ತುಮಕೂರು
ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ 112ನೇ ಜಯಂತಿ ಅಂಗವಾಗಿ ಸಿದ್ಧಗಂಗಾ ಮಠದಲ್ಲಿ ಯುವ ಇಂಜಿನಿಯರ್ಸ್ ಬಳಗದ ವತಿಯಿಂದ ಸಸಿ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರೀ ಮಠದಲ್ಲಿ ಏಪ್ರಿಲ್ 1 ರಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬಂದ ಭಕ್ತಾದಿಗಳಿಗೆ 1112 ಗಿಡಗಳನ್ನು ವಿತರಿಸಲಾಯಿತು.
ಪರಿಸರ ಸ್ನೇಹಿ ವಾತಾವರಣ ಉಂಟು ಮಾಡುವ ಉದ್ದೇಶದಿಂದ ಯುವ ಇಂಜಿನಿಯರ್ಸ್ ಬಳಗವು ಭಕ್ತಾದಿಗಳಿಗೆ ಸಸಿಗಳ ವಿತರಣೆ ಮಾಡಿತ್ತು. ಗಿಡಮರಗಳನ್ನು ಪೋಷಿಸುವುದರಿಂದ ವಾತಾವರಣದಲ್ಲಿ ಉಂಟಾಗುವ ಪರಿಸರ ಸಂರಕ್ಷಣೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಿಡ ಮರ ಬೆಳೆಸುವತ್ತ ಮುಂದಾಗುವಂತೆ ಕರೆ ನೀಡಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದಿನ ಜನತೆಯಲ್ಲಿ ಪರಿಸರ ಜಾಗೃತಿ ಉಂಟು ಮಾಡುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು. ಟಿ.ಎಂ.ಪವನ್‍ರಾಜ್ ಸೇರಿದಂತೆ ಇತರೆ ಯುವ ಇಂಜಿನಿಯರ್ಸ್‍ಗಳು ಇದರಲ್ಲಿ ಭಾಗವಹಿಸಿದ್ದರು.