ಚಿತ್ರದುರ್ಗ
ನಗರದ ರಸ್ತೆಗಳೆಲ್ಲಾ ಹಾಳಾಗಿದ್ದು ಬರೀ ಗುಂಡಿಗಳಿಂದ ತುಂಬಿದ್ದು, ಇದನ್ನು ವಿರೋಧಿಸಿ ಮಂಗಳವಾರ ಜೈ ಹಿಂದ್ ರಕ್ಷಣಾ ವೇದಿಕೆಯ ವತಿಯಿಂದ ಕೆ.ಎಸ್.ಆರ್.ಟಿ.ಸಿ ರಸ್ತೆ ಮುಂಭಾಗದಲ್ಲಿರುವ ರಸ್ತೆಯ ಗುಂಡಿಗಳಲ್ಲಿ ಗಿಡ ನೆಟ್ಟು ರಸ್ತೆ ತಡೆ ನೆಡೆಸಿ ವಿನೂತನ ಪ್ರತಿಭಟನೆ ಮಾಡಲಾಯಿತು.
ಚಿತ್ರದುರ್ಗ ಜಿಲ್ಲೆಯು ಐತಿಹಾಸಿಕ ನಗರವಾಗಿದ್ದು, ಚಿತ್ರದುರ್ಗ ನಗರದಲ್ಲಿ ಶರಣ ಸಂಸ್ಕತಿ ಉತ್ಸವ ನಡೆಯುತ್ತಿದ್ದು, ಈ ಉತ್ಸವಹಕ್ಕೆ ಸಾವಿರಾರು ಜನ ಪ್ರವಾಸಿಗರು ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಈ ಉತ್ಸವಕ್ಕೆ ಬರುತ್ತಾರೆ. ಆದರೆ ಚಿತ್ರದುರ್ಗವು ಹೆಸರಿಗೆ ಮಾತ್ರ ಐತಿಹಾಸಿಕ ಜಿಲ್ಲೆಯಾಗಿದ್ದು, ನಗರದ ರಸ್ತೆಗಳೆಲ್ಲಾ ಹಾಳಾಗಿದ್ದು ಬರೇ ಗುಂಡಿಗಳಿಂದ ತುಂಬಿದ್ದು, ಇದರಿಂದ ನಮ್ಮ ಚಿತ್ರದುರ್ಗವು ಅಪಖ್ಯಾತಿಗೆ ಒಳಗಾಗುತ್ತಿದೆ. ನಮ್ಮ ಸಂಘಟನೆಯ ವತಿಯಿಂದ ಎಷ್ಟೋ ಬಾರಿ ರಸ್ತೆ ದುರಸ್ಥಿಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ ಎಂದು ಆರೋಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ