ಮಧುಗಿರಿ :
ನಮ್ಮದು ಗಾಂಧಿ ಗ್ರಾಮವಲ್ಲಾ ಗೂಡ್ಸೆ ಗ್ರಾಮವಾಗಿದ್ದು ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರನ್ನು ಕೊಡುವಂತೆ ಶಾಸಕ ಹಾಗೂ ಪಿಡಿಓಗೆ ಮನವಿ ಮಾಡಿದರೂ ಏನೂ ಪ್ರಯೋಜನವಿಲ್ಲಾ ಸ್ಥಳೀಯ ಜನಪ್ರತಿನಿಧಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲಾ ಕೂಡಲೆ ಗ್ರಾಮಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ಗ್ರಾಪಂ ಮುಂದೆ ಗ್ರಾಮಸ್ಥರು ಪ್ರತಿಭಟಿಸಿದರು.
ತಾಲ್ಲೂಕಿನ ಕಸಬಾ ಹೋಬಳಿ ಮರವೆಕೆರೆ ಗ್ರಾಮದಲ್ಲಿ ಕಳೆದ 20 ದಿನಗಳಿಂದ ಕುಡಿಯುವ ನೀರು ಹರಿಸುತ್ತಿಲ್ಲ ಈ ಹಿಂದೆ ಕುಡಿಯುವ ನೀರಿಗೆ ಪ್ರತಿಭಟಿಸಿದ ಪರಿಣಾಮವಾಗಿ ಕೊಳವೆ ಬಾವಿಯನ್ನು ಕೊರೆಸಲಾಗಿತ್ತು ದನಕರುಗಳಿಗೆ ಕುಡಿಯಲು ನೀರು ಇಲ್ಲದಂತಾಗಿದೆ ಕೆಲ ತಿಂಗಳ ಹಿಂದೆ ಕೊರೆಸಲಾಗಿದ್ದ ಕೊಳವೆ ಬಾವಿಗೆ ಪಂಪು ಮೋಟಾರ್ ಆಳವಡಿಸಲಾಗುವುದು ಎಂದು ಹೇಳಿ ಪಿಡಿಓ ಕಾಲಹರಣ ಮಾಡುತ್ತಿದ್ದಾರೆ ಸಂಜೆಯೊಳಗೆ ಕೊಳವೆ ಬಾವಿ ಸರಿ ಪಡಿಸುವುದಾಗಿ ಹಾಲಿ ಶಾಸಕ ವೀರಭದ್ರಯ್ಯ ಭರವಸೆ ನೀಡಿದ್ದಾರೆ ಏನೂ ಮಾಡೊತ್ತಾರೊ ಇಲ್ಲವೊ ಗೊತ್ತಿಲ್ಲ ಆದರೆ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಕೊಳವೆ ಬಾವಿಯ ಪೈಪ್ ಲೈನ್ ಹೊಡೆದಿದ್ದು ಸುಮಾರು ಟ್ಯಾಂಕರ್ ನಷ್ಟು ನೀರು ಕೆರೆಗೆ ಹರಿದು ಗ್ರಾಮಕ್ಕೆ ನೀರಿಲ್ಲಾದಂತಾಗಿದೆ ಎಂದು ಗ್ರಾಮದ ವಾಸಿ ಲಿಂಗರಾಜು ದೂರಿದರು.
ಗ್ರಾಮಸ್ಥೆ ಕೋಮಲರಾಣಿ ಮಾತನಾಡಿ ಹೊಡೆದಿರುವ ಕೊಳವೆ ಬಾವಿ ಸರಿ ಪಡಿಸುವ ಗೋಜಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೋಗಿಲ್ಲ ಒಂದೂವರೆ ತಿಂಗಳಿನಿಂದ ನೀರಿನ ಸಮಸ್ಯೆ ತಲೆ ಧೋರಿದೆ ಶಾಸಕರ ಗಮನಕ್ಕೆ ತಂದು ಒಂದೂವರೆ ತಿಂಗಳು ಕಳೆದಿದೆ ಆದರೆ ಸಮಸ್ಯೆ ಬಗೆ ಹರಿದಿಲ್ಲ ಪ್ರತಿ ಮೂರು ತಿಂಗಳಿಗೊಮ್ಮೆ ನೀರಿಗಾಗಿ ಪ್ರತಿಭಟನೆ ಹಮ್ಮಿಕೊಳ್ಳುವುದು ಸಾಮಾನ್ಯ ವಾಗಿ ಬಿಟ್ಟಿದೆ ಕೂಡಲೆ ಹೊಡೆದಿರುವ ಪೈಪ್ ಲೈನ್ ರೀಪೇರಿ ಮಾಡಿ ಗ್ರಾಮಕ್ಕೆ ನೀರು ಹರಿಸಬೇಕೆಂದರು.
ಪ್ರತಿಭಟನೆಯಲ್ಲಿ ರತ್ಮಮ್ಮ ಕೋಟಮ್ಮ ರಂಗಮ್ಮ ಶಿವಮ್ಮ ಕೃಷ್ಣಪ್ಪ. ಆಶೋಕ್ ರಾಜೇಂದ್ರ. ರಾಜೇಶ್.ಎಂಓ, ಹರೀಶ್. ಕೇಬಲ್ ಕುಮಾರ್. ಆಶ್ವಥನಾರಾಯಣ, ರಮಾಂಜಿನಪ್ಪ, ಚಿಕ್ಕಮ್ಮ, ಲಕ್ಷ್ಮಮ್ಮ, ಉಮಾದೇವಿ. ಲಿಂಗರಾಜಪ್ಪ ಹಾಗೂ ನೂರಾರು ಗ್ರಾಮಸ್ಥರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ