಜಮೀನಿನಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದ್ದರು ಸಂಬಂಧಿಸಿದ ಅಧಿಕಾರಿಗಳು ಮಾತ್ರ ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳದಿರುವುದನ್ನ ಕಂಡು ಜಮೀನಿನ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.
ದಿನ ಬೆಳಗಾದರೆ ಸಾಕು ಭೂಮಿಯ ಮೇಲೆ ವಾಸಿಸುವಂತ ಮನಿಷ್ಯ,ಪ್ರಾಣಿ,ಪಕ್ಷಿಗಳಿಗೆ ನೀರು ಯಾವ ರೀತಿಯಲ್ಲಿ ಎಷ್ಟು ಪ್ರಮಾಣದಲ್ಲಿ ಅತೀ ಅವಶ್ಯಕ ಎಂಬುದನ್ನು ಕೂಡಾ ಅರಿಯದಂತಾದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು. ಇಗಲೂ ಸಹ ಕುಡಿಯುವ ನೀರಿಗೋಸ್ಕರ ಮನುಷ್ಯರು ತಾವು ವಾಸಿಸುವಂತ ಸ್ಥಳಗಳಿಂದ ಎಷ್ಟೋ ಕಿಲೋ ಮೀಟರ್ ಗಟ್ಟಲೆ ನಡೆದುಕೊಂಡು ಹೋಗಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ .
ವಿಪರ್ಯಾಸ ವೆಂದರೆ ಸಮೀಪದ ಗುತ್ತಲ ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ವಿಳಂಬವಾಗುತ್ತಿದ್ದರು ದೂರದ ಹಾವೇರಿಗೆ ಮಾತ್ರ ಪ್ರತಿ ನಿತ್ಯ ನೀರು ಪೂರೈಸುವ ನಿಟ್ಟಿನಲ್ಲಿ ಕ್ರಮಕೈಗೊಂಡರು ಅದನ್ನು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿಲ್ಲಾ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಬಾಕ್ಸ್.. ಪೋಲಾದ ನೀರಿನಿಂದ ಪಕ್ಕದ ರೇಷ್ಮೆ ಹೋಲದಲ್ಲಿ ಅಪಾರ ಪ್ರಮಾಣದ ನೀರು ಹರಿದು ಬೆಳೆಗೆ ತೆವಾಂಶ ಹೆಚ್ಚಾಗಿ ನಾಶವಾಗುತ್ತದೆ ಎಂದು ಹೋಲದ ಮಾಲಿಕ ಸಂತೋಷ ಗಡದ ತಮ್ಮ ನೋವನ್ನು ಹೇಳಿಕೊಂಡರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
