ಸವಣೂರ :
ತಾಲೂಕಾ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ವತಿಯಿಂದ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ ವ್ಹಿ.ಡಿ ಸಜ್ಜನ ಅವರ ಮೂಲಕ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿ ತಾಲೂಕಾ ತಹಶೀಲ್ದಾರ ಕಾರ್ಯಾಲಯದ ಎದುರಿಗೆ ಸಾಂಕೇತಿಕ ಪ್ರತಿಭಟನೆ ಕೈಗೊಂಡು.
ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಕಾರ್ಮಿಕ ಸಂಘದ ಅಧ್ಯಕ್ಷ ಹೇಮಣ್ಣಾ ದೊಡ್ಡಮನಿ ಮಾತನಾಡಿ, ನೋಂದಾಯಿತ ಕಟ್ಟಡ ನಿರ್ಮಾ ಣ ಕಾರ್ಮಿಕರಿಗೆ ಪಿ.ಎಫ್. ಮತ್ತು ಇಎಸ್‍ಐ ಸೌಲಭ್ಯಗಳನ್ನು ನೀಡಬೇಕು. ಕಟ್ಟಡ ಕಾರ್ಮಿಕರಿಗೆ ವಸಿಸಲು ಜಿಲ್ಲೆ ತಾಲೂಕಾ ವ್ಯಾಪ್ತಿಗಳಲ್ಲಿ ಜಮೀನುಗಳನ್ನು ಖರೀದಿಸಿ ಮನೆಗಳನ್ನು ನಿರ್ಮಿಸಿಕೊಡುವದು.
ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 1ನೇ ತರಗತಿಯಿಂದ ಉನ್ನತ್ ಶಿಕ್ಷಣದವರೆಗೆ ಕಡ್ಡಾಯವಾಗಿ ಉಚಿತ ಶಿಕ್ಷಣ ನೀಡಬೇಕು, ಅರ್ಜಿ ಸಲ್ಲಿಸಿದ ಫಲಾನಿಭವಿಗಳ ಮಕ್ಕಳ ಅಂಕಪಟ್ಟಿ ಬದಲಾಗಿ ವ್ಯಾಸಂಗ ಪ್ರಮಾಣ ಪತ್ರದ ಮೇಲೆ ಸಹಾಯಧನ ತಿಂಗಳ ಇಳಗಾಗಿ ನೀಡಬೇಕು.
ಜಿಲ್ಲಾ ಮತ್ತು ತಾಲೂಕ ಮಟ್ಟದಲ್ಲಿ ಮರಳು ಡಿಪೋಗಳನ್ನು ಸ್ಥಾಪಿಸಿ ಉಸುಕು, ಸಲೀಸಾಗಿ ಸಿಗುವಂತೆ ಮಾಡಿ, ಕಾರ್ಮಿಕರಿಗೆ ಕೈಗಳಿಗೆ ಕೆಲಸ ದೊರುಕುವಂತೆ ಮಾಡಬೇಕು. ಸಿಮೇಂಟ್, ಕಬ್ಬಿಣ, ಹಾಗೂ ಪೇಂಟ್ ಇತರೆ ಸಾಮಾಗ್ರಿಗಳು ದಿನೆ ದಿನೆ ಗಗನಕ್ಕೆ ಏರುತ್ತಿರುವದನ್ನು ಕೂಡಲೇ ನಿಯಂತ್ರಿಸಬೇಕು.
ಸಂಘಟನೆಗಳ ನೋಂದಣಿ ಮಾಡಿದ ಕಾರ್ಮಿಕರ ಗುರುತಿನ ಕಾರ್ಡ ನವೀಕರಣವಾದ ಪ್ರೋತ್ಸಾಹ ಧನದ ಹಿಂಬಾಕಿಯನ್ನು ಕೂಡಲೇ ಕೂಡಲೇ ವಿತರಿಸಬೇಕು. 60 ವರ್ಷ ಪೂರೈಸಿದ ಕಾರ್ಮಿಕರಿಗೆ ಮಾಸಾಶನವಾಗಿ 5000 ಸಾವಿರ ನೀಡಬೇಕು. ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಇಬ್ಬರು ಮಕ್ಕಳಿಗೆ ಮದುವೆ ಪ್ರೋತ್ಸಾಹ ಧನವನ್ನು ಕನಿಷ್ಟ 1 ಲಕ್ಷದವರೆಗೆ ಹೆಚ್ಚಿಸಬೇಕು, ಸೆಸ್ ಸಂಗ್ರಹದಲ್ಲಿ ವಂಚನೆಯಾಗುತ್ತಿರುವ ಕಾರಣಕ್ಕಾಗಿ ಕೂಡಲೇ ತನಿಖಾಧಿಕಾರಿಗಳನ್ನು ನೇಮಿಸಬೇಕು,
ಎಐಟಿಯುಸಿ ಮತ್ತು ಇತರೆ ರಾಷ್ಟ್ರೀಯ ಸಂಘಟನೆಗಳ ಪ್ರತಿನಿಧಿಗಳಿಗೆ ಕಡ್ಡಾಯವಾಗಿ ಮಂಡಳಿಯಲ್ಲಿ ಬೋರ್ಡ ಸದಸ್ಯತ್ವ ನೀಡುವದು ಸೇರಿದಂತೆ ಇನ್ನೂ ಹತ್ತು ಹಲವಾರು ಬೇಡಿಕೆಗಳನ್ನು ತ್ವರಿತ ಗತಿಯಲ್ಲಿ ಈಡೇರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ಉಗ್ರ ಪ್ರತಿಭಟನೆ ಮಾಡುವದಾಗಿ ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ.ಡಿ. ಕಾಲೇಬಾಗ, ಜಿಲ್ಲಾ ಸಂಚಾಲಕ ಎನ್.ಎ.ಖಾಜಿ, ಎನ್.ಬಿ.ಮಲ್ಲಾಡದ, ಸಂಘಟನಾ ಕಾರ್ಯದರ್ಶಿ ದುರಗವ್ವ ತಿಮ್ಮಾಪೂರ, ಪ್ರಧಾನ ಕಾರ್ಯದರ್ಶಿ ಆರ್.ಕೆ.ಮರ್ಪಾಜಿ, ಸದಸ್ಯರಾದ ರಪೀಕ ಬಾಡ, ನಜೀರಹ್ಮದ ಮಲ್ಲಾಡ, ಗುತ್ತಿಗೇದಾರ ಬಿ.ಎಂ.ಪಾಟೀಲ, ಅಬ್ದುಲ್ ರಹೀಮಾನ ದಂಡಿನ, ಗೌಸ ಮುಲ್ಲಾ, ಶೇ.ಬ.ಕುರುಬರ ಹಾಗೂ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
