ಚಳ್ಳಕೆರೆ
ತಾಲ್ಲೂಕಿನ ಲಕ್ಷಾಂತರ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಿ, ಅವರಿಗೆ ಜ್ಞಾನವನ್ನು ತುಂಬಿ ಸುಂದರ ಬದುಕನ್ನು ಕಲ್ಪಿಸಿಕೊಟ್ಟ ಹಿರಿಮೆ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಯದ್ದು. ಇಂತಹ ಐತಿಹಾಸಿಕ ಸರ್ಕಾರಿ ಶಾಲೆ 75ನೇ ವರ್ಷದ ಪ್ಲಾಟಿನಂ ಜುಬ್ಲಿ ವಾರ್ಷಿಕೋತ್ಸವವನ್ನು ಆಚರಿಸಲು ಸಿದ್ದತೆಗಳನ್ನು ನಡೆಸಿದ್ದು, ಈ ಶಾಲೆಯಲ್ಲಿ ಕಲಿತ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕ ಸಮೂಹ ಈ ಕಾರ್ಯಕ್ರಮಕ್ಕೆ ಸಹಕರಿಸುವಂತೆ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಈ. ಸಂಪತ್‍ಕುಮಾರ್ ವಿನಂತಿಸಿದರು.
ಅವರು, ಮಂಗಳವಾರ ಶಾಲೆಯ ಕಚೇರಿಯಲ್ಲಿ 75ನೇ ವರ್ಷ ಆಚರಣೆ ಹಾಗೂ 1983ನೇ ಸಾಲಿನ ವಿದ್ಯಾರ್ಥಿಗಳು ನೀಡಿದ ಶ್ರೀಗಣೇಶ ವಿಗ್ರಹ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಜೂನ್ 16ರಂದು ಶ್ರೀಗಣೇಶ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ, ಮಾಜಿ ಶಾಸಕ ಡಿ.ಸುಧಾಕರ, ಜಿ.ಬಸವರಾಜಮಂಡಿಮಠ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಶಾಲೆಯ 75ನೇ ವಾರ್ಷಿಕೋತ್ಸವ ಯಶಸ್ಸಿ ಆಚರಣೆಗೆ ಪೂರ್ವ ಭಾವಿ ಸಭೆಯನ್ನು ಸಹ ಅಂದೇ ನಡೆಸಲಾಗುವುದು. ಈ ಶಾಲೆಯಲ್ಲಿ ಕಲಿತ ಎಲ್ಲಾ ಹಳೇಯ ವಿದ್ಯಾರ್ಥಿಗಳು, ಶಿಕ್ಷಕರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಮನವಿ ಮಾಡಿದ್ಧಾರೆ.
ಇಂತಹ ಜನಾಕರ್ಷಣಿಯ ಸರ್ಕಾರಿ ಪ್ರೌಢಶಾಲೆ 75 ವರ್ಷವನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಶಾಲೆಯ ಗೌರವ ಕೀರ್ತಿಯನ್ನು ಸಂರಕ್ಷಿಸಲು ಕಾರಣ ಕರ್ತರಾದ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ, ನಿವೃತ್ತಿ ಶಿಕ್ಷಕರಿಗೂ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು. ಕಳೆದ 1944ರಲ್ಲಿ ಟೌನ್ ಹಾಲ್ ಆಗಿದ್ದ ಈ ಕಟ್ಟದ ತಾಲ್ಲೂಕು ಬೋರ್ಡ್ ಹೈಸ್ಕೂಲ್ ಆಗಿತ್ತು. 1971ರಲ್ಲಿ ಸರ್ಕಾರಿ ಪ್ರೌಢಶಾಲೆಯಾಯಿತು. ನಗರದ ಬಿಸಿನೀರು ಮುದ್ದಪ್ಪ ಕುಟುಂಬ ಈ ಶಾಲೆಗೆ ಜಾಗ ನೀಡಿ ಲಕ್ಷಾಂತರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸಿದ್ದರು.
ನಗರಸಭಾ ಸದಸ್ಯ, 1983ರಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಕೆ.ಸಿ.ನಾಗರಾಜು ಮಾತನಾಡಿ, 1983ರಲ್ಲಿ ನಾನು ಮಕ್ಕಳು ನನ್ನ ಜೊತೆಗೆ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿನ ಅಭ್ಯಾಸ ಮಾಡಿದ್ದೇವೆ. ನಮ್ಮೆಲ್ಲರ ಬದುಕಿಗೆ ಪ್ರಕಾಶಮಾನವಾದ ಬೆಳಕು ನೀಡಿದ ಈ ಶಾಲೆ ಎಂದೂ ಮರೆಯಲು ಸಾಧ್ಯವಿಲ್ಲ. ಇಂತಹ ಶಾಲೆ 75ನೇ ವಾರ್ಷಿಕೋತ್ಸವದತ್ತ ಮುನ್ನಡೆದಿದೆ. ಈ ಸಂಭ್ರಮವನ್ನು ಈ ಪ್ರೌಢಶಾಲೆಯಲ್ಲಿ ಕಲಿತ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ಸಿಗೊಳಿಸಬೇಕೆಂದರು. ಈ ಸಂದರ್ಭದಲ್ಲಿ ವಾಣಿಜ್ಯೋದ್ಯಮಿ ಯತೀಶ್, ಚಾಟೇಡ್ ಅಕೌಂಟೆಟ್ ಪಿ.ಆರ್.ನರಸಿಂಹಮೂರ್ತಿ, ಸುರೇಶ್ ಆಚಾರ್, ಶಿಕ್ಷಕರಾದ ರೇವಣ್ಣ, ಪುಪ್ಪಲತಾ, ಮಂಜುಳಾ, ಕವಿತಮ್ಮ, ನೂರ್‍ಫಾತೀಮಾ ಮುಂತಾದವರು ಇದ್ದರು.